Tuesday, April 26, 2011

"ಇದೇ ಇದರ ಹೆಸರು" ಮತ್ತು ಸಿಗದ ಹೆಸರುಗಳು..


24th April 2011, Sunday, ನಿಜಕ್ಕೂ ಒಂದು ವಿಶಿಷ್ಟ ಅನುಭವ. ಪ್ರಕಾಶಣ್ಣರ ಎರಡನೇ ಪುಸ್ತಕ "ಇದೇ ಇದರ ಹೆಸರು" ಬಿಡುಗಡೆ ಸಮಾರಂಭ. ಪ್ರಕಾಶಣ್ಣರನ್ನು ಮೊದಲನೆಯ ಬಾರಿ ನೋಡಿ ಮಾತನಾಡಿಸಿದ ಖುಷಿ ಒಂದೆಡೆಯಾದರೆ, ಬರೀ ಕಂಪ್ಯೂಟರ್ ಪರದೆಗೆ ಅಂಟಿಕೊಂಡಂತಿದ್ದ ಬ್ಲಾಗಿಗರ ಸ್ನೇಹ ಮೊದಲಬಾರಿಗೆ ಪ್ರತ್ಯಕ್ಷ ರೂಪ ಪಡೆಯಿತೆಂಬ ಉತ್ಸಾಹ. ನಾನು ಬ್ಲಾಗಿಗರನ್ನು ಭೇಟಿಯಾಗಿದ್ದು ಇದೇ ಮೊದಲಾದ್ದರಿಂದ ಯಾರ ಮುಖ ಪರಿಚಯವೂ ಇರಲಿಲ್ಲ. ಅಲ್ಲಿಗೆ ಬಂದಿದ್ದ ಎಲ್ಲರನ್ನೂ.. ಯಾರು ಯಾರು ಯಾವ ಯಾವ ಬ್ಲಾಗಿನವರು ಎಂದು ಗುರುತು ಹಿಡಿಯುವುದೇ ಒಂದು ಮೋಜಿನ ಆಟವಾಗಿತ್ತು.. "ಸಾರ್ ನೀವಾ... ಹೇಗಿದ್ದೀರ?" ಎಂಬ ಮಾತಿನಿಂದ ಮೊದಲಾಗಿ ಬ್ಲಾಗಿನಲ್ಲಿ ಪ್ರತಿಯೊಬ್ಬರೂ ಎಂದೋ ಹಾಕಿದ್ದ ಲೇಖನವೋ, ಕಥೆಯೋ, ಫೋಟೋವೋ.. ನೆನಪಿಸಿ ಅದರ ಬಗ್ಗೆ ತಮಾಷೆ ಮಾಡುವವರೆಗೂ ಮಾತು ಸಾಗಿತ್ತು.

ಇದು ನನ್ನ ಹಾಗು ಪ್ರಕಾಶಣ್ಣನವರ ಮೊದಲ ಭೇಟಿ. ಮೊದಲು ನೋಡಿದಾಗ ಇನ್ನು ಸಮಾರಂಭ ನಡೆಯುತ್ತಿತ್ತು. ಅವರು ಬಿಜ಼ಿಯಾಗಿ ಓಡಾಡುತ್ತಿದ್ದರು. ಮಾತನಾಡಿಸಬೇಕು ಅಂದುಕೊಂಡೆ. ಅವರು ದೊಡ್ಡವರು.. ನಾನು ಮಾತನಾಡಿಸಲು ಹೋಗಿ ಅವರ ಕೆಲಸಗಳಿಗೆ ಅಡ್ಡಿಯನ್ನುಂಟು ಮಾಡುವುದು ಬೇಡ ಎಂದುಕೊಂಡು ಸುಮ್ಮನಾದೆ. ಆದರೆ ಕಾರ್ಯಕ್ರಮದ ನಂತರ ಅವರು ಹೊರಗೆ ಸಿಕ್ಕಾಗ "ನಮಸ್ಕಾರ ಸಾರ್" ಎಂದೆ ಅಷ್ಟೆ.. ಅವರೇ ನನ್ನನು "ಪ್ರದೀಪ್ ರಾವ್" ಎಂದು ಕರೆದು ಗುರುತಿಸಿದರು. ಬಹಳ ಸಂತೋಷವಾಯಿತು.ಪ್ರಕಾಶಣ್ಣರನ್ನು ಮೊದಲ ಬಾರಿ ಭೇಟಿಯಾದಾಗಲೇ ಮೆಚ್ಚಿದೆ. ಅವರ ವ್ಯಕ್ತಿತ್ವವನ್ನು ಸರಳವಾಗಿ ಮೂರೇ ಪದಗಳಲ್ಲಿ ಹೇಳಬೇಕೆಂದರೆ ಅವರೊಬ್ಬ ಸ್ನೇಹಜೀವಿ.. ಭಾವಜೀವಿ.. ಹಾಸ್ಯಜೀವಿ.ಸಮಾರಂಭದ ಮುಖ್ಯ ಅತಿಥಿ ಹಾಸ್ಯನಟ ಕೋಮಲ್‍ರವರ ಜೊತೆಗೆ ನಮ್ಮ "ಪಕ್ಕುಮಾಮ"


ಅಲ್ಲಿ ದೊಡ್ಡ ದೊಡ್ಡ ಕ್ಯಾಮೆರಾಗಳ ಭರಾಟೆ ಜೋರಾಗಿತ್ತು!


ಅದ್ಭುತ ಛಾಯಾಚಿತ್ತಾರಗಳಿಂದ ಮೋಡಿ ಮಾಡಿದ ದಿಗ್ವಾಸ್ ಹೆಗ್ಡೆ. ಪುಸ್ತಕದ ಮುಖಪುಟ ಚಿತ್ರ ಇವರ ಕೊಡುಗೆ.
ಅವರ ಬ್ಲಾಗ್- "ಚಿತ್ರಪಟ" http://chithrapata.blogspot.com

ನಾನು ದಿಗ್ವಾಸ್‍ರವರೂ ನಮ್ಮೆಲ್ಲರೊಡನೆ ಫೋಟೋದಲ್ಲಿ ಬೀಳಲಿ ಎಂದು Group Photoಗೆ ಬನ್ನಿ ಎಂದು ಕರದೆ. ಆದರೆ ಅವರು ಫೋಟೋ ತೆಗೆಯಲು ಕರೆಯುತ್ತಿದ್ದಾರೆ ಎಂದು ತಿಳಿದುಕೊಂಡು ಫೋಟೊ ತೆಗೆಯುತ್ತಾ ಕ್ಯಾಮೆರಾ ಹಿಂದೆಯೇ ಉಳಿದುಕೊಂಡರು..!

ಅಂದು ಸಮಾರಂಭದಲ್ಲಿ ನೂರಾರು ಜನ ಸಹೃದಯರನ್ನು ನೋಡಿದೆ. ಭೇಟಿಯಾಗಿ ಪರಿಚಯ ಮಾಡಿಕೊಂಡೆ. ದಿನವೂ ಬ್ಲಾಗ್‍ಗಳನ್ನು ನೋಡಿ ಓದುವ ನನಗೆ ಅಲ್ಲಿ ಬಂದಿದ್ದ ಎಲ್ಲ ಒಳ್ಳೆ ಬ್ಲಾಗಿಗರ ಮತ್ತು ಅವರ ಬ್ಲಾಗುಗಳ ಪರಿಚಯ ಮಾಡಿಕೊಳ್ಳುವ ಆಸೆಯಿತ್ತು. ಅಲ್ಲಿ ನೆರೆದಿದ್ದ ಅನೇಕ ಬರವಣಿಗೆಗಾರರ ಬ್ಲಾಗಿನ ಬಗ್ಗೆ ತಿಳಿದುಕೊಂಡೆ. ಆದರೆ ಇನ್ನು ಕೆಲವರು ಒಳ್ಳೆ ಒಳ್ಳೆ ಲೇಖಕರ ಪರಿಚಯ ಹಾಗು ಅವರ ಬ್ಲಾಗಿನ ಪರಿಚಯ ಗಡಿಬಿಡಿಯಲ್ಲಿ ಕೈ ತಪ್ಪಿ ಹೋಯಿತು ಎನ್ನಿಸಿತು.. ಅದಕ್ಕೆ ನನ್ನ ಬ್ಲಾಗಿನಿಂದಲೇ ಪ್ರಯತ್ನ ಮಾಡುತ್ತಿದ್ದೇನೆ. ಫೋಟೋ ಗಳ ಮೂಲಕ ನನಗೆ ಗೊತ್ತಿರುವವರ ಹಾಗು ಅವರ ಬ್ಲಾಗಿನ ಪರಿಚಯ ನಿಮಗೆ ಮಾಡಿಸುತ್ತೇನೆ. ನನಗೆ ಗೊತ್ತಿಲ್ಲದವರ ಬಗ್ಗೆ ನಿಮಗೆ ಗೊತ್ತಿದ್ದರೆ ನೀವು ಅವರ ಪರಿಚಯ ಹಾಗು ಬ್ಲಾಗ್ ವಿಳಸವನ್ನು ನನಗೆ ತಿಳಿಸಿ

PLEASE FILL UP THE BLANKS:
PHOTO-1From left to right:
1> PARAANJAPE K.N. - "ಜೀವನ್ಮುಖಿ" - http://nirpars.blogspot.com/
2> Balu Subbu - "ನಿಮ್ಮೊಳಗೊಬ್ಬ ಬಾಲು" - http://nimmolagobba.blogspot.com/
3> Gubbachci Satish - "ಗುಬ್ಬಚ್ಚಿ ಸತೀಶನ ಚಿಲಿಪಿಲಿ" - http://nallanalle.blogspot.com/
4> ಯಾರವರು?


PHOTO-2

ಇವರು "ಮಾನಸರಂಗ" ಬ್ಲಾಗಿನ ವಾಣಿಶ್ರೀಯವರಂತೆ ಕಂಡರು. ಹೌದೆ ಅಲ್ಲವೇ ತಿಳಿಸಿ?http://vanishrihs.blogspot.com


ದೆಹಲಿಯಿಂದ ಬಂದ ಸೀತಾರಾಮ ಕೆಮ್ಮಣ್ಣು‍ರವರು
ಅವರ ಬ್ಲಾಗ್ - "ಒಂಚೂರು ಅದು! ಇದು!" -
http://nannachutukuhanigavanagalu.blogspot.comಆಧ್ಯಾತ್ಮಿಕ ಹಾಗು ಸಾತ್ವಿಕ ವಿಚಾರಗಳುಳ್ಳ ಉತ್ತಮ ಲೇಖನಗಳ ಬ್ಲಾಗ್ "ನಿಮ್ಮೊಡನೆ ವಿ.ಆರ್. ಭಟ್"ನ ವಿಷ್ಣು ಭಟ್‍ರವರು.
ಅವರ ಬ್ಲಾಗ್-http://nimmodanevrbhat.blogspot.comPHOTO-3


From left to right:

1> Ashok Shetty Kodlady - "ಕುಶಿ" - http://ashokkodlady.blogspot.com
2> ಯಾರವರು?
3> ಯಾರವರು?
4> Shivprakash - "ನೆನಪಿನ ಪುಟಗಳು" - http://urshivabmf.blogspot.com
5> Gubbachci Satish - "ಗುಬ್ಬಚ್ಚಿ ಸತೀಶನ ಚಿಲಿಪಿಲಿ" - http://nallanalle.blogspot.com/
6> Girish S. - "ಗಿರಿ-ಶಿಖರ" - http://giri-shikhara.blogspot.com
7> Nagraj K. - "ಪೆನ್ನುಪೇಪರ್" - http://pennupaper.blogspot.com
8> ನಾನೇ - ಇದೇ ನನ್ನ ಬ್ಲಾಗ್!
9> Real name unknown ಕಾವ್ಯನಾಮ-ದೀಪಸ್ಮಿತ - "ಇನಿದನಿ" - http://ini-dani.blogspot.com/


PHOTO-4

ನಿಂತವರು: (From left to right):

1> ಯಾರವರು?
2> ಯಾರವರು?
3> ಯಾರವರು?
4> ದೊಡ್ಡಮನಿ ಮಂಜುನಾಥ್ - "ಮಂಜು ಕರಗುವ ಮುನ್ನ" - http://manjukaraguvamunna.blogspot.com
5> ಯಾರವರು?
6> ರಾಘವೇಂದ್ರ - ಬ್ಲಾಗ್ ಯಾವುದು?
7> Dinakar Mogeri - "ಮೂಕ ಮನದ ಮಾತು" - http://dinakarmoger.blogspot.com
8> ಯಾರವರು?
9> ಯಾರವರು?
10> Balu Subbu - "ನಿಮ್ಮೊಳಗೊಬ್ಬ ಬಾಲು" - http://nimmolagobba.blogspot.com/
11> ಯಾರವರು?
12> Ashok Shetty Kodlady - "ಕುಶಿ" - http://ashokkodlady.blogspot.com
13> ಯಾರವರು?
14> ಯಾರವರು?
15> ಇವರು ಗೊತ್ತಿಲ್ಲ ಅಂದ್ರೆ ಹೊಡೆತ ಗ್ಯಾರಂಟಿ - Prakash Hegde - "ಇಟ್ಟಿಗೆ ಸಿಮೆಂಟು"
http://ittigecement.blogspot.com
16> ಯಾರವರು?
17> ಯಾರವರು?
18> ಯಾರವರು?
19> ಯಾರವರು?
20> ಯಾರವರು?

ಹಿಂದೆ ಕುಳಿತವರು: (From left to right):

21> ಯಾರವರು?
22> Nagraj K. - "ಪೆನ್ನುಪೇಪರ್" - http://pennupaper.blogspot.com
23> ನಾನೇ - ಇದೇ ನನ್ನ ಬ್ಲಾಗ್!
24> Mahabalagiri Bhat - "ಕರಾವಳಿ ರೈಲು" - http://karavalirail.blogspot.com/

ಮುಂದೆ ಕುಳಿತವರು : (from left to right):

25> ಯಾರವರು?
26> Shivprakash - "ನೆನಪಿನ ಪುಟಗಳು" - http://urshivabmf.blogspot.com
27> Girish S. - "ಗಿರಿ-ಶಿಖರ" - http://giri-shikhara.blogspot.com
28> ಯಾರವರು?

========================================================================
ಇಲ್ಲಿ "ಯಾರವರು?" ಎಂದು ಪ್ರಶ್ನೆ ಕೇಳಿರುವವರ ಬಗ್ಗೆ ನಿಮಗೆ ಗೊತ್ತಿದ್ದರೆ ದಯವಿಟ್ಟು ಅಲ್ಲಿ ಕೊಟ್ಟಿರುವ ಫೋಟೋ ನಂಬರ್ ಜೊತೆಗೆ ಸೀರಿಯಲ್ ನಂಬರ್ ಹೇಳಿ ತಿಳಿಸಿ.. ಹೀಗೆ ಇಲ್ಲೊಂದು Mini Blog Directory ಉದ್ಭವವಾಗಲಿ! ಜೈ ಹೋ!
========================================================================

ಫೋಟೋ ಕೃಪೆ - ಬಾಲು ಸುಬ್ಬು, ಪ್ರಕಾಶ್ ಹೆಗಡೆ, ಸಂತೋಷ್ ಹೆಗಡೆ ಮತ್ತು ದಿಗ್ವಾಸ್ ಹೆಗಡೆ =======================================================

Monday, April 11, 2011

ಜಪಾನ 11-3-11

Photo courtesy-www.chinasmack.com-

Being a Network Engineer I was among the first people to know about the tragedy of Japan! We got thousands of red alarms on our Japan's Network monitoring system as the high bandwidth core communication links between Japan & USA went down Suddenly all at a time. We watched news in horror as fixing those network issues were not in our hands..This time its in the hands of the almighty Engineer who sits above all of us...

ಮುಗಿಲು ಮುಟ್ಟಿತು ಅಂದು ಅಲ್ಲಿ ಆರ್ತನಾದ,
ಜಗವೇ ಕಣ್ಣು ತುಂಬಿಕೊಂಡು ಸೂಚಿಸಿತು ವಿಷಾದ,
ಪಂಚಭೂತಗಳು ಪಂಚದೈವಗಳು ಎಂದು ಪೂಜಿಸದೆ,
ನಿಸರ್ಗದ ವಿಪರೀತ ಶೋಷಣೆಗೈದ
ತಂತ್ರಙ್ಞಾನದ ಮನುಕುಲಕೆ ಪ್ರಕೃತಿ ನೀಡಿದ ಪ್ರಸಾದ?

ಮಣ್ಣಲ್ಲಿ ಮಣ್ಣಾಗಿ ಹೋಗುತಿರಲು ಊರಿಗೆ ಊರೇ,
ದೇಶವನ್ನೇ ನುಂಗುತಿರಲು ಇಡೀ ಕಡಲ ನೀರೇ,
ಶರಣಾಗತ ರಕ್ಷಕನಾಗದೆ, ಓ ದೇವರೇ,
ನೀ ಧ್ಯಾನದಿ ಕಣ್ಮುಚ್ಚಿ ಕಲ್ಲಾಗಿ ಕುಳಿತೆಯಾ?

ತಿಳಿಯಲಿಲ್ಲಾ ಇನ್ನೂ ಈ ವಿಕೋಪಕ್ಕೆ ಕಾರಣ,
ಅಳಿದುಳಿದವರ ವಂಶವನ್ನಳಿಸಲು ಸೋರಿತು ವಿಕಿರಣ,
ಘೋರ ಇತಿಹಾಸವ ಮರೆತು ನಗುತಿದ್ದ ಜಪಾನ,
ಇಂದು ಮತ್ತೊಮ್ಮೆ ವಿಕಿರಣ ಪೀಡಿತ ತಾಣ!

=================================================

I have always been wondering regarding the fact that most of the worst tragedies of the world have had the number 11 in either date or time or some other statistcs related to the incident.. Just check out.. I did some R&D on internet to check out if what I felt was true.. I seemed to be true!
The trails of deadly number 11 goes like this:


1> Atomic Bombing of Nagasaki by US - 11:02 a.m, August 9, 1945
2> Osama Bin Laden's wrath on World Trade Center - 11-09-2001; The name of the flight which was used for this collision - American Airlines flight number 11
3> Japan's Tsunami, Earthquake, Nuclear leak etc.. - 11-3-11
4> Pakistan's terrorists bomb Taj Hotel Mumbai - 26-11-2009
5> The WORST natural disaster in the history of man kind - China floods That killed about 40,00,000 people occured in november(11th month)/1931
6> 3rd Biggest Natural disaster ever in world history - Bhola cyclone in Bangladesh Killed about 5,00,000 people happened between 7-11-1970 to 13-11-1970
7> 7th Biggest Natural disaster ever in world history - Great Kanto Earthquake in Japan - Killed 1,42,000 people - started at 11:58:44 am on September 1, 1923.

Believe it or not.. I am afraid of dates with the number 11 now and.. Oh my god! everyday's date in this year has got the number 11 in it!

====================================================

Tuesday, April 5, 2011

ನಾ ಸೋತು ಗೆದ್ದ WORLD CUP 2011 !!

Photo courtesy-www.ssportsnews.com
30th March 2011, Wednesday, ಮೊಹಾಲಿಯಲ್ಲಿ ಭಾರತ ಹಾಗು ಪಾಕಿಸ್ತಾನದ ನಡುವೆ ಕ್ರಿಕೆಟ್ ವಿಶ್ವಕಪ್ಪಿನ ಎರಡನೆಯ ಸೆಮಿಫ಼ೈನಲ್ ಪಂದ್ಯವಿತ್ತು. Second shiftನಲ್ಲಿದ್ದ ನಾನು ಸುಮಾರು 1:30 PMಗೆ ಆಫ಼ೀಸು ತಲುಪಿದೆ. ಆಗ ನನಗೆ ಅಲ್ಲಿ ಎಲ್ಲಿಲ್ಲದ ಆಶ್ಚರ್ಯ ಕಾದಿತ್ತು. ನಾವು ದಿನವೂ ಕುಳಿತು ಕೆಲಸ ಮಾಡುತ್ತಿದ್ದ ಕುರ್ಚಿ, ಮೇಜು ಹಾಗು ಕಂಪ್ಯೂಟರ್_ಗಳು ಮಂಗಮಾಯ! ಬದಲಿಗೆ ದೊಡ್ಡ ಹಾಲಿನಂತಿದ್ದ ನಮ್ಮ ಆಫ಼ೀಸಿನ ಮಧ್ಯದಲ್ಲಿಒಂದು ದೊಡ್ಡ ಬಿಳೀ ಪರದೆ, ಎದುರಿಗೇ ಒಂದು Projector ಹಾಗು ಅದರ ಹಿಂದೆ ಸಾಲು ಸಾಲಾಗಿ ಸಿನಿಮಾ ಹಾಲಿನಂತೆ ಜೋಡಿಸಿದ್ದ ಕುರ್ಚಿಗಳು! ಯಾವಾಗಲೂ ನಾವು ಕೆಲಸ ಮಾಡುವುದನ್ನು ಹದ್ದಿನ ಕಣ್ಣಿನಿಂದ ನೋಡುತ್ತಿದ್ದ ನಮ್ಮ ಮ್ಯಾನೇಜರ್ ಆಗಲೇ ಮುಂದಿನ ಸಾಲಿನಲ್ಲಿ ಆಸೀನರಾಗಿದ್ದರು! ನಮ್ಮಂತಹ MNC ಕಂಪನಿಯಲ್ಲಿ ಒಂದು ಕ್ರಿಕೆಟ್ ಮ್ಯಾಚಿಗೆ ಇಷ್ಟು ಮಹತ್ವ ಸಿಗುತ್ತದೆ, ಜನ ಒಂದು ದಿನ ಕೆಲಸ ಮರೆತು ಆಫ಼ೀಸಿನಲ್ಲಿಯೇ ಆರಾಮಾಗಿ ಕುಳಿತು ಕ್ರಿಕೆಟ್ ನೋಡುವಂತಹ ದಿನ ಬರುತ್ತದೆಯೆಂದು ನಾನು ಕನ್ಸಸಿನಲ್ಲೂ ನೆನೆದಿರಲಿಲ್ಲ! ಒಂದು ಮೂಲೆಯಲ್ಲಿ ರಾಶಿ ರಾಶಿ Laptop bagಗಳು ಬಿದ್ದಿದ್ದವು! ಬಂದವರ‍್ಯಾರೂ ತಮ್ಮ Laptop ತೆರೆಯದೆಯೇ ಬ್ಯಾಗ್ ಸಮೇತ ಮೂಲೆಗೆ ಎಸೆದು ಹೋಗಿ ಟಿ.ವಿ. ಮುಂದೆ ಕುಳಿತಿದ್ದರು. ನಾನೂ ಅಂತೆಯೇ ಮಾಡಿದೆ. ಸ್ವಲ್ಪ ಸಮಯದ ನಂತರ ಸಹೋದ್ಯೋಗಿ ಸಂತೋಷ್ ಬಂದು "ಹೇ ಪ್ರದೀಪ್, ನೀವು ಇವತ್ತು ಸಹ ಭಾರತವನ್ನು ಗೆಲ್ಲಿಸಲೇ ಬೇಕು, ಪಾಕಿಸ್ತಾನದ ಮೇಲೆ ಬೆಟ್ ಕಟ್ಟಿ. 50ರೂಪಾಯಿ ಓಕೆನಾ?" ಎಂದರು. ಅವರ ಮಾತು ಕೇಳಿ ಸುತ್ತ ಇದ್ದ ಎಲ್ಲರೂ ಕಕ್ಕಾಬಿಕ್ಕಿಯಾದರು! ಆದರೆ ಒಂದು ವಿಷಯ ಸಂತೋಷ್‍ಗೆ ಮಾತ್ರ ಗೊತ್ತಿತ್ತು. ನಾನು ಇದುವರೆಗೆ ಗೆಲ್ಲುತ್ತದೆ ಎಂದು ಬೆಟ್ ಕಟ್ಟಿದ್ದ ಒಂದೇ ಒಂದು ತಂಡವೂ ಗೆದ್ದಿಲ್ಲ! ಉದಾಹರಣೆಗೆ ಈ ಹಿಂದೆ 24th March 2011, Thursday ಆಸ್ಟ್ರೇಲಿಯಾ ಮೇಲೆ ನಡೆದ Quarter Final ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲ್ಲುವುದೆಂದು ಬೆಟ್ ಕಟ್ಟಿದ್ದೆ. ಆಸ್ಟ್ರೇಲಿಯಾ ಸೋತು ಹೋಯಿತು! ಅವರು ಸೋಲಲೆಂದೇ ನಾನು ಅವರ ಮೇಲೆ ಬೆಟ್ ಕಟ್ಟಿದ್ದೆ! ನಾನು ಗೆಲ್ಲುತ್ತದೆ ಎಂದವರು ಸೋತೇ ಸೋಲುತ್ತಾರೆ! ಇದು ನೆನ್ನೆ ಮೊನ್ನೆಯ ಮಾತಲ್ಲ, ಬಹಳ ಹಿಂದಿನಿಂದ ನಡೆದು ಬಂದ ಪರಂಪರೆ. ನನ್ನ ಹಳೇ ಕಂಪನಿಯಲ್ಲಿ ಎಲ್ಲರೂ ಭಾರತದ ಮ್ಯಾಚಿರುವಾಗಲೆಲ್ಲಾ ತಾವೇ 50 ರೂಪಾಯಿ ಕೊಟ್ಟು ವಿರೋಧಿ ತಂಡ ಗೆಲ್ಲುವುದೆಂದು ನನ್ನ ಕೈಯಲ್ಲಿ ಬೆಟ್ ಕಟ್ಟಿಸುತ್ತಿದ್ದರು! ಆಗೆಲ್ಲ ಭಾರತವೇ ಗೆಲ್ಲುತಿತ್ತು! ಈ ಹಿಂದೆ ಭಾರತ ಸೋತಾಗಲೆಲ್ಲ ನಾನು ಆಫ಼ೀಸಿನಲ್ಲಿರಲಿಲ್ಲ ಅಥವ ಬೆಟ್ ಕಟ್ಟುವುದು ಮರೆತಿದ್ದೆ ಎಂದು ಅಂದುಕೊಳ್ಳಿ! ಆದರೇ ಇದೇ ವಿಶ್ವಕಪ್ಪಿನಲ್ಲಿ 12th March 2011, Saturday ದಕ್ಷಿಣ ಆಫ಼್ರಿಕಾದ ಮೇಲೆ ನಡೆದ League ಪಂದ್ಯದಲ್ಲಿ ಸಚಿನ್ ಮತ್ತು ಸೆಹವಾಗರ ಸ್ಫೋಟಕ ಆರಂಭ ನೋಡಿ ನನ್ನಲ್ಲಿ ದೇಶಾಭಿಮಾನ ಹೆಚ್ಚಾಗಿ, ಧೈರ್ಯ ಮಾಡಿ ನನ್ನ ಪರಂಪರೆ ಮುರಿದೆ, ಅಂದು ಭಾರತವೇ ಗೆಲ್ಲುವುದೆಂದು ಗೆಳೆಯನೊಡನೆ ಬೆಟ್ ಕಟ್ಟಿಯೇಬಿಟ್ಟೆ.
Photo courtesy - Internet

ದುರಾದೃಷ್ಟವಶಾತ್ ಭಾರತ ಆ ಪಂದ್ಯ ಸೋತುಹೋಯಿತು! ವಿಷಯ ತಿಳಿದ ಸ್ನೇಹಿತರೆಲ್ಲರೂ ಅಂದು ಫೋನ್ ಮಾಡಿ ನನ್ನ ಹಿಗ್ಗಾಮಗ್ಗಾ ಉಗಿದರು.. ಇನ್ನು ಮುಂದೆ ಎಲ್ಲಾದರೂ ಭಾರತದ ಮೇಲೆ ಬೆಟ್ ಕಟ್ಟಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು! ಇಂದು ಸಂತೋಷ್ ನನ್ನ ಈ ರೀತಿ ಕೇಳಿದ್ದರ ಹಿಂದೆ ಇಷ್ಟೆಲ್ಲ History ಇತ್ತು! ನಾನು ಸರಿಯೆಂದು ಪಾಕಿಸ್ತಾನವೇ ಗೆಲ್ಲುವುದೆಂದು 50ರೂ ಬೆಟ್ ಕಟ್ಟಿಯೇ ಬಿಟ್ಟೆ. ಪಂದ್ಯ ಶುರುವಾಯಿತು. ಮೊದಲು ಬ್ಯಾಟ್ ಮಾಡಿದ ಭಾರತ 260/9 ಗಳಿಸಿತ್ತು. ಎಲ್ಲರೂ ಸ್ಕೋರ್ ಕಡಿಮೆಯಾಯಿತೆಂದು ಸಪ್ಪೆ ಮೋರೆ ಹಾಕಿಕೊಂಡಿದ್ದರು. ಎರಡನೆಯ ಇನ್ನಿಂಗ್ಸ್ ಶುರುವಾಯಿತು. ಪಾಕಿಸ್ತಾನ ಭರ್ಜರಿ ಆರಂಭ ಪಡೆಯಿತು. ಪಾಕಿಸ್ತಾನ 44/0 ಇದ್ದಾಗ ಸಂತೋಷ್ ನನ್ನ ಬಳಿ ಬಂದು "ಏನಾದ್ರೂ ಮಾಡ್ರಿ, ಭಾರತನ ಗೆಲ್ಲಿಸಿ" ಎಂದರು. ನಕ್ಕು ನಾನು ಮತ್ತೆ Laptopನಲ್ಲಿ ಮಗ್ನನಾದೆ. ಅಂತರ್ಜಾಲದಲ್ಲಿ ಏನು ಹುಡುಕುತ್ತಿದ್ದ ನಾನು ಎರಡು ನಿಮಿಷದ ನಂತರ ಏನೋ ಸಿಕ್ಕಿದವನಂತೆ ಚಿಟಿಕೆ ಹೊಡೆದು "ಆಹ್!" ಎಂದೆ. ಸುತ್ತಮತ್ತ ನಿಂತು ಟಿ.ವಿ. ನೋಡುತ್ತಿದ್ದ ಜನ ನನ್ನೆಡೆಗೆ ತಿರುಗಿದರು. ಗೂಗಲ್‍ನಲ್ಲಿ ಒಂದು ದೊಡ್ಡ ಪಾಕಿಸ್ತಾನದ ಬಾವುಟ ತೆಗೆದು "ಪಾಕಿಸ್ತಾನಕ್ಕೆ ಜಯವಾಗಲಿ" ಎಂದು ಎದ್ದು ನಿಂತು ಒಮ್ಮೆ salute ಮಾಡಿಯೇಬಿಟ್ಟೆ! ನನ್ನ ಸುತ್ತ ಇದ್ದ ಸಹೋದ್ಯೋಗಿಗಳು "ಇವನು ಯಾರೋ Terrorist ಇರಬೇಕು" ಎಂದು ಅನ್ನುತ್ತಾ ನನ್ನ ಕೊರಳ ಪಟ್ಟಿ ಹಿಡಿದು ತದಕುವುದೊಂದು ಬಾಕಿ.. ಅಷ್ಟರಲ್ಲಿ ಅತ್ತ ಎಲ್ಲರೂ ಓ ಎಂದು ಕುಣಿದೆದ್ದರು! "..AND HE'S GONE.. CAUGHT BY YUVRAJ SINGH.." ಎಂದು ಕಿರುಚಾಟದ ಮಧ್ಯೆ ಕೇಳುತಿತ್ತು. ಪಾಕಿಸ್ತಾನದ ಮೊದಲ ವಿಕೆಟ್ ಪತನಗೊಂಡಿತ್ತು!

Photo courtesy - Internet
ಸ್ಟೇಡಿಯಂನಲ್ಲಿದ್ದ ಸೋನಿಯಾ ಗಾಂಧಿ, ಮಗ ರಾಹುಲ್ ಗಂಧಿ, ಆಮೀರ್ ಖಾನ್ ಎಲ್ಲರೂ ಸಂತಸದಲ್ಲಿ ನಗುತ್ತಿದ್ದರು. Bullet-proof ಗಾಜಿನ ಒಳಗೆ ಕುಳಿತ ಭಾರತದ ಪ್ರಧಾನಿ ಮನಮೋಹನ ಸಿಂಗ್ ಮತ್ತು ಪಾಕಿಸ್ತಾನದ ಪ್ರಧಾನಿ ಗಿಲಾನಿಯವರ ಮುಖದ ಮೇಲೆ ಯಾವುದೇ ಭಾವಗಳಿರಲಿಲ್ಲ! ಕೊನೆಗೆ ಪಾಕಿಸ್ತಾನ 231 Allout ಆದಾಗ. ಎಲ್ಲರಿಗೂ ಬಹುಶಃ ನನ್ನ ಕುಚ್ಚೇಷ್ಟೆಯ ಬಗ್ಗೆ ಅರಿವಾಗಿತ್ತು ಅನ್ನಿಸುತ್ತೆ! ಅಂದೂ ನನ್ನ ಉಲ್ಟಾ ಲೆಕ್ಕಾಚಾರ ತಪ್ಪಿರಲಿಲ್ಲ! ಎಲ್ಲೆಡೆ ಭಾರತ ಫ಼ೈನಲ್ಲನ್ನೇ ಗೆದ್ದಷ್ಟು ಸಂಭ್ರಮ!
Photo courtesy- forum.xcitefun.net
2nd April 2011, Saturday, India vs Srilanka Final at Mumbai. ನಮಗೆ ಶನಿವಾರ ರಜವಿಲ್ಲವಾದ್ದರಿಂದ ಆಫ಼ೀಸಿನಲ್ಲಿ ಮತ್ತೆ ಅದೇ ವಾತಾವರಣ ನಿರ್ಮಿತವಾಗಿತ್ತು. ಎಂದಿನಂತೆ ಇಂದೂ ನನ್ನ ಸಹೋದ್ಯೋಗಿ ಕೇತಕಿ ಎಂಬುವವಳೊಂದಿಗೆ ಶ್ರೀಲಂಕಾ ಗೆಲ್ಲುವುದೆಂದು ಬೆಟ್ ಕಟ್ಟಿದ್ದೆ. ಶ್ರೀಲಂಕಾದ 274/6 target ಬೆನ್ನತ್ತಿದ ಭಾರತ ಇನ್ನಿಂಗ್ಸ್‍ನ ಎರಡನೇ ಚೆಂಡಿನಲ್ಲೇ ಸೆಹವಾಗರನ್ನು ಕಳೆದುಕೊಂಡಾಗ ಯಾರಿಗೂ ಉಸಿರೇ ಇರಲಿಲ್ಲ! ಸ್ವಲ್ಪದರಲ್ಲೇ ಸಚಿನ್ ಸಹ ಔಟ್! India - 31/2!
Photo courtesy - specialscricbuzz.com

ಯಾರಿಗೂ ಉಸಿರೇ ಇರಲಿಲ್ಲ.. ಟಿ.ವಿ. ಯಲ್ಲಿ ಸ್ಟೇಡಿಯಂನಲ್ಲಿ ಹಾಜರಿದ್ದ ರಜನಿಕಾಂತ್ ಮತ್ತು ಅವರ ಮಗಳು, ಆಮೀರ್ ಖಾನ್ ಮತ್ತು ಇತರರ ಸಪ್ಪೆ ಮುಖಗಳನ್ನು Zoom ಮಾಡಿ ತೋರಿಸುತ್ತಿದ್ದರು. ಆ ಮೌನದಲ್ಲಿ ಮೂಲೆಯಲ್ಲಿದ್ದ ಪ್ರಿಂಟರ್ ಕರಕರನೇ ಸದ್ದು ಮಾಡುತ್ತಾ ಏನನ್ನೋ ಪ್ರಿಂಟ್ ಮಾಡಲು ಪ್ರಾರಂಭಿಸಿದ್ದು ಜೋರಾಗಿ ಕೇಳುತ್ತಿತ್ತು. ನಾನೇ ಕೊಟ್ಟಿದ್ದ ಪ್ರಿಂಟೌಟ್ ತರಲು ಎದ್ದು ಹೋದಾಗ ಕೆಲವರು ಕುತೂಹಲದಿಂದ ನನ್ನೆಡೆ ನೋಡಿದರು. ಪ್ರಿಂಟೌಟ್ ಯಾರಿಗೂ ಕಾಣದಂತೆ ಮುಚ್ಚಿಕೊಂಡು ಮತ್ತೊಂದು ಕೈಯಲ್ಲಿ ಸೆಲ್ಲೋ ಟೇಪ್ ಹಿಡಿದು, ಬಂದ ನಾನು ಕೂತಿದ್ದ ಮೂಲೆಯ ಗೋಡೆಗೆ ಪರಪರನೇ ಸೆಲ್ಲೋಟೇಪ್ ಹರಿಯುತ್ತಾ ಏನೋ ಅಂಟಿಸಿದೆ. ಕೇತಕಿ ತಿರುಗಿ ನೋಡಿ ಬಿದ್ದುಬಿದ್ದು ನಕ್ಕಳು. ಆಗ ಭಾರತದ ರನ್‍ರೇಟ್ ಹೆಚ್ಚಾಗ ತೊಡಗಿತ್ತು. ಅಂತೂ ಇಂತೂ ಭಾರತ ಕೊನೆಗೆ ಸುಲಭವಾಗಿ 6 ವಿಕೆಟ್‍ನಿಂದ ಜಯಗಳಿಸಿತ್ತು. ಪಂದ್ಯ ಮುಗಿದ ನಂತರ ಎಲ್ಲರೂ ಬಂದು ನೋಡಿದರು.. ನನ್ನ ಪಕ್ಕ ಗೋಡೆಯ ಮೇಲೆ ಶ್ರೀಲಂಕಾದ ಬಾವುಟ ರಾರಾಜಿಸುತ್ತಿತ್ತು.. ಪಕ್ಕದಲ್ಲೇ ನಾನು ಗೆಲುವಿನ ನಗೆ ಬೀರುತ್ತಾ ಕುಳಿತಿದ್ದೆ! ನಾನು ಬಾವುಟಕ್ಕೆ ಕೈ ಹಾಕಿದ ಮೇಲೆ ಆ ತಂಡ ಧ್ವಂಸವಾಗದೆ ಉಳಿದಿದ್ದುಂಟೇ ಮಾರಯ್ರೇ?


"ವಿಜಯೀ ವಿಶ್ವ್ ತಿರಂಗಾ ಪ್ಯಾರಾ..
ಝಂಡಾ ಊಂಚಾ ರಹೆ ಹಮಾರಾ.."Photo courtesy - studywithfun.com


WORLD CUP ಗೆಲ್ಲಲು 6 world cup ಅಂದರೆ 21 ವರ್ಷಗಳು ಕಾದ ಸ"ಚಿನ್ನ್"ರಿಗೆ ಸಂದ ಸೂಕ್ತ ಬಹುಮಾನ!