Tuesday, June 28, 2011

My Clicks: An Engagement Ring


ಗೆಳೆಯನೊಬ್ಬನ ನಿಶ್ಚಿತಾರ್ಥದಲ್ಲಿ ನಾ ತೆಗೆದ ಚಿತ್ರ ಹಾಗು ಅದರ ಮೇಲೊಂದು ಕವನ.

.........................................................


ಉಂಗುರ
======

ಕಂಡಿರಲಿಲ್ಲ ನಾ ಪ್ರೀತಿ ಪ್ರೇಮದ ಗಾಳಿ ಗಂಧ
ಕಂಡಿರಲಿಲ್ಲ ಎಂದೂ ಇಂಥ ಸುಮಧುರ ಸಂಬಂಧ

ಎದುರಿಗಿದ್ದ ಒಲವ ಕಾಣದ ಈ ಅಂಧನ
ಬೆರಳಿಗೆ ಬಿತ್ತಿಂದು ಈ ಉಂಗುರದ ಬಂಧನ

ಬಾಳ ಬೆಳಗುವುದಿನ್ನು ಹೊಳೆಯುವ ಈ ಉಂಗುರ
ಹೊಸ ಅರ್ಥವ ಪಡೆಯುವುದಿನ್ನು ಅವಳ ಹಣೆಯ ಸಿಂಧೂರ

ಮೊಗ್ಗೊಂದು ಅರಳಿ ಹೊಸ ಜಗವ ಕಂಡಂತೆ
ಅರಳಿಹುದು ಮನ ದೊರೆತಿರಲು ಹೊಸ ಜೊತೆ

ಎಂದೋ ಕಂಡ ಕನಸುಗಳ ಹೇಳಿ ಅವಳ ನಗಿಸುವ ತವಕ
ಅವಳೆಂದಳು "ನೋಡುತಿಹರೆಲ್ಲರೂ ಸುಮ್ಮನಿರಿ, ಸಂಜೆಯ ತನಕ!"

================================================================
© Pradeep Rao

22 comments:

  1. sundaravaada photo
    olaviba kavana
    nimma snehitanige perfect gift

    ReplyDelete
  2. "ಮೊಗ್ಗೊಂದು ಅರಳಿ ಹೊಸ ಜಗವ ಕಂಡಂತೆ
    ಅರಳಿಹುದು ಮನ ದೊರೆತಿರಲು ಹೊಸ ಜೊತೆ" ಇಷ್ಟವಾದ ಸಾಲುಗಳು . ಉಂಗುರದ ಚಿತ್ರಕ್ಕೆ ನಿಮ್ಮ ಕವಿತೆ ಚಿತ್ತಾರದಂತೆ ಮೂಡಿಬಂದಿದೆ. ನಿಮ್ಮ ಸ್ನೇಹಿತನಿಗೆ ಒಳ್ಳೆಯ ಉಡುಗೊರೆ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  3. hi..pradeep....superb dear,,,,,camera kai chalaka hagu kavana..eradu super,,,,keep clicking,,,,and writing,,,,
    sathya

    ReplyDelete
  4. "ನೋಡುತಿಹರೆಲ್ಲರೂ ಸುಮ್ಮನಿರಿ, ಸಂಜೆಯ ತನಕ!" ಎಂದು ಓದುವಾಗ ನನ್ನ ಮುಖದಲ್ಲಿ ನಗುವೊಂದು ಹಾದು ಹೊಯಿತು... ಕನಸಿನ ನಡುವಿನಲ್ಲೊಂದು ವಾಸ್ತವ....
    ಚೆನ್ನಾಗಿದೆ.

    ReplyDelete
  5. ಬಾಳ ಬೆಳಗುವುದಿನ್ನು ..............ಸಂಜೆಯ ತನಕ!"
    what a lines sir.... sipmly great....

    ReplyDelete
  6. ಅಕ್ಕರೆಯ ಗುರುಮೂರ್ತಿ ಸಾರ್, ನನ್ನ ಬ್ಲಾಗಲ್ಲಿ ಬಹಳ ದಿನಗಳ ನಂತರ ಸಾಗರದಾಚೆಯ ಇಂಚರ ಕೇಳಿ ಬಹಳ ಸಂತೋಷವಾಯಿತು.. ತುಂಬಾ ಧನ್ಯವಾದಗಳು!

    ReplyDelete
  7. ಪ್ರೀತಿಯ ಬಾಲು ಸಾರ್,

    ಮೊದಲ ಬಾರಿ ನಿಮ್ಮ ಕಾಮೆಂಟುಗಳನ್ನು ಕಂಡು ಬಹಳ ಸಂತೋಷವಾಯಿತು!

    ತುಂಬಾ ಧನ್ಯವಾದಗಳು.. ಹೀಗೆ ಬರುತ್ತಿರಿ.

    ReplyDelete
  8. Hi satya...

    Thanks for taking time to read my poem & commenting.. :)

    ReplyDelete
  9. Thanks Girish.. for your continuos support & encouragement!

    ReplyDelete
  10. Hey Raki.. Thanks a lot buddy :)

    ReplyDelete
  11. ಪ್ರದೀಪ್
    ನನಗೆ ಬಹಳ ಇಷ್ಟವಾದ ಸಾಲುಗಳು,,,ಮತ್ತು ಜೀವನವೆಂದರೆ ರಸಿಕತೆ ಎನ್ನುವುದನ್ನು ಬಿಂಬಿಸುವ ಸಾಲುಗಳು...
    ಎಂದೋ ಕಂಡ ಕನಸುಗಳ ಹೇಳಿ ಅವಳ ನಗಿಸುವ ತವಕ
    ಅವಳೆಂದಳು "ನೋಡುತಿಹರೆಲ್ಲರೂ ಸುಮ್ಮನಿರಿ, ಸಂಜೆಯ ತನಕ!"

    ReplyDelete
  12. ವಾಹ್! ನನಗೆ ನಿಮ್ಮ ಸಾಲು ಇಷ್ಟವಾಯಿತು ಸಾರ್.. "ಜೀವನವೆಂದರೆ ರಸಿಕತೆ.."

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು!

    ReplyDelete
  13. ಫೋಟೋ ತುಂಬಾ ಚೆನ್ನಾಗಿ ಬಂದಿದೆ. ಸೊಗಸಾದ ಕವನ

    ReplyDelete
  14. ದೀಪಸ್ಮಿತಾರವರೇ ಬಹಳ ದಿನದ ನಂತರ ಇಲ್ಲಿಗೆ ಬಂದಿದ್ದೀರಿ. ತುಂಬಾ ಧನ್ಯವಾದಗಳು!

    ReplyDelete
  15. Pradeep Sir,

    Beautiful photo and lovely words with the poem.

    ReplyDelete
  16. Thanks a lot Santosh.. Was missing your comments from few days

    ReplyDelete
  17. ಫೋಟೋ ಹಾಗೂ ಕವನ ಎರಡೂ ತು೦ಬಾ ಚೆನ್ನಾಗಿದೆ.

    ReplyDelete
    Replies
    1. ತುಂಬಾ ಧನ್ಯವಾದಗಳು ಲತಾ ಶ್ರೀಯವರೇ

      ನಿಮ್ಮ ಪ್ರೋತ್ಸಾಹ ಅಭಿಮಾನಕ್ಕೆ ತುಂಬು ಹೃದಯದ ವಂದನೆಗಳು!

      Delete