Saturday, May 29, 2010

ಆಧ್ಯಾತ್ಮಿಕ ಚಿಂತನೆ




ಆಧ್ಯಾತ್ಮಿಕ ಚಿಂತನೆ

ಬದುಕುತಿರಲು ಓ ಮಾನವ,
ಈ ನಶ್ವರ ದೇಹವ ನಂಬಿ
ಜೋಕೆ ತುಳುಕಿ ಹೋದೀತು
ಪಾಪದ ಕೊಡವು ತುಂಬಿ

ಎಂಟು ದಿಸೆಯಲ್ಲೂ ಕಟ್ಟಿಹಾಕಿರಲು
ನಮ್ಮನು ಈ ಲೌಕಿಕ ಬಂಧನ
ವೈರಾಗ್ಯ ಪಡೆಯಲು ಹೋಗುವುದು ಎತ್ತ?
ದಾರಿಯ ತೋರಿ ಕಾಪಾಡು ದೇವ
ಆಧ್ಯಾತ್ಮದ ಬೆಳಕ ಕಾಣರಿಯದ ಅಂಧನ
ನಿನ್ನೆಡೆ ಬಾಗಿರಲಿ ಸದಾ ನನ್ನ ಚಿತ್ತ.

ಕರುಣಿಸಿ ಒಮ್ಮೆ ಅಂತರಂಗ ಶುದ್ಧಿ
ಬಿಡಿಸು ನಾನು-ನನ್ನದೆಂಬ ಬುದ್ಧಿ
ಜೀವವಿರುವ ತನಕ ಜೀವಿಸುವೆವು
ಇನ್ನೊಂದು ಜೀವವ ತಿಂದು
ಮಾಡಿದ ಕರ್ಮಗಳು ತೀರಿದವೆಂದು
ಬಗೆವರು ಗಂಗಾನದಿಯಲ್ಲಿ ಮಿಂದು
ಮುಂದೂಡುತ್ತಿದ್ದರೆ ನಾಳೆ, ನಾಳೆಯೆಂದು
ಆಧ್ಯಾತ್ಮದ ಪಾಠ ಕಲಿಯುವುದು ಎಂದು?

Dont Miss this very meaningful song sung by Dr. Rajkumar

Wednesday, May 19, 2010

ಸ್ವಾತಿ ಮುತ್ತಿನ ಮಳೆ ಹನಿಯೇ...


ಸ್ವಾತಿ ಮುತ್ತಿನ ಮಳೆ ಹನಿಯೇ...

ಸ್ವಾತಿ ಮುತ್ತಿನ ಮಳೆ ಹನಿಯೇ
ಮಾತಾಡು ಒಮ್ಮೆ ಇನಿ ದನಿಯೆ
ಇಂದೂ ನಿನಗಾಗಿ ಕಾದಿದೆ ಇಡೀ ಇಳೆಯೇ
ಎಂದಾದರೂ ಬಿಡುವಾಗಿ ನೀ ಕೆಳಗಿಳಿಯೆ

ಆಗಸದಿ ಹೊಳೆಯುವ ಬೆಳ್ಳಿ ಮೋಡ
ನೀ ಅಡಗಿ ಕೂರುವ ಬೆಚ್ಚನೆಯ ಗೂಡ?
ಅರಿತವರಿರುವಏ ನಿನ್ನ? ನೀನೆಂದೂ ನಿಗೂಢ.
ನೀ ಸಿಗುವೆಯೇನೋ ಎಂದು ನಾನು ಕೂಡ
ಮೋಡ ಹಿಡಿಯ ಹೋಗಿ ಆದೆ ಮೂಢ



ನೀ ಅಂದು ಧರೆಗಿಳಿದಾಗ..
ಗುಡುಗಿತು ಆ ಆಗಸ, ನಡುಗಿತು ಈ ಭೂಮಿ
ಆ ಹನಿಯೊಂದರ ಸ್ಪರ್ಶಕೆ
ಮಿಡಿಯಿತು ಮನದ ಮರುಭೂಮಿ
ನಾನಾದೆ ಆ ಮುತ್ತಿನ ಮಳೆ ಹನಿಯ ಪ್ರೇಮಿ
ನೀ ಮಳೆಯಾಗಿ ಬಂದೆ..
ನಾ ನಿನ್ನಲೇ ಮಿಂದೆ..
ಮುಂದೆ..
ಏರಿ ಬಂದೆ, ತೂರಿ ಬಂದೆ, ನೀನಾಗಿ ಬಂದೆ,
ನನ್ನ ಬಾಳಿಗೆ ಸುನಾಮಿ.



ಈ ಭೂಮಿಯ ಪಾಲಿಗೆ ಸ್ವಾತಿ
ದೂರಾಗಸದಿ ಹೊಳೆವ, ಮಳೆ ತರುವ ನಕ್ಷತ್ರ.
ನಿನ್ನ ಬಯಸಿ ನಾನಾದೆ ಸ್ವಾರ್ಥಿ
ಬರಲಾದೀತೆ ಈ ಭೂಮಿಗೆ ನಿನ್ನ ಹತ್ರ?
ಇಂದೂ ಈ ಭೂಮಿಯ ಸಾಗರದ ಭರ್ತಿ
ಆ ಮುತ್ತಿನ ಮಳೆ ಹನಿಗಳಿಂದ ಮಾತ್ರ.



ಸಪ್ತ ಸಾಗರವನ್ನೇ ತಂದು ಕೊಟ್ಟರೂ
ಆ ಒಂದೇ ಒಂದು ಮಳೆ ಹನಿಯ ನೆನಪು
ಕೊನೆಗೆ ಉಸಿರಿನ ಆಸೆಯೇ ಬಿಟ್ಟರೂ
ಸೂಸುವುದು ಆ ಮೊದಲ ಮಳೆಯದ್ದೇ ಕಂಪು..








Friday, May 14, 2010

The 3 Idiots story





3 Idiots!!!







Still they all say...
Alllllll Izzzzzzzzz Wellllllllllllll....


Tuesday, May 11, 2010

ನನ್ನ ಕನಸು ನನ್ನ ಹಕ್ಕು



ನನ್ನ ಕನಸು ನನ್ನ ಹಕ್ಕು

ನನ್ನ ಊರಲ್ಲಿ ನೀರಿಲ್ಲ
ನೆರಳ ನೀಡುವ ಮರವಿಲ್ಲ
ಆದರೂ ಕನಸುಗಳಿಗೆ ಬರವಿಲ್ಲ

ಸುತ್ತಲೂ ಇರುವುದು ಮರಳುಗಾಡು
ಕನಸಲ್ಲಿ ಕಾಣುವುದು ದಿನವೂ
ಹಚ್ಚಹಸುರಾದ ಮಲೆನಾಡು

ಬದಲಿಸಲಾಗದಿದ್ದರೂ ಜೀವನದ ದಿಕ್ಕು
ಬದಲಾಗದಿದ್ದರೂ ನನ್ನ ಲಕ್ಕು
ಕನಸ ಕಾಣುತ್ತಿರುವುದೇ ನನ್ನ ಹಕ್ಕು