Friday, May 6, 2011

ಗೆಳೆಯ ಸತ್ಯನಿಗೆ ಶುಭಾಶಯ!


ಪ್ರೀತಿಯ ಗೆಳೆಯ ಸತ್ಯ..

ಕ್ಷಮಿಸು..
ನಾನು ನಿನ್ನ ಜನ್ಮದಿನದಂದು
ಮೊದಲು ಶುಭ ಹಾರೈಸಬೇಕೆಂದು
ಬಹಳ ದಿನಗಳಿಂದ ನೆನೆಯುತ್ತಿದ್ದುದು ಸತ್ಯ..
ನೆನೆಯುತ್ತಾ.. ನೆನೆಯುತ್ತಾ..
ಮರತೇಹೋದದ್ದು ಸತ್ಯ..

ನಾ ನನ್ನ ಹೆಸರೊಂದ ಬಿಟ್ಟು
ಮರೆಯದ ವಿಷಯವೇ ಇಲ್ಲವೆಂಬುದು ಸತ್ಯ..
ಆದರೆ ಈ ಬಾರಿ ಮರೆತದ್ದು
ಬೇಸರವ ತಂದಿತೆಂಬುದು ಸತ್ಯ..

ಸಮಯವು 12 ದಾಟಿ
ಮಾರನೆಯ ದಿನ ಬರುವುದಕ್ಕೆ ಮುಂಚೆ
ಕೊನೆಗೂ ಹಾರೈಸಿದೆನೆಂಬುದು ಸತ್ಯ..
ಆದರೆ ಕೊನೆಯವನಾದೆನಲ್ಲಾ
ಎಂದು ನಂತರ ಕೊರಗಿದ್ದೂ ಸತ್ಯ..
ಕೊನೆಯವನಾದರೂ ನಿನ್ನ ಸ್ನೇಹವ ಎಂದೂ
ಕಡೆಯದಾಗಿ ಕಂಡಿಲ್ಲವೆಂಬುದು ಸತ್ಯ..

ನಿನ್ನಿಂದ ತುಸು ದೂರವೇ ಇದ್ದರೂ
ಕೆಲಸದೊತ್ತಡದಲ್ಲಿ ಹಾರೈಕೆಯ ಮರೆತರೂ
ನಾ ಬರೆದ ಈ ಮನದಾಳದ ಸಾಲುಗಳಲ್ಲಿ
ಮೂಡುತಿಹುದು ನಿನ್ನದೇ ಹೆಸರು.. ಸತ್ಯ!



scrap orkut



10 comments:

  1. hi pradeep,,,nange,,enu helbeku antaa gottagtilla idu nanna jeevanadalli endigu mareyada birthday gift,,thanks dear,,,,,,,for giving such a great gift....thanks a lot,,ninna wish last aadru kooda latest,,,,,,and not the least,,,it is,,some thing more than first,,,poem was superb,,
    thanks,,sathya....

    ReplyDelete
  2. Satya once again sorry being the last one to wish you Happy Birthday. Thanks for appreciating.. your deserved lot more than this but I couldnt do anything.. thanks! :)

    ReplyDelete
  3. ಕಡೆಯವರಾಗಿ ಶುಭ ಹಾರೈಸಿದ್ದರಿ೦ದಲೆ ಕವನ ಮೂಡಿದ್ದೂ ಸತ್ಯ! ನಿಮ್ಮ ವಿಶಿಷ್ಟ ರೀತಿಯ ಶುಭ ಹಾರೈಕೆ ಸು೦ದರವಾಗಿದೆ. ಅಭಿನ೦ದನೆಗಳು.

    ReplyDelete
  4. pradeep nanna kade inda ninna friend ge belated b'day wishes...

    ReplyDelete
  5. ಧನ್ಯವಾದಗಳು ಪ್ರಭಾಮಣಿಯವರೇ...

    ReplyDelete
  6. Thanks Girish. Will convey the same to Satya..

    ReplyDelete
  7. ನಿಮ್ಮ ಮನದ ಭಾವನೆ ಕವನರೂಪದಲ್ಲಿ ಬ೦ದಿದ್ದೂ ಸತ್ಯ,
    ಅದು ನಿಮ್ಮ ಸ್ನೇಹಿತನ ಮನವನ್ನು ತಟ್ಟಿದ್ದೂ ಸತ್ಯ,
    ಕವನವನ್ನು ಚೆನ್ನಾಗಿ ಬರೆಯುತ್ತೀರಿ ಎ೦ಬುದೂ ಸತ್ಯ.

    ಇಬ್ಬರಿಗೂ ಶುಭಾಶಯಗಳು.

    ReplyDelete
  8. ಮನಮುಕ್ತಾರವರೇ ನೀವು ಹೇಳಿದ ಪ್ರತಿಯೊಂದು ಸಾಲೂ ಸತ್ಯ.. ಸತ್ಯ..

    ತುಂಬಾ ಧನ್ಯವಾದಗಳು!

    ReplyDelete