Tuesday, April 5, 2011

ನಾ ಸೋತು ಗೆದ್ದ WORLD CUP 2011 !!

Photo courtesy-www.ssportsnews.com
30th March 2011, Wednesday, ಮೊಹಾಲಿಯಲ್ಲಿ ಭಾರತ ಹಾಗು ಪಾಕಿಸ್ತಾನದ ನಡುವೆ ಕ್ರಿಕೆಟ್ ವಿಶ್ವಕಪ್ಪಿನ ಎರಡನೆಯ ಸೆಮಿಫ಼ೈನಲ್ ಪಂದ್ಯವಿತ್ತು. Second shiftನಲ್ಲಿದ್ದ ನಾನು ಸುಮಾರು 1:30 PMಗೆ ಆಫ಼ೀಸು ತಲುಪಿದೆ. ಆಗ ನನಗೆ ಅಲ್ಲಿ ಎಲ್ಲಿಲ್ಲದ ಆಶ್ಚರ್ಯ ಕಾದಿತ್ತು. ನಾವು ದಿನವೂ ಕುಳಿತು ಕೆಲಸ ಮಾಡುತ್ತಿದ್ದ ಕುರ್ಚಿ, ಮೇಜು ಹಾಗು ಕಂಪ್ಯೂಟರ್_ಗಳು ಮಂಗಮಾಯ! ಬದಲಿಗೆ ದೊಡ್ಡ ಹಾಲಿನಂತಿದ್ದ ನಮ್ಮ ಆಫ಼ೀಸಿನ ಮಧ್ಯದಲ್ಲಿಒಂದು ದೊಡ್ಡ ಬಿಳೀ ಪರದೆ, ಎದುರಿಗೇ ಒಂದು Projector ಹಾಗು ಅದರ ಹಿಂದೆ ಸಾಲು ಸಾಲಾಗಿ ಸಿನಿಮಾ ಹಾಲಿನಂತೆ ಜೋಡಿಸಿದ್ದ ಕುರ್ಚಿಗಳು! ಯಾವಾಗಲೂ ನಾವು ಕೆಲಸ ಮಾಡುವುದನ್ನು ಹದ್ದಿನ ಕಣ್ಣಿನಿಂದ ನೋಡುತ್ತಿದ್ದ ನಮ್ಮ ಮ್ಯಾನೇಜರ್ ಆಗಲೇ ಮುಂದಿನ ಸಾಲಿನಲ್ಲಿ ಆಸೀನರಾಗಿದ್ದರು! ನಮ್ಮಂತಹ MNC ಕಂಪನಿಯಲ್ಲಿ ಒಂದು ಕ್ರಿಕೆಟ್ ಮ್ಯಾಚಿಗೆ ಇಷ್ಟು ಮಹತ್ವ ಸಿಗುತ್ತದೆ, ಜನ ಒಂದು ದಿನ ಕೆಲಸ ಮರೆತು ಆಫ಼ೀಸಿನಲ್ಲಿಯೇ ಆರಾಮಾಗಿ ಕುಳಿತು ಕ್ರಿಕೆಟ್ ನೋಡುವಂತಹ ದಿನ ಬರುತ್ತದೆಯೆಂದು ನಾನು ಕನ್ಸಸಿನಲ್ಲೂ ನೆನೆದಿರಲಿಲ್ಲ! ಒಂದು ಮೂಲೆಯಲ್ಲಿ ರಾಶಿ ರಾಶಿ Laptop bagಗಳು ಬಿದ್ದಿದ್ದವು! ಬಂದವರ‍್ಯಾರೂ ತಮ್ಮ Laptop ತೆರೆಯದೆಯೇ ಬ್ಯಾಗ್ ಸಮೇತ ಮೂಲೆಗೆ ಎಸೆದು ಹೋಗಿ ಟಿ.ವಿ. ಮುಂದೆ ಕುಳಿತಿದ್ದರು. ನಾನೂ ಅಂತೆಯೇ ಮಾಡಿದೆ. ಸ್ವಲ್ಪ ಸಮಯದ ನಂತರ ಸಹೋದ್ಯೋಗಿ ಸಂತೋಷ್ ಬಂದು "ಹೇ ಪ್ರದೀಪ್, ನೀವು ಇವತ್ತು ಸಹ ಭಾರತವನ್ನು ಗೆಲ್ಲಿಸಲೇ ಬೇಕು, ಪಾಕಿಸ್ತಾನದ ಮೇಲೆ ಬೆಟ್ ಕಟ್ಟಿ. 50ರೂಪಾಯಿ ಓಕೆನಾ?" ಎಂದರು. ಅವರ ಮಾತು ಕೇಳಿ ಸುತ್ತ ಇದ್ದ ಎಲ್ಲರೂ ಕಕ್ಕಾಬಿಕ್ಕಿಯಾದರು! ಆದರೆ ಒಂದು ವಿಷಯ ಸಂತೋಷ್‍ಗೆ ಮಾತ್ರ ಗೊತ್ತಿತ್ತು. ನಾನು ಇದುವರೆಗೆ ಗೆಲ್ಲುತ್ತದೆ ಎಂದು ಬೆಟ್ ಕಟ್ಟಿದ್ದ ಒಂದೇ ಒಂದು ತಂಡವೂ ಗೆದ್ದಿಲ್ಲ! ಉದಾಹರಣೆಗೆ ಈ ಹಿಂದೆ 24th March 2011, Thursday ಆಸ್ಟ್ರೇಲಿಯಾ ಮೇಲೆ ನಡೆದ Quarter Final ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲ್ಲುವುದೆಂದು ಬೆಟ್ ಕಟ್ಟಿದ್ದೆ. ಆಸ್ಟ್ರೇಲಿಯಾ ಸೋತು ಹೋಯಿತು! ಅವರು ಸೋಲಲೆಂದೇ ನಾನು ಅವರ ಮೇಲೆ ಬೆಟ್ ಕಟ್ಟಿದ್ದೆ! ನಾನು ಗೆಲ್ಲುತ್ತದೆ ಎಂದವರು ಸೋತೇ ಸೋಲುತ್ತಾರೆ! ಇದು ನೆನ್ನೆ ಮೊನ್ನೆಯ ಮಾತಲ್ಲ, ಬಹಳ ಹಿಂದಿನಿಂದ ನಡೆದು ಬಂದ ಪರಂಪರೆ. ನನ್ನ ಹಳೇ ಕಂಪನಿಯಲ್ಲಿ ಎಲ್ಲರೂ ಭಾರತದ ಮ್ಯಾಚಿರುವಾಗಲೆಲ್ಲಾ ತಾವೇ 50 ರೂಪಾಯಿ ಕೊಟ್ಟು ವಿರೋಧಿ ತಂಡ ಗೆಲ್ಲುವುದೆಂದು ನನ್ನ ಕೈಯಲ್ಲಿ ಬೆಟ್ ಕಟ್ಟಿಸುತ್ತಿದ್ದರು! ಆಗೆಲ್ಲ ಭಾರತವೇ ಗೆಲ್ಲುತಿತ್ತು! ಈ ಹಿಂದೆ ಭಾರತ ಸೋತಾಗಲೆಲ್ಲ ನಾನು ಆಫ಼ೀಸಿನಲ್ಲಿರಲಿಲ್ಲ ಅಥವ ಬೆಟ್ ಕಟ್ಟುವುದು ಮರೆತಿದ್ದೆ ಎಂದು ಅಂದುಕೊಳ್ಳಿ! ಆದರೇ ಇದೇ ವಿಶ್ವಕಪ್ಪಿನಲ್ಲಿ 12th March 2011, Saturday ದಕ್ಷಿಣ ಆಫ಼್ರಿಕಾದ ಮೇಲೆ ನಡೆದ League ಪಂದ್ಯದಲ್ಲಿ ಸಚಿನ್ ಮತ್ತು ಸೆಹವಾಗರ ಸ್ಫೋಟಕ ಆರಂಭ ನೋಡಿ ನನ್ನಲ್ಲಿ ದೇಶಾಭಿಮಾನ ಹೆಚ್ಚಾಗಿ, ಧೈರ್ಯ ಮಾಡಿ ನನ್ನ ಪರಂಪರೆ ಮುರಿದೆ, ಅಂದು ಭಾರತವೇ ಗೆಲ್ಲುವುದೆಂದು ಗೆಳೆಯನೊಡನೆ ಬೆಟ್ ಕಟ್ಟಿಯೇಬಿಟ್ಟೆ.
Photo courtesy - Internet

ದುರಾದೃಷ್ಟವಶಾತ್ ಭಾರತ ಆ ಪಂದ್ಯ ಸೋತುಹೋಯಿತು! ವಿಷಯ ತಿಳಿದ ಸ್ನೇಹಿತರೆಲ್ಲರೂ ಅಂದು ಫೋನ್ ಮಾಡಿ ನನ್ನ ಹಿಗ್ಗಾಮಗ್ಗಾ ಉಗಿದರು.. ಇನ್ನು ಮುಂದೆ ಎಲ್ಲಾದರೂ ಭಾರತದ ಮೇಲೆ ಬೆಟ್ ಕಟ್ಟಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು! ಇಂದು ಸಂತೋಷ್ ನನ್ನ ಈ ರೀತಿ ಕೇಳಿದ್ದರ ಹಿಂದೆ ಇಷ್ಟೆಲ್ಲ History ಇತ್ತು! ನಾನು ಸರಿಯೆಂದು ಪಾಕಿಸ್ತಾನವೇ ಗೆಲ್ಲುವುದೆಂದು 50ರೂ ಬೆಟ್ ಕಟ್ಟಿಯೇ ಬಿಟ್ಟೆ. ಪಂದ್ಯ ಶುರುವಾಯಿತು. ಮೊದಲು ಬ್ಯಾಟ್ ಮಾಡಿದ ಭಾರತ 260/9 ಗಳಿಸಿತ್ತು. ಎಲ್ಲರೂ ಸ್ಕೋರ್ ಕಡಿಮೆಯಾಯಿತೆಂದು ಸಪ್ಪೆ ಮೋರೆ ಹಾಕಿಕೊಂಡಿದ್ದರು. ಎರಡನೆಯ ಇನ್ನಿಂಗ್ಸ್ ಶುರುವಾಯಿತು. ಪಾಕಿಸ್ತಾನ ಭರ್ಜರಿ ಆರಂಭ ಪಡೆಯಿತು. ಪಾಕಿಸ್ತಾನ 44/0 ಇದ್ದಾಗ ಸಂತೋಷ್ ನನ್ನ ಬಳಿ ಬಂದು "ಏನಾದ್ರೂ ಮಾಡ್ರಿ, ಭಾರತನ ಗೆಲ್ಲಿಸಿ" ಎಂದರು. ನಕ್ಕು ನಾನು ಮತ್ತೆ Laptopನಲ್ಲಿ ಮಗ್ನನಾದೆ. ಅಂತರ್ಜಾಲದಲ್ಲಿ ಏನು ಹುಡುಕುತ್ತಿದ್ದ ನಾನು ಎರಡು ನಿಮಿಷದ ನಂತರ ಏನೋ ಸಿಕ್ಕಿದವನಂತೆ ಚಿಟಿಕೆ ಹೊಡೆದು "ಆಹ್!" ಎಂದೆ. ಸುತ್ತಮತ್ತ ನಿಂತು ಟಿ.ವಿ. ನೋಡುತ್ತಿದ್ದ ಜನ ನನ್ನೆಡೆಗೆ ತಿರುಗಿದರು. ಗೂಗಲ್‍ನಲ್ಲಿ ಒಂದು ದೊಡ್ಡ ಪಾಕಿಸ್ತಾನದ ಬಾವುಟ ತೆಗೆದು "ಪಾಕಿಸ್ತಾನಕ್ಕೆ ಜಯವಾಗಲಿ" ಎಂದು ಎದ್ದು ನಿಂತು ಒಮ್ಮೆ salute ಮಾಡಿಯೇಬಿಟ್ಟೆ! ನನ್ನ ಸುತ್ತ ಇದ್ದ ಸಹೋದ್ಯೋಗಿಗಳು "ಇವನು ಯಾರೋ Terrorist ಇರಬೇಕು" ಎಂದು ಅನ್ನುತ್ತಾ ನನ್ನ ಕೊರಳ ಪಟ್ಟಿ ಹಿಡಿದು ತದಕುವುದೊಂದು ಬಾಕಿ.. ಅಷ್ಟರಲ್ಲಿ ಅತ್ತ ಎಲ್ಲರೂ ಓ ಎಂದು ಕುಣಿದೆದ್ದರು! "..AND HE'S GONE.. CAUGHT BY YUVRAJ SINGH.." ಎಂದು ಕಿರುಚಾಟದ ಮಧ್ಯೆ ಕೇಳುತಿತ್ತು. ಪಾಕಿಸ್ತಾನದ ಮೊದಲ ವಿಕೆಟ್ ಪತನಗೊಂಡಿತ್ತು!

Photo courtesy - Internet
ಸ್ಟೇಡಿಯಂನಲ್ಲಿದ್ದ ಸೋನಿಯಾ ಗಾಂಧಿ, ಮಗ ರಾಹುಲ್ ಗಂಧಿ, ಆಮೀರ್ ಖಾನ್ ಎಲ್ಲರೂ ಸಂತಸದಲ್ಲಿ ನಗುತ್ತಿದ್ದರು. Bullet-proof ಗಾಜಿನ ಒಳಗೆ ಕುಳಿತ ಭಾರತದ ಪ್ರಧಾನಿ ಮನಮೋಹನ ಸಿಂಗ್ ಮತ್ತು ಪಾಕಿಸ್ತಾನದ ಪ್ರಧಾನಿ ಗಿಲಾನಿಯವರ ಮುಖದ ಮೇಲೆ ಯಾವುದೇ ಭಾವಗಳಿರಲಿಲ್ಲ! ಕೊನೆಗೆ ಪಾಕಿಸ್ತಾನ 231 Allout ಆದಾಗ. ಎಲ್ಲರಿಗೂ ಬಹುಶಃ ನನ್ನ ಕುಚ್ಚೇಷ್ಟೆಯ ಬಗ್ಗೆ ಅರಿವಾಗಿತ್ತು ಅನ್ನಿಸುತ್ತೆ! ಅಂದೂ ನನ್ನ ಉಲ್ಟಾ ಲೆಕ್ಕಾಚಾರ ತಪ್ಪಿರಲಿಲ್ಲ! ಎಲ್ಲೆಡೆ ಭಾರತ ಫ಼ೈನಲ್ಲನ್ನೇ ಗೆದ್ದಷ್ಟು ಸಂಭ್ರಮ!
Photo courtesy- forum.xcitefun.net
2nd April 2011, Saturday, India vs Srilanka Final at Mumbai. ನಮಗೆ ಶನಿವಾರ ರಜವಿಲ್ಲವಾದ್ದರಿಂದ ಆಫ಼ೀಸಿನಲ್ಲಿ ಮತ್ತೆ ಅದೇ ವಾತಾವರಣ ನಿರ್ಮಿತವಾಗಿತ್ತು. ಎಂದಿನಂತೆ ಇಂದೂ ನನ್ನ ಸಹೋದ್ಯೋಗಿ ಕೇತಕಿ ಎಂಬುವವಳೊಂದಿಗೆ ಶ್ರೀಲಂಕಾ ಗೆಲ್ಲುವುದೆಂದು ಬೆಟ್ ಕಟ್ಟಿದ್ದೆ. ಶ್ರೀಲಂಕಾದ 274/6 target ಬೆನ್ನತ್ತಿದ ಭಾರತ ಇನ್ನಿಂಗ್ಸ್‍ನ ಎರಡನೇ ಚೆಂಡಿನಲ್ಲೇ ಸೆಹವಾಗರನ್ನು ಕಳೆದುಕೊಂಡಾಗ ಯಾರಿಗೂ ಉಸಿರೇ ಇರಲಿಲ್ಲ! ಸ್ವಲ್ಪದರಲ್ಲೇ ಸಚಿನ್ ಸಹ ಔಟ್! India - 31/2!
Photo courtesy - specialscricbuzz.com

ಯಾರಿಗೂ ಉಸಿರೇ ಇರಲಿಲ್ಲ.. ಟಿ.ವಿ. ಯಲ್ಲಿ ಸ್ಟೇಡಿಯಂನಲ್ಲಿ ಹಾಜರಿದ್ದ ರಜನಿಕಾಂತ್ ಮತ್ತು ಅವರ ಮಗಳು, ಆಮೀರ್ ಖಾನ್ ಮತ್ತು ಇತರರ ಸಪ್ಪೆ ಮುಖಗಳನ್ನು Zoom ಮಾಡಿ ತೋರಿಸುತ್ತಿದ್ದರು. ಆ ಮೌನದಲ್ಲಿ ಮೂಲೆಯಲ್ಲಿದ್ದ ಪ್ರಿಂಟರ್ ಕರಕರನೇ ಸದ್ದು ಮಾಡುತ್ತಾ ಏನನ್ನೋ ಪ್ರಿಂಟ್ ಮಾಡಲು ಪ್ರಾರಂಭಿಸಿದ್ದು ಜೋರಾಗಿ ಕೇಳುತ್ತಿತ್ತು. ನಾನೇ ಕೊಟ್ಟಿದ್ದ ಪ್ರಿಂಟೌಟ್ ತರಲು ಎದ್ದು ಹೋದಾಗ ಕೆಲವರು ಕುತೂಹಲದಿಂದ ನನ್ನೆಡೆ ನೋಡಿದರು. ಪ್ರಿಂಟೌಟ್ ಯಾರಿಗೂ ಕಾಣದಂತೆ ಮುಚ್ಚಿಕೊಂಡು ಮತ್ತೊಂದು ಕೈಯಲ್ಲಿ ಸೆಲ್ಲೋ ಟೇಪ್ ಹಿಡಿದು, ಬಂದ ನಾನು ಕೂತಿದ್ದ ಮೂಲೆಯ ಗೋಡೆಗೆ ಪರಪರನೇ ಸೆಲ್ಲೋಟೇಪ್ ಹರಿಯುತ್ತಾ ಏನೋ ಅಂಟಿಸಿದೆ. ಕೇತಕಿ ತಿರುಗಿ ನೋಡಿ ಬಿದ್ದುಬಿದ್ದು ನಕ್ಕಳು. ಆಗ ಭಾರತದ ರನ್‍ರೇಟ್ ಹೆಚ್ಚಾಗ ತೊಡಗಿತ್ತು. ಅಂತೂ ಇಂತೂ ಭಾರತ ಕೊನೆಗೆ ಸುಲಭವಾಗಿ 6 ವಿಕೆಟ್‍ನಿಂದ ಜಯಗಳಿಸಿತ್ತು. ಪಂದ್ಯ ಮುಗಿದ ನಂತರ ಎಲ್ಲರೂ ಬಂದು ನೋಡಿದರು.. ನನ್ನ ಪಕ್ಕ ಗೋಡೆಯ ಮೇಲೆ ಶ್ರೀಲಂಕಾದ ಬಾವುಟ ರಾರಾಜಿಸುತ್ತಿತ್ತು.. ಪಕ್ಕದಲ್ಲೇ ನಾನು ಗೆಲುವಿನ ನಗೆ ಬೀರುತ್ತಾ ಕುಳಿತಿದ್ದೆ! ನಾನು ಬಾವುಟಕ್ಕೆ ಕೈ ಹಾಕಿದ ಮೇಲೆ ಆ ತಂಡ ಧ್ವಂಸವಾಗದೆ ಉಳಿದಿದ್ದುಂಟೇ ಮಾರಯ್ರೇ?


"ವಿಜಯೀ ವಿಶ್ವ್ ತಿರಂಗಾ ಪ್ಯಾರಾ..
ಝಂಡಾ ಊಂಚಾ ರಹೆ ಹಮಾರಾ.."



Photo courtesy - studywithfun.com


WORLD CUP ಗೆಲ್ಲಲು 6 world cup ಅಂದರೆ 21 ವರ್ಷಗಳು ಕಾದ ಸ"ಚಿನ್ನ್"ರಿಗೆ ಸಂದ ಸೂಕ್ತ ಬಹುಮಾನ!

20 comments:

  1. next time for any India match i wil ask u to bet againsT India..k.So that India can win the game..

    ReplyDelete
  2. ಪ್ರದೀಪ್;ನೀವು ಸೋತು ಗೆದ್ದವರು.ನಿಮ್ಮ ಕ್ರಿಕೆಟ್ ಅಭಿಮಾನಕ್ಕೆ ಧನ್ಯವಾದಗಳು.

    ReplyDelete
  3. naanu serious aagi nodthaa kulitare India sulutte.. adakke nadu naduve 5-6 over match skip madthidde. iga cricket nalli ashttu aasakti illa aadare nimma lekhana maatra tumbaa aasaktiyinda odide.
    neevondu bharada kaage annonave ( rsatatavaagi kutu kombe muritaa irodrinda)

    ReplyDelete
  4. proud to be an Indian........
    chennaagi barediddiri.
    ishta aaytu.....

    ReplyDelete
  5. Sure Girish.. really very happy to loose bet if India wins!

    ReplyDelete
  6. ಧನ್ಯವಾದಗಳು ಕೃಷ್ಣಮೂರ್ತಿಯವರೇ..

    ReplyDelete
  7. ನೀವು ಏನು ಬೇಕಾದರೂ ಅನ್ನಿ ಸೀತಾರಾಮ್ ಸಾರ್.. ಇಷ್ಟು ದಿನದ ನಂತರ ನೀವು ಬಿಡುವು ಮಾಡಿಕೊಂಡು ನನ್ನ ಬ್ಲಾಗ್ ಕಡೆ ಬಂದಿರುವುದು ಭಾಗ್ಯವೇ ಸರಿ! ಬಹಳ ಸಂತೋಷವಾಯಿತು. ಧನ್ಯವಾದಗಳು. ಹೀಗೇ ಬರುತ್ತಿರಿ.

    ReplyDelete
  8. Yes dinakar Sir.. Im really proud to be an Indian that is why during match Im always proudly on the opposite side.. Thanks a lot

    ReplyDelete
  9. All is wellllllllllllllllll..Jai Ho..........Nice article Pradeep...

    ReplyDelete
  10. ಪ್ರದೀಪ್, ವಿಶ್ವಕಪ್ ಗೆದ್ದ ಸಂತೋಷ ಒಂದೆಡೆಯಾದರೆ ನನಗೆ ವಿಶೇಷ ಎನಿಸಿದ್ದು..ತಂಡದ ಎಲ್ಲರೂ ಇದನ್ನು ಸಾಧಿಸಿ ಸಚಿನ್ ಗೆ ಕಾಣಿಕೆ ನೀಡಬೇಕೆಂಬ ನಿರ್ಧಾರ...ಚನ್ನಾಗಿದೆ ಲೇಖನ ಮತ್ತು ಚಿತ್ರಗಳು..

    ReplyDelete
  11. ಪ್ರಿಯ ಪ್ರದೀಪ್...

    ನಾನು ಕ್ರಿಕೆಟ್ ನೋಡುವದು ಕಡಿಮೆಯಾಗಿಬಿಟ್ಟಿದೆ...

    ಮೊನ್ನೆಯ ವಿಷ್ವ ಕಪ್ ನೋಡಿದೆ.. ತುಂಬಾ ಸೊಗಸಾಗಿತ್ತು ಪಂದ್ಯ..
    ಕ್ರಿಕೆಟ್ ಮತ್ತೆ ಮೊದಲಿನ ಛಾಪು ಪಡೆಯುತ್ತೇನೊ ಅಂತ ಅನ್ನಿಸತೊಡಗಿದೆ..

    ReplyDelete
  12. ನಿಜ ನಾಗರಾಜ್‍ರವರೇ ಸಚಿನ್ ಫ಼ೈನಲ್‍ನಲ್ಲಿ ಔಟಾದಾಗ ನಾವೆಲ್ಲ ಬೇಸರಗೊಂಡೆವು.. World cupಗಾಗಿ ಅವರು ಪಟ್ಟ ಶ್ರಮ ಅರಿತ ಆಟಗಾರರು ಅದನ್ನು ಅವರಿಗೇ ಸಮರ್ಪಿಸಿದ್ದು ಸಾರ್ಥಕವಾಯಿತು! Thanks!

    ReplyDelete
  13. True Asha we are all very proud now!
    1983 has repeated again in 2011
    Thanks!

    ReplyDelete
  14. ಹೌದು ಪ್ರಕಾಶ್ ನಮ್ಮ ದೇಶದ ಕ್ರಿಕೆಟ್ ಭವಿಷ್ಯ ಈಗ ಮತ್ತೆ ಉಜ್ವಲವಾಗಿದೆ. ಇದೊಂದು ಅತ್ಯುತ್ತಮವಾದ ಸಾಧನೆಯಾಗಿದೆ. ಧನ್ಯವಾದಗಳು!

    ReplyDelete
  15. keep on betting against india friend!!!!!

    ReplyDelete
  16. Sure Manju.. Always ready for anything for India!

    ReplyDelete
  17. naanu serious aagi shuruvininda kadetanaka match nodidare India aa match solutte. idu nanna anubhava. adakke ee match nalli swalpa hottu horage hogidde :-)

    ReplyDelete
  18. ಒಹ್! ಒಳ್ಳೆ ಕೆಲಸ ಮಾಡಿದ್ರಿ ಸಾರ್.. ಭಾರತ ಗೆಲ್ಲುವುದಕ್ಕೆ ನಿಮ್ಮ ಕೊಡುಗೆಯೂ ಇದೆ ಅಂತಾಯ್ತು

    ReplyDelete