Wednesday, December 30, 2009


....ಮುಗಿಯದು ಮುತ್ತಿನ ಹಾರದ ಕವನ...

ಮೊದಲ ಪುಟಕೂ ಕೊನೆಯ ಪುಟಕೂ ನಡುವೆ ಎನಿತು ಅಂತರ?..ಕನ್ನಡ ನಾಡಿನ 'ಮುತ್ತಿನ ಹಾರ'ದಿಂದ
ಕಳಚಿ ಉದುರಿತು ಎರಡು ಮುತ್ತು
ಇಂದು ಅಭಿನವ ಭಾರ್ಗವ ವಿಷ್ಣು ಮತ್ತು
ನಿನ್ನೆ ನಮ್ಮ ಗಾನ ಗಾರುಡಿಗ ಅಶ್ವತ್ಥು

VISHNU VARDHAN


18th sept 1950 - 30th dec 2009
'ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ...'
ಎಂದು ನುಡಿದಿದ್ದವರಿಗೆ ಸಾಕಾಯಿತೇಕೆ?
ತಲುಪುವ ಮುಂಚೆ ಅರವತ್ತಕ್ಕೆ

ನಮ್ಮ ನಿಮ್ಮೆಲ್ಲರ 'ಕುಚಿಕು ಗೆಳೆಯ'
ತೊರೆದಿಹನಿಂದು ನಮ್ಮ ಕೇಳದೆ ಇಳೆಯ
'ಅಪರಾಧಿ ನಾನಲ್ಲ, ಅಪವಾದ ಎನಗಿಲ್ಲ'
ಎಂದು ನುಡಿದರೂ ಏಕೆ ಈ ವಿಧಿ?
ನಮ್ಮ 'ಆಪ್ತಮಿತ್ರ'ನಿಗೆ..
'ಆಪ್ತರಕ್ಷಕ'ನಾಗುವ ಮುನ್ನ..

'ನೂರೊಂದು ನೆನಪು ಎದೆಯಾಳದಿಂದ'
ಹಾಡಾಗಿ ಬರಲು ಸಾಧ್ಯವಿಲ್ಲ
ಇಂದು ಆನಂದದಿಂದ..
'ಕಥೆಯು ಮುಗಿದೆ ಹೋದರೂ..
ಮುಗಿಯದಿರಲಿ ಬಂಧನ' ಎಂದವರು
ಮುಗಿಸಿಹರು ಇಂದು ಎಲ್ಲಾ ಬಂಧನ
ಏಕೆ ಹೀಗೆ ಮಾಡಿದರೋ
ನಮ್ಮ ಪ್ರೀತಿಯ 'ಯಜಮಾನ'?

'ಈ ಭೂಮಿ ಬಣ್ಣದ ಬುಗುರಿ'
ಎಂದ 'ಮಡಿಕೇರಿ ಸಿಪಾಯಿ'ಯ
ಕಳಿಸಿ ಹೇಳಿಹೆವಿಂದು ವಿದಾಯ

'ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ'
ಎತ್ತಿಹಿಡಿದರು ಸಾರ್ಥಕತೆಯ ಅವರು
ಕನ್ನಡದ 'ಕೋಟಿಗೊಬ್ಬ'ರಾಗಿ ಬಾಳಿ

ಈ ಸಾಲುಗಳು...
ನಮ್ಮ ಅಭಿನವ ಭಾರ್ಗವನಿಗೆ ಅರ್ಪಣೆ
ಕೇಳಿಸದಲ್ಲ ಇನ್ನು
'ಜಯಸಿಂಹ', 'ಸಾಹಸಸಿಂಹ', 'ಸಿಂಹಾದ್ರಿಯ ಸಿಂಹದ' ಘರ್ಜನೆ

ಯುಗ ಯುಗಗಳೇ ಸಾಗಲಿ.. ನಿಮ್ಮ ನೆನಪು ಶಾಶ್ವತ....

Abhiman Studio


Me offering flowers at the cremation place, Abhiman Studio*************************************************************************************************************************************************************C. ASHWATH29th dec 1939 - 29th dec 2009


ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೆ?...

ಬಳೆಗಾರ ಚೆನ್ನಯ್ಯ ಬಂದನು
ಬಂದು ನಿಂದನು, ಎಪ್ಪತ್ತರ ಬಾಗಿಲಿಗೆ,
ನಮ್ಮ ನೋಡಿ ನಕ್ಕನು ಹೊರಗಿಂದ..
ನೋಡಿ ಮುಗುಳ್ನಕ್ಕು ಹೊರಟು ಹೋದನು
ಹಾಗೆಯೇ....

ಬಹುಶಃ ಒಳಗೆ ಬರಲಪ್ಪಣೆ
ದೊರೆಯಲಿಲ್ಲವೋ ಏನೊ..
ದೊರೆಯಿಂದ...

ಗಾನ ಗಾರುಡಿಗನಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ...
Sunday, December 27, 2009

ಗಾಳಿಪಟ


ಜೀವನವಾದರೂ ಧೂಳಿಪಟ
ಬಿಡಲಿಲ್ಲ ನಾನು ನನ್ನ ಹಠ
ಹುಡುಕುತಿರುವೆ ಇನ್ನೂ ಹುಚ್ಚನಂತೆ
ಚಿಕ್ಕಂದಿನಲ್ಲಿ ಕಳೆದುಕೊಂಡ
ಸೂತ್ರ ಹರಿದ ಬಣ್ಣ ಬಣ್ಣದ
ಕನಸಿನ ಗಾಳಿಪಟ!

ಪ್ರಥಮ ಮಿಲನ

ಭೂಮಿಗೆ ತರುವುದು ಬೆಳಗು
ಸೂರ್ಯನ ಪ್ರಥಮ ಕಿರಣ
ನನ್ನ ಬಾಳಿಗೆ ತರುವುದು ಬೆಳಕು
ನಮ್ಮಿಬ್ಬರ ಪ್ರಥಮ ಮಿಲನ!

Wednesday, December 23, 2009

************* ಕೊನೆಯುಸಿರಲೂ ಪ್ರೀತಿ ************


ಕವನದ ಸನ್ನಿವೇಶ: ಇದು ಒಬ್ಬ ದುರಂತ ನಾಯಕ ಹಾಡಿರೋ ಹಾಡು. ಖಾಯಿಲೆ ಒಂದರಿಂದ ನರಳಿ ಸಾಯಲು ಇನ್ನು ಕೆಲವೇ ದಿನಗಳು ಬಾಕಿ ಇರಬೇಕಾದ್ರೆ ಅವನಿಗೆ ಒಬ್ಬಳ ಮೇಲೆ ಪ್ರೀತಿ ಹುಟ್ಟಿ ಬರುತ್ತದೆ. ಆದರೆ ಸಮಯ ಮೀರಿ ಹೊಯ್ತಲ್ಲ ಎಂದು ವ್ಯಥೆ ಪಡುತ್ತಾನೆ.

ಶಾಂತಿ ಇದೆ, ಪ್ರೀತಿ ಇದೆ,
ನನ್ನ ಕನಸಲ್ಲಿ
ಇವನ್ನು ಬಿಟ್ಟು ಎಲ್ಲಾ ಇದೆ
ಈ ಜಗದಲ್ಲಿ..

ಕತ್ತಲಾಗುತ್ತಾ ಬಂದಿತೋ
ಕಾಣುವ ಸಂಶಯ ನಾಳೆ..
ದೇವರು ಗೀಚಿ ಅಳಿಸಿದ
ಬದುಕಿನ್ನೂ ಖಾಲಿ ಹಾಳೆ
ಇದೇಕೆ? ಹೀಗೇಕೆ? ಓಡುವೆ ನನ್ನ ಕಿನ್ನರಿ..
ಬರುವೆನು ನಾನೂ ತಾಳೆ..

ನಿರ್ಧಾರವಾಗಿದೆ ನನ್ನ ವಿಧಿ
ನೀನೇಕೆ ಬಂದೆ ಮೊದಲು
ಹೇಳಲು ಹೋದರೂ ನಿನಗೆಲ್ಲಾ
ಮಾತಲ್ಲಿ ಏಕೋ ತೊದಲು
ಹೋಗುವವರಿರುವರೆ ಯಾರಾದರೂ..
ಅಲ್ಲಿಗೆ ನನ್ನ ಬದಲು?

ಮುಳುಗಿದರೇನು ಆ ಸೂರ್ಯ
ಚಂದಿರ ಬರುವನು ಬಾನಿಗೆ,
ಮುಳುಗಲು ನಾಳೆ ಈ ಬದುಕು..
ಬರುವುದು ಯಾರು ಎಲ್ಲಿಗೆ?
ಬಂದು ನಿಂದು ಹೋದೆ ನಾಲ್ಕು ಕ್ಷಣ
ನಿನ್ನ ಮನದ ಬಾಗಿಲ ಬಳಿಗೆ..

ನೀ ಬರುವ ಸಮಯಕೆ
ತಂಪಾಗಿ ಬೀಸಿದೆ ಗಾಳಿ
ಹೂಗಳು ಹೀಗೆ ನಗುತಿರಲಿ
ಎಂದೂ ನೀನಿರುವಲ್ಲಿ
ನೆನೆಸಿಕೊಂಡರೂ ನಾಳೆ ನೀ ನನ್ನ..
ಓ ಎನುವೆನು ನಾನಲ್ಲಿ..

Nanjangud Trip


The beautiful high rise Gopuram in the temple entrance

Inspired by this very holy place visit & its history I wrote this poem...

****** ನಂಜನಗೂಡು *******

ಒಮ್ಮೆ ಬಂದು ನೋಡು
ಪುಣ್ಯಕ್ಷೇತ್ರ ನಂಜನಗೂಡು
ಕಪಿಲೆಯಲ್ಲಿ ಸ್ನಾನವ ಮಾಡು
ಶ್ರೀಕಂಠನ ಮಹಿಮೆ ಹಾಡು

ನೆಲೆಸಿಹನಿಲ್ಲಿ ನಂಜುಂಡೇಶ್ವರ
ಕೇಳುವುದಿಲ್ಲಿ ಸುತ್ತಲೂ
ಶಂಭೋ.. ಶಂಕರ ಎಂಬ ಸ್ವರ

ಹಿಂದೆ ದೃಷ್ಟಿ ಕಳೆದುಕೊಳ್ಳಲು
ಟಿಪ್ಪು ಸುಲ್ತಾನನ ನೆಚ್ಚಿನ ಆನೆ
ಬಂದು ತೀರ್ಥವ ಎರೆಚಲು
ಸರಿಹೋದ ಸ್ಥಳ ಇದೇ ತಾನೆ!

ಇಂದಿಗೂ ಕಾಣಬಹುದಿಲ್ಲಿ
ಟಿಪ್ಪು ನೀಡಿದ ಪಚ್ಚೆ ಕಲ್ಲಿನ ಲಿಂಗ
ನೋಡಿ ಮುಗಿಬೀಳುವವರಲ್ಲಿ
ಭಕ್ತಿ ಭಾವದ ತರಂಗ

ಗರ್ಭಗುಡಿಯ ಸುತ್ತಲೂ ಇಹುದು
ಈಶ್ವರನ ಹಲವು ರೂಪ
ಒಂದೊಂದನು ಕಣ್ಣರಳಿಸಿ ನೋಡಿ
ಕೈಮುಗಿಯಲು ಕಳೆವುದು ಪಾಪ

ತಾಯಿಯ ತಲೆಯ ಕಡಿದು
ಕಂಗೆಟ್ಟಿದ್ದ ಪರಶುರಾಮ
ಬಂದು ಕುಳಿತು ತಪವ ಮಾಡಿ
ಶಾಂತಿ ಪಡೆದ ಪುಣ್ಯಧಾಮ

ಪರಶುರಾಮನಿಲ್ಲಿ ಬಂದು
ತೀರಿಸಿಕೊಂಡ ಪಶ್ಚಾತಾಪ
ಇಂದು ಕೌಂಡಿನ್ಯ ನದಿಯಲಿ
ಉಪ್ಪು-ಬೆಲ್ಲವ ಬಿಟ್ಟು
ನೀವೂ ತೀರಿಸಿಕೊಳ್ಳಿರಿ ಪಾಪ


River Kapila/Kabini in front of temple premises where devotees take bath before visiting temple


The front entrance Gopuram , Garbhagudi Gopuram & the procession chariotBig beautifully carved pillars in the entranceBig bull ( Basava) idol in the front of the templeThe inside premises viewAttempt No.1 Needed a lot of caution & patience for this one


Attempt No. 2 - GOT IT!! Finally it opened its wings at the right time CLICK!!Tried from a different angle now.One more snap


Two of them busy with flowers

A non functional fountain on the passage way to templeA 50-feet concrete Shiva idol being constructed near by templeIn front of Mysore Palace

Flowers in front of palacePradeep Raja Wodeyar!! Ha Ha Ha!!
Distance from Mysore: 25 kms
Public transport: You can get a lots of buses to & from Mysore. Both Mysore local & KSRTC buses stop at the Temple stop. Charge to Nanjangud from Mysore is Rs.14 & to temple stop is Rs.16.
Temple Timings:
Weekdays:
Morning 6:00 AM to 1:00 PM
Evening 4:00 PM to 9:00 PM
Sundays:
6:00 AM to 9:00 PM
Free Prasadam Lunch: Free passes are provided to devotees inside the temple at 12:30 noon. Should be collected & produced at the dining hall.
On Sundays & Full moon days(Hunnime)
12:30 noon to 2:30
On all other days:
1:00 noon to 2:30 noon

OVERALL RATING FOR PLACES I VISITED
  1. Srikanteshwara Temple - 3 Stars
  2. Parashurama Kshetra - 0 - No stars
I searched on Internet for places to visit before leaving & an article on wikipedia told a lot of hi-fi things about Parashuraama kshetra but it was disappointing when I visited the temple. The name of the temple sounds big but its actually a small hut sized temple awkwardly painted in red. Its 1.5 kms on NH212 from Srikanteshwara temple towards kerala direction. It was said river Kaundinya joins Kabini/Kapila here but all I could see was a small channel of dirty water flowing in front of the temple!! Disgusting!! a lone old woman was selling flowers & also the Salt+Jaggery combination which is supposed to be put in river by devotees for washing away their sins.