Tuesday, May 10, 2011

ಒಬಾಮಾಯಣ!




ಸ್ನೇಹಿತರೇ,

ಇದೇ ಮೇ 2ರಂದು ಅಮೇರಿಕದ ಸೈನ್ಯದವರು ಒಸಾಮಾನನ್ನು ಕೊಂದ ಸುದ್ದಿ ಇಡೀ ಪ್ರಪಂಚಕ್ಕೆ ಖುಶಿಯನ್ನುಂಟು ಮಾಡಿದೆ. ಅಮೇರಿಕನ್ನರು ಈ ಸಂದರ್ಭದಲ್ಲಿ ಬೀದಿ-ಬೀದಿಗಿಳಿದು ಕುಣಿದು ಕುಪ್ಪಳಿಸಿದರು!

ಈ ಸಂದರ್ಭದಲ್ಲಿ ನನ್ನ ಹಳೆಯ ಕವನ ಒಂದು ನೆನಪಿಗೆ ಬರುತ್ತಿದೆ.. September 2010 ರಲ್ಲಿ World Trade Center ದುರಂತದ ಕುರಿತು ಒಂದು ಕವನ ಬರೆದಿದ್ದೆ. ಅದರಲ್ಲಿ WTCನ ಎರಡು ಕಟ್ಟಡಗಳನ್ನು ಇಬ್ಬರು ಪ್ರೇಮಿಗಳಿಗೆ ಹೋಲಿಸಿ ಒಸಾಮಾನನ್ನು ಅವರಿಬ್ಬರನ್ನೂ ಕೊಂದ Villainಗೆ ಹೋಲಿಸಿದ್ದೆ.. ಕವನ ಅಂತ್ಯದಲ್ಲಿ ಲಾಡೆನನ್ನು ಭೂಮಿಯ ಮೇಲೆ ಎಲ್ಲೇ ಅಡಗಿದ್ದರೂ ಹಿಡಿದು ತಂದು ಆ ಪ್ರೇಮಿಗಳು(ಕಟ್ಟಡಗಳು) ಕೊಲೆಯಾದ ಸ್ಥಳದಲ್ಲೇ ಸಜೀವ ದಹಿಸಿ ಹೂತು ಹಾಕಿ ಎಂಬ ಆಶಯವು ಮೂಡಿತ್ತು. ಇಂದು ಅದು ನಿಜವಾಗಿದೆ! ಲಾಡೆನನ್ನು ಗುಂಡಿನಲ್ಲೆ ಸುಟ್ಟು ಅಮೇರಿಕಕ್ಕೆ ಒಯ್ದು ಸಮುದ್ರದಲ್ಲಿ ಹೂತುಹಾಕಿದ್ದಾರೆ!

ಆ ಕವನದ link ಇಲ್ಲಿದೆ:
http://poemsofpradeep.blogspot.com/2010/09/2001-911-wtc-love-story.html

ಲಾಡೆನ್ ಸತ್ತ ಸುದ್ದಿ ಟಿವಿಗಳಲ್ಲಿ ಪ್ರಸಾರವಾಗುವ ಸಮಯದಲ್ಲಿ ನಾನು ರಾಮಾಯಣ ಪುಸ್ತಕ ಓದುತ್ತಾ ಕುಳಿತಿದ್ದೆ. ಆ ಪುಸ್ತಕದ ವಿಷಯವೂ, ಸುದ್ದಿಯ ವಿಷಯವೂ ಸೇರಿಕೊಂಡು ಈ ಕವನ ಮೂಡಿತು..

ಘೋರ ಯುದ್ಧದಿ ಅಂದು ರಾವಣನ ಕೊಂದಂತೆ ರಾಮ,
ಒಸಾಮಾಸುರನ ಸಂಹರಿಸಿಹನು ಸಾಹಸಿ ಒಬಾಮ;

ಆಗಿಹುದು ಮತ್ತೊಮ್ಮೆ ಲೋಕಕೆ ಕಲ್ಯಾಣ,
ಹಸಿದ ಹೊಟ್ಟೆಗೆ ಹಾಲೆರದಷ್ಟೇ ಹಿತಕರ ಈ ಮರಣ;

ನೆನಪಾಯಿತು ಇಂದು ಆ ಜಯ-ವಿಜಯರ ಮರುಜನ್ಮ,
ಅವರೇ ಈ ಕಲಿಯುಗದ ಒಸಾಮ ಮತ್ತು ಸದ್ದಾಮ?

ತ್ರೇತಾಯುಗದಲ್ಲಿ ಪುಷ್ಪಕ ವಿಮಾನದಲ್ಲಿ ಸೀತಾಪಹರಣ,
ಕಲಿಯುಗವಿನ್ನೂ ಕೀಳು, ಇಲ್ಲಿ ವಿಮಾನದ್ದೇ ಅಪಹರಣ!

ಅಂದು ಅಡ್ಡ ನಿಂತು ಹೋರಾಡಿ, ತೆತ್ತ ಜಟಾಯು ಪ್ರಾಣ,
ಇಲ್ಲಿ ಅಡ್ಡ ನಿಂತ ಕಟ್ಟಡದಲ್ಲಿದ್ದ ಸಾವಿರಾರು ಜನರ ಮರಣ.

ಅಂದು ಸೀತೆಯ ಹುಡುಕಲು ಹಲುಬಿದಂತೆ ರಾಮ, ಹನುಮ,
ಹತ್ತು ವರ್ಷ ಬಿಡದೇ ಹುಡುಕಿದರು ಬುಷ್ ಮತ್ತು ಒಬಾಮ!

ಅಂದು ಹುಡುಕಾಟದಿ ಧ್ವಂಸವಾಯಿತು ಅಶೋಕವನ,
ಇಲ್ಲಿ ಅಮೇರಿಕನ್ನರು ಬೂದಿಯಾಗಿಸಿದರು ಇರಾಕಿನ ಮಣ್ಣ,

ಅಂದು ಸುಗ್ರೀವ ಸಖ್ಯವಾಗಿ ವೀರಮರಣ ಪಡೆದ ಶೂರ ವಾಲಿ,
ಇಲ್ಲಿ ಯೂರೋಪಿಯನ್ನರ ಸಖ್ಯದ ದಾಳಿಗೆ ಇರಾಕಿನ ಹುಸೇನ ಬಲಿ.

ಬಂದನಂದು ರಾಮ ರಣಭೂಮಿಗೆ, ಏರಿ ಇಂದ್ರನ ರಥ,
ಬಂದಿತಿಲ್ಲಿ ಒಬಾಮಾ ಪಡೆ ಪಾಕಿಸ್ತಾನಕೆ, ಹಿಡಿದು ವಾಯುಪಥ,
ಪರಿಣಾಮ ಒಸಾಮ ಹತ, ಲೋಕಕ್ಕೆ ಹಿತ.

ಅಗ್ನಿದೇವನು ಬಂದಳಿಸಿದನಂದು ಸೀತೆಯ ಮೇಲಿನ ಶಂಕೆ,
ಲೋಕವೇ ಒಪ್ಪಿಹುದಿಂದು, ಪಾಕಿಸ್ತಾನದ ಬುದ್ಧಿ ಕೊಂಕೇ,
ಎಷ್ಟೋ ಜಗತ್ಕಿರಾತಕರಿಗಿನ್ನೂ ಅದು ಉಗ್ರರ ವೈಭವದ ಲಂಕೆ!

ಹಿಂಸೆ ಅಳಿವುದು, ಶಾಂತಿ ಉಳಿವುದು ಕೊನೆಗೆ,
ನೆನೆಯಿರಿ ಭಗವಂತನಂದು ಹೇಳಿದುದ ನಮಗೆ,
"ಧರ್ಮಸಂಸ್ಥಾಪನಾರ್ಥಯಾ ಸಂಭವಾಮಿ ಯುಗೇ ಯುಗೇ"

|| ಶ್ರೀ ಒಬಾಮಾಯಣ ಸಂಪೂರ್ಣಂ ||


15 comments:

  1. nice one....

    hhaa hhhaaaa........ chennaagide.......

    ReplyDelete
  2. Manamukta, Gurumurthy sir, & Dinakar Sir... thank you very much!

    ReplyDelete
  3. Gurumurthy Sir, Manamukta & Asha thanks a lot!

    ReplyDelete
  4. Pradeep Sir,

    Super and excellent. Beautifully written and pictures are so tailor made.

    ReplyDelete
  5. ಪ್ರದೀಪ್ ಎಲ್ಲಾ ಸರಿ...ಆದ್ರೆ ರಾವಣನನ್ನು ಹುಟ್ಟುಹಾಕಿದ್ದು ರಾಮನಲ್ಲ.... ಇಲ್ಲಿ ಅಮೇರಿಕಾದ ಸೃಷ್ಠಿಯೇ ಬಿನ್ ಲ್ಯಾಡನ್...

    ReplyDelete
  6. @ Santosh Sir thanks a lot.. Nice to see you back after so many days..

    ReplyDelete
  7. ನನ್ನ ಒಬಾಮಾಯಣ ಕವನ ಓದಿದ ಹಾಗು ಪ್ರತಿಕ್ರಯಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ಬಹಳಷ್ಟು ಜನ ಒಂದು ಪ್ರಶ್ನೆ ಕೇಳಿದ್ದೀರಿ...

    ಅಂದು ರಾಮ ರಾವಣನನ್ನು ಹುಟ್ಟುಹಾಕಲಿಲ್ಲ ಆದರೆ ಇಲ್ಲಿ ಅಮೇರಿಕವೇ ಲಾಡೆನನ್ನು ಹುಟ್ಟುಹಾಕಿದ್ದೆಂದು...

    ಅದಕ್ಕೆ ನನಗೆ ತಿಳಿದ ಮಟ್ಟಿಗೆ ವಿವರಣೆ ಕೊಡಲು ಪ್ರಯತ್ನಿಸಿದ್ದೇನೆ.. ನಾನು ಓದಿದ ರಾಮಾಯಣದ ಪುಸ್ತಕದ ಪ್ರಕಾರ ರಾವಣ ಹಾಗು ಕುಂಭಕರ್ಣ ಎಂಬುವವರು ಹಿಂದೆ ವೈಕುಂಠದ ದ್ವಾರಪಾಲಕರಾಗಿದ್ದವರು. ಜಯ ಹಾಗು ವಿಜಯರೆಂದು ಅವರ ನಿಜ ನಾಮಧೇಯ. ಹಿಂದೆ ಸನಕಾದಿ ಋಷಿಗಳು ಶ್ರೀ ಹರಿಯನ್ನು ನೋಡಲು ವೈಕುಂಠಕ್ಕೆ ಬಂದಾಗ ಈ ದ್ವಾರಪಾಲಕರು ಅವರನ್ನು ತಡೆದರು. ಕೋಪಗೊಂಡ ಋಷಿಗಳು ನೀವು ವೈಕುಂಠದಲ್ಲಿರಲು ಯೋಗ್ಯರಲ್ಲ ಭೂಲೋಕದಲ್ಲಿ ಮಾನವರಾಗಿ ಹುಟ್ಟಿ ಎಂದು ಶಾಪ ಕೊಟ್ಟು ಹೊರಟು ಹೋದರು. ಆಗ ಅವರಿಬ್ಬರೂ ಪಶ್ಚಾತಾಪ ಪಟ್ಟು ಶ್ರೀಹರಿಯನ್ನು ತಮ್ಮನ್ನು ಕ್ಷಮಿಸಬೇಕೆಂದು ಬೇಡಿಕೊಂಡರು. ಆಗ ಶ್ರೀಹರಿಯು ಋಷಿಮುನಿಗಳ ಶಾಪ ತಪ್ಪಿಸಲು ಸಾಧ್ಯವಿಲ್ಲ. ನೀವು ಭೂಲೋಕದಲ್ಲಿ ನನ್ನ ಶತ್ರುಗಳಾಗಿ ಬರಿ ಮೂರೇ ಜನ್ಮ ತಾಳಿ ನಿಮ್ಮ ಸ್ವಸ್ಥಾನಕ್ಕೆ ಮರಳುವಿರೋ ಅಥವಾ ನನ್ನ ಭಕ್ತರಾಗಿ ನೂರಾರು ಜನ್ಮ ಭೂಲೋಕದಲ್ಲೇ ಕಳೆಯುವಿರೋ ಎಂದು ಕೇಳಿದನು. ಅದಕ್ಕೆ ಜಯ-ವಿಜಯರು "ಸ್ವಾಮಿ, ನಾವು ನಿಮ್ಮ ಶತ್ರುಗಳಾದರೂ ಚಿಂತೆಯಿಲ್ಲ, ನಿಮ್ಮನ್ನು ಬಿಟ್ಟು ಹೆಚ್ಚು ದಿನ ಭೂಲೋಕದಲ್ಲಿ ಇರಲಾರೆವು" ಎಂದರು.

    ಅದರಂತೆ ಸ್ವತಃ ಶ್ರೀಹರಿಯೇ ತನ್ನ ವೈಕುಂಠದಲ್ಲೇ ದ್ವಾರಪಾಲಕರಾಗಿದ್ದ ಜಯ-ವಿಜಯರಿಗೆ ನೀವು ತ್ರೇತಾಯುಗದಲ್ಲಿ ರಾವಣ-ಕುಂಭಕರ್ಣರಾಗಿ ಹುಟ್ಟಿ. ನಾನು ರಾಮನಾಗಿ ಬಂದು ನಿಮಗೆ ಮುಕ್ತಿ ಕೊಡುತ್ತೇನೆ ಎಂದು ಹರಿಸಿದನು.

    ಇಲ್ಲಿ ಅದರಂತೆಯೇ ಅಮೇರಿಕದಲ್ಲಿ ಟ್ರೇನಿಂಗ್ ಪಡೆಯುತ್ತಿದ್ದವನಿಗೆ ಶಸ್ತ್ರಾತ್ರ ಕೊಟ್ಟು ಅಮೇರಿಕ ಕಳಿಸಿತು.. ನಂತರ ಅಮೇರಿಕದ ಹಾರೈಕೆ ಒಬಾಮ ಮತ್ತು ಬುಷ್ ಅವತಾರದಲ್ಲಿ ಬಂದು ಒಸಾಮ ಮತ್ತು ಸದ್ದಾಮರನ್ನು ಸಂಹರಿಸಿದ್ದಾರೆ.

    Comparision still holds good! Please let me know if any further confusions :)

    ReplyDelete
  8. Tumba Thanks Manju Sir & welcome to my blog!

    ReplyDelete
  9. ತುಂಬಾ ದನ್ಯವಾದಗಳು

    ReplyDelete