Wednesday, July 6, 2011

My Clicks: ಮುತ್ತಿನ ಮಳೆಹನಿ




ಮೊದಲ ಮಳೆಯ ಸುವಾಸನೆ ಹರಡಿದೆ ಎಲ್ಲೆಲ್ಲೂ
ಮೊದಲ ಚುಂಬನದ ಪುಳಕಕೆ ಮೂಡಿದೆ ಕಾಮನಬಿಲ್ಲು!

ಬಿಸಿಲಿಗೆ ಬಿರಿದು ಬಯ್ಬಿಟ್ಟಿತ್ತು ಭೂಮಿ
ಇನಿದನಿಯ ಕೇಳಿ ಮೋಡವೂ ಆಯಿತು ಪ್ರೇಮಿ
ತನ್ನಿಯನ ಸ್ಪರ್ಶವ ಬೇಡಲು ಆ ದನಿ
ಮೋಡವು ಮುಟ್ಟಲು ನಾಚಿ...
ಉದುರಿಸಿತು ಮುತ್ತಿನ ಮಳೆಹನಿ!

13 comments:

  1. ಪ್ರಕೃತಿಯ ವಿಸ್ಮಯಗಳಲ್ಲೆಲ್ಲಾ ಯುವ ಮನಸ್ಸಿಗೆ ಪ್ರೇಮಿಯ ಭಾವವೇ ಗೋಚರ! ಕಲ್ಪನೆ ಚೆನ್ನಾಗಿದೆ ಪ್ರದೀಪ್, ಅಭಿನ೦ದನೆಗಳು.

    ReplyDelete
  2. ಪ್ರಭಾಮಣಿ ಮೇಡಮ್.. ಹೊಗಳುತ್ತಿದ್ದೀರೋ ತೆಗಳುತ್ತಿದ್ದೀರೋ ತಿಳಿಯಲಿಲ್ಲ? ಹ್ಹ ಹ್ಹ ಹ್ಹಾ! ಏನೇ ಇರಲಿ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು! ನಿಮಗೆ ಬೇಜಾರಾಗಿದ್ದರೆ ಮುಂದಿನ ಬಾರಿ ವಿಷಯ ಬದಲಿಸುತ್ತೇನೆ.. :)

    ReplyDelete
  3. ಕಾವ್ಯ ನನಗೆ ಅಷ್ಟಕ್ಕಷ್ಟೇ!!!
    ಫೋಟೋ ಚನ್ನಾಗಿದೆ.

    ReplyDelete
  4. ಸುಬ್ರಮಣ್ಯ ಸಾರ್... ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ತಿಳಿಸಿದ್ದೀರಿ... ಧನ್ಯವಾದಗಳು..

    ಬಹಳಷ್ಟು ಜನ ಚೆನ್ನಾಗಿಲ್ಲದಿದ್ದರೂ ತಿಳಿಸಲು ಮುಜುಗರಪಡುತ್ತಾರೆ.. ಈ ರೀತಿಯ ನೇರ ಕಾಮೆಂಟುಗಳಿಂದ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಾಯವಾಗುತ್ತದೆ ಧನ್ಯವಾದಗಳು!

    ReplyDelete
  5. ಪ್ರೇಮ ಕವಿಯ ಕಲ್ಪನೆ ಚನ್ನಾಗಿದೆ ... ಶುಭವಾಗಲಿ

    ReplyDelete
  6. ತೆಗಳಿಕೆಯಲ್ಲ ಪ್ರದೀಪ್ , ನಿಮ್ಮ ಕವನಕ್ಕೆ ನನ್ನ ಮೆಚ್ಚುಗೆ. ಮು೦ದುವರೆಸಿ!

    ReplyDelete
  7. oh ok ok.. dhanyavadagalu madam1

    ReplyDelete
  8. ಒಂದೊಂದು ಪದ, ಒಂದೊಂದು ಕವನ
    ಜೀವನದ ಅನುಭವದ ಹೋರಣ
    ಎಲ್ಲಿ ಮರೆಯಾಗಿತ್ತು ನನ್ನಿಂದ
    ಕುರುಡಾಗಿದ್ದೆನೆ ಇದರಿಂದ

    ಮೈ ಮರೆತು ಓದುತಿರಲು
    ಮನ ಅರಳಿ ಹೂವಾಗಿರಲು
    ಬಯಸಿದೆ ಗೆಳೆತನ
    ನಿಮಗಿದೋ ನನ್ನ ನಮನ



















    ReplyDelete