ಗುರುಪ್ರಸಾದ್ ಶೃಂಗೇರಿಯವರು ತೆಗೆದ ಈ ಸುಂದರ ಚಿತ್ರದಿಂದ ಪ್ರೇರಿತವಾದ ನನ್ನ ಒಂದು ಕವನ...
ಹುಸಿ ಪ್ರೇಮದ ಪಾಶ
--------------------
ಮಲಗಿದ್ದ ಮುಗ್ಧ ಮೊಗ್ಗಿನ ಮನಸ್ಸು
ಕಣ್ಮುಚ್ಚಿ ಕಾಣುತಿತ್ತು ನಲ್ಲನ ಕನಸು
ರಂಗೇರಿತ್ತು ಬಣ್ಣ, ಅರಳುವ ಮುನ್ನ,
ಇನ್ನು ಅರಳಿದರೆಷ್ಟು ಸೊಗಸು!
ಎಳೆ ಪಕಳೆಗಾಯಿತು ಅಙ್ಞಾತ ಪಾದ ಸ್ಪರ್ಶ
ಹೂವಿಗೋ ಇನಿಯ ದುಂಬಿ ಬಂದನೆಂಬ ಹರುಷ
ಮಾಡುತಿರಲು ತುಳಿಯುತ ಆ ಪಾದಗಳು ನರ್ತನ
ಹೂವಿನೊಳು ಮಧು ಸುಗಂಧಗಳ ಸ್ಪಂಧನ
ಎಳೆ ಎಲೆಗಳ ಮೇಲೆ ಎಳೆದನು
ಟೊಳ್ಳು ಭಾವನೆಗಳ ಎಳೆ ಎಳೆಯ
ಕಥೆಗೊಂದು ಕಥೆ ಪೋಣಿಸಿ
ಹೆಣೆದ ಮೋಸದ ಬಲೆಯ
ಕಳೆದು ಮಧುರಾತ್ರಿ ಎಚ್ಚರವಾಗಲು ಮುಂಜಾನೆ
ಕಣ್ಣ ತೆರೆದು ಅರಳಲು ಮೊಗ್ಗು ಮೆಲ್ಲನೆ
ಕಂಡಿದ್ದು ನಗುತಿದ್ದ ವಿಶಾಲ ಖಾಲಿ ಆಕಾಶ
ಹಾಗು ತಾನು ಸೆರೆಯಾಗಿದ್ದ ಹುಸಿ ಪ್ರೇಮದ ಪಾಶ!
Photo Courtesy - img.moonbuggy.org
-----------------------------------------
ದುಂಬಿಯ ನಿರೀಕ್ಷೆಯಲಿದ್ದವಳ
ಮರಳು ಮಾಡಿದವ ವಿಷ ಜೇಡ!
ಅರಿಯಿರಿ ಅರಳುವ ಹೂಗಳೇ...
ಹುಸಿ ಆಸೆಗೆಂದೂ ದುಡುಕು ಬೇಡ.
ಪ್ರದೀಪ್ ಅವರೇ..... ಎರಡೂ ಕವನಗಳೂ ಸುಂದರವಾಗಿ ಮೂಡಿಬಂದಿದೆ..... ಮೊದಲಿನ ಹಾಗೂ ಕೊನೆಯ ಎರಡು ಪ್ಯಾರಾಗಳು ಹೆಚ್ಚು ಇಷ್ಟವಾದವು....
ReplyDeletePradeep,liked the First and last paragraph..Nice one !!!
ReplyDeleteಪ್ರದೀಪ್, ಪ್ರತಿಯೊಂದು ಸಾಲುಗಳೂ ಅರ್ಥಪೂರ್ಣವಾಗಿದೆ. Good one.
ReplyDeleteಸುಂದರ ಕವನ
ReplyDeletesuperb photo, superb poem
ReplyDeleteNice lines
ReplyDeleteRaghu
ಚಿತ್ರಗಳು ಅಪರೂಪವಾಗಿ ಚೆನ್ನಾಗಿವೆ. ಚಿತ್ರಕವನ ಸ೦ದರ್ಭೊಚಿತವಾಗಿ ಬೋಧನಾತ್ಮಕವಾಗಿದೆ. ಅಭಿನ೦ದನೆಗಳು ಪ್ರದೀಪ್.
ReplyDeletevery nice pradeep...
ReplyDeleteಈಗಿನ ಕಾಲಕ್ಕೆ ಸರಿಯಾಗಿದೆ ಈ ಕವನಾ... ಮೋಸ ಮಾಡಿಸಿಕೊಳ್ಳುವರಾದರು ನೋಡಿ ಎಚ್ಚೆತ್ತು ಕೊಳ್ಳಲಿ...
ReplyDeleteThis comment has been removed by the author.
ReplyDeleteಒಂದೊಂದು ಪದ, ಒಂದೊಂದು ಕವನ
ReplyDeleteಜೀವನದ ಅನುಭವದ ಹೋರಣ
ಎಲ್ಲಿ ಮರೆಯಾಗಿತ್ತು ನನ್ನಿಂದ
ಕುರುಡಾಗಿದ್ದೆನೆ ಇದರಿಂದ
ಮೈ ಮರೆತು ಓದುತಿರಲು
ಮನ ಅರಳಿ ಹೂವಾಗಿರಲು
ಬಯಸಿದೆ ಗೆಳೆತನ
ನಿಮಗಿದೋ ನನ್ನ ನಮನ