Friday, March 25, 2011

ಮಂತ್ರಾಲಯ ದರ್ಶನ

ಗೆಳೆಯರೇ,




ಈ ಬಾರಿ ಈ ಪ್ರೇಮಕವಿಯ ಪಯಣ ಸಾಗಿದ್ದು ಮಂತ್ರಾಲಯದ ಕಡೆಗೆ! ಒಳ್ಳೆಯದನ್ನು ಒಬ್ಬರೇ ಇಟ್ಟುಕೊಳ್ಳಬಾರದು, ಎಲ್ಲರಿಗೂ ಹಂಚಬೇಕು ಎನ್ನುತ್ತಾರೆ. ಆದ್ದರಿಂದ ನನ್ನ ಮಂತ್ರಾಲಯ ಪ್ರವಾಸದ ಅನುಭವವನ್ನೂ, ಅಲ್ಲಿನ ಕೆಲವು ಸುಂದರ ದೃಶ್ಯಗಳನ್ನು ಸೆರೆ ಹಿಡಿದು ನಿಮ್ಮೊಡನೆ ಹಂಚಿಕೊಳ್ಳಲೆಂದು ಈ Blog post.. ನಿಮ್ಮೆಲ್ಲರ ಮೇಲೆ ಶ್ರೀ ಗುರು ರಾಘವೇಂದ್ರರ ಅನುಗ್ರಹ ಸದಾ ಕಾಲ ಇರಲಿ ಎಂದು ಬೇಡುವೆ.. ಮಂತ್ರಾಲಯವು ಉತ್ತರ ಕರ್ನಾಟಕ ಹಾಗು ಆಂಧ್ರಪ್ರದೇಶದ ಗಡಿ ಭಾಗದಲ್ಲಿ, ತುಂಗಭದ್ರ ನದಿಯ ತೀರದಲ್ಲಿರುವ ಒಂದು ಚಿಕ್ಕ ಊರು. ಇದು ಆಂಧ್ರಪ್ರದೇಶಕ್ಕೇ ಸೇರಿದ್ದಾದರೂ ಎಲ್ಲರೂ ಕನ್ನಡವನ್ನೂ ಮಾತಾಡುತ್ತಾರೆ. ಎಲ್ಲೆಡೆ ಕನ್ನಡದ ನಾಮಫಲಕಗಳನ್ನೂ ನೋಡಬಹುದು! ರಾಯಚೂರಿನಿಂದ ಸುಮಾರು 30km ಹಾಗು ಬಳ್ಳಾರಿಯಿಂದ ಸುಮಾರು 140 km ದೂರದಲ್ಲಿದೆ. ಇಲ್ಲಿನ ಮುಖ್ಯ ಆಕರ್ಷಣೆ ಶ್ರೀ ಗುರು ರಾಘವೇಂದ್ರರ ಬೃಂದಾವನವಿರುವ ಮಠ. ಪವಾಡ ಪುರುಷರಾಗಿ ರಾಘವೇಂದ್ರ ಎಂದು ಪ್ರಸಿದ್ಧರಾದ ವೆಂಕಟನಾಥ ಎಂಬ ಯತಿಶ್ರೀಗಳು 1671ರಲ್ಲಿ ಇಲ್ಲಿನ ಬೃಂದಾವನವನ್ನು ಸಜೀವವಾಗಿ ಪ್ರವೇಶಿಸಿದರು. ಅಂದರೆ ಅವರ ಆಗ್ನೆಯಂತೆ, ಅವರು ಧ್ಯಾನದಲ್ಲಿ ಮಗ್ನರಾಗಿರುವಾಗ ಅವರ ಸುತ್ತ ಕಲ್ಲುಬಂಡೆಗಳಿಂದ ಈ ಬೃಂದಾವನವನ್ನು ನಿರ್ಮಿಸಲಾಯಿತು. ಅವರು ಇಂದಿಗೂ ಈ ಬೃಂದಾವನದಲ್ಲಿ ಇದ್ದಾರೆ ಎಂದು ಹೇಳುತ್ತಾರೆ. ಅವರು ಜನಿಸಿದ ದಿನದಂದೇ ಅವರಿಗೇ ಆಧ್ಯಾತ್ಮಿಕ ದೃಷ್ಟಿಯಿಂದ 700 ವರ್ಷ ಆಯಸ್ಸೆಂದು ಮಹಾಗ್ನಾನಿಗಳು ಭವಿಷ್ಯ ನುಡಿದಿದ್ದರು. ಅವರು ಈ ಬೃಂದಾವನ ಪ್ರವೇಶಿಸಿ 339 ವರ್ಷಗಳು ಕಳೆದಿವೆ. ಇನ್ನು 361 ವರ್ಷ ರಾಯರು ಇಲ್ಲೇ ಇದ್ದು ನೋಡಲು ಬರುವ ಭಕ್ತಾದಿಗಳನ್ನು ಹರಿಸುತ್ತಿರುತ್ತಾರೆ ಎಂದು ಬಲವಾದ ನಂಬಿಕೆ ಇದೆ.








ಬೆಳಗಾಯಿತು ಏಳು ಶ್ರೀ ಗುರು ರಾಘವೇಂದ್ರ... ಮಂತ್ರಾಲಯ ಮಠದ ಮುಖ್ಯ ದ್ವಾರದ ಎದುರು ಸೂರ್ಯೋದಯದ ದೃಶ್ಯ! =========================================================











ಮಠದ ಎದುರು ಹೊರಗೆ ಇರುವ ರಾಯರ ಪುತ್ತಳಿಯ ಮೇಲೆ ಮುಂಜಾನೆಯ ಪ್ರಥಮ ಸೂರ್ಯಕಿರಣಗಳು ==================================================================










ಮಠದ ಪಕ್ಕದಲ್ಲೇ ಇರುವ ಮಂಚಾಲಮ್ಮನ ದೇವಾಲಯ


ಮಂತ್ರಾಲಯಕ್ಕೆ ಇನ್ನೊಂದು ಹೆಸರು ಮಂಚಾಲೆ. ಇಲ್ಲಿನ ಗ್ರಾಮದೇವತೆ ಹೆಸರು ಮಂಚಾಲಮ್ಮ. ಮಠದ ಪಕ್ಕದಲ್ಲೇ ಮಂಚಾಲಮ್ಮನ ಸನ್ನಿಧಿ ಇದೆ. ಇಲ್ಲಿಗೆ ಬರುವ ಭಕ್ತಾದಿಗಳು ಮೊದಲು ಮಂಚಾಲಮ್ಮನ ದರ್ಶನ ಮಾಡಿ ನಂತರವೇ ರಾಯರ ದರ್ಶನಕ್ಕೆ ತೆರಳುವರು. =================================================================










ದೇವಾಲಯದ ಹಿಂಭಾಗದಲ್ಲಿರುವ ತುಂಗಭದ್ರಾ ನದಿ. 2009ರಲ್ಲಿ ಭಾರಿ ಪ್ರವಾಹವನ್ನು ತಂದು ಇಡೀ ಮಂತ್ರಾಲಯವನ್ನೇ ಮುಳುಗಿಸಿದ್ದ ತುಂಗಭದ್ರಾ ನದಿ ಈ ಬೇಸಿಗೆಗೆ ಒಣಗಿ ಹರಿಯುವುದನ್ನೆ ಮರೆತಿದ್ದಾಳೆ! 2009ರಲ್ಲಿ ಬಂದ ಭಾರಿ ಪ್ರವಾಹದಲ್ಲಿ ಇಲ್ಲಿನ ದೇವಸ್ಥಾನವೂ ಮುಳುಗಿ ಹೋಗಿತ್ತು. ಮಂಚಾಲಮ್ಮನ ದೇವಾಲಯವೂ ಬಿದ್ದು ಹೋಗಿತ್ತು. ರಾಯರ ಬೃಂದಾವನವೂ ಸಂಪೂರ್ಣ ಮುಳುಗಿತ್ತು. ಇಲ್ಲಿನ ಕಟ್ಟಡಗಳ ಎರಡನೆಯ ಮಹಡಿಯವರೆಗೆ ನೀರು ಬಂದಿತ್ತು. ಇಲ್ಲಿನ ಮಠದ ಸ್ವಾಮಿಗಳಾದ ಸುಯತೀಂದ್ರ ಶ್ರೀಗಳನ್ನು Helicopter ತಂದು ರಕ್ಷಿಸಲಾಗಿತ್ತು! ಇವೆಲ್ಲ ನಡೆದುದಕ್ಕೆ ಮಂಚಾಲಮ್ಮನ ಶಾಪವೇ ಕಾರಣವೆಂದು ಜನ ನಂಬಿದ್ದರು. ಈಗ ಇಲ್ಲಿ ಕಾಣುತ್ತಿರುವ ಕಟ್ಟಡಗಳೆಲ್ಲ ಹೋದ ವರುಷ ಪುನರ್ ನಿರ್ಮಾಣಗೊಂಡಿರುವುದು. ====================================================================









ತುಂಗಭದ್ರಾ ನದಿಯಲ್ಲಿ ಮಿಂದು, ಮಂಚಾಲಮ್ಮನ ದರ್ಶನ ಮಾಡಿ, ರಾಯರ ಮಠದ ಒಳಗೆ ಹೋದೆ. ಒಳಗೆ ಧರ್ಮ ದರ್ಶನಕ್ಕೇ ಬೇರೆ ಬಾಗಿಲು ಹಾಗು ಸೇವಾದರ್ಶನಕ್ಕೆ ಬೇರೆ ಬಾಗಿಲುಗಳಿದ್ದವು. ದೇವಾಲಯದ ಸುತ್ತಲಿನ ಗೋಡೆಗಳ ಮೇಲೆ ರಾಯರ ಇಡೀ ಜೀವನದ ಮುಖ್ಯ ಸನ್ನಿವೇಶಗಳನ್ನು ಬಣ್ಣ ಬಣ್ಣದ ಚಿತ್ರಗಳಲ್ಲಿ ಬಿಡಿಸಿದ್ದಾರೆ.



====================================================================









ಶ್ರೀ ಗುರು ರಾಘವೇಂದ್ರರ ಸನ್ನಿಧಿ. ಬೃಂದಾವನ. ಮಠದ ಒಳಗೆ ಮೊಬೈಲ್ ಮತ್ತು ಕ್ಯಾಮೆರಾಗಳಿಗೆ ಅನುಮತಿಯಿಲ್ಲದಿದ್ದರೂ ರಾಯರ ಬೃಂದಾವನದ ಫೋಟೋ ತೆಗೆಯಲೇಬೇಕು ಎಂದು ಪಟ್ಟು ಹಿಡಿದು, ಕದ್ದು ಮುಚ್ಚಿ ಒಳಗೆ ಕೊಂಡೊಯ್ದು ಈ ಫೋಟೋ ತೆಗೆದೇ ಬಿಟ್ಟೇ! ಕ್ಷಮೆಯಿರಲಿ! =======================================================










ರಾಯರ ಬೃಂದಾವನದ ಪಕ್ಕದಲ್ಲೇ ಇರುವ ಶ್ರೀ ವಾಧೀಂದ್ರ ತೀರ್ಥರ ಬೃಂದಾವನ. =======================================================================









11-04-2009 ರಂದು ಸ್ವರ್ಗಸ್ಠರಾದ ಶ್ರೀ ಸುಶಮೀಂದ್ರ ತೀರ್ಥರ ಬೃಂದಾವನ. ===================================================================










ಮಂತ್ರಾಲಯದ ಸುಪ್ರಸಿದ್ಧ ಪರಿಮಳ ಪ್ರಸಾದ ತಯಾರಾಗುತ್ತಿರುವ ಅಡುಗೆಮನೆ =================================================================================









ಮಠದ ದಾರಿಯ ಉದ್ದಕ್ಕೂ ಕಾಣುವ ಹೊಳೆಯುವ ವಿಧ-ವಿಧ ಲೋಹಗಳ ಕೈಬಳೆ ಹಾಗು ಉಂಗುರಗಳು.


ಸದಾ ಮೂಗಿನ ಮೇಲೆ ಸಿಟ್ಟು ಇರುವವರು ಮಂತ್ರಾಲಯಕ್ಕೆ ಬಂದು ದರ್ಶನ ಮಾಡಿ ಈ ಉಂಗುರವನ್ನು ಇಲ್ಲವೇ ಕೈಬಳೆಯನ್ನು ತೊಟ್ಟರೆ ದೇಹದ ಉಷ್ಣ ಕಡಿಮೆಯಾಗುವುದೆಂದು ಹೇಳುವುದುಂಟು!







===========================================================================





ಇಲ್ಲಿನ Local Transport - ಜಿಂಗ್‍ಚಾಕಾಗಿರೋ ಆಟೋ!

ಮಂತ್ರಾಲಯದಲ್ಲಿ ಅಲ್ಪ ಸಂಖ್ಯೆಯಲ್ಲಿರುವ ಮುಸ್ಲಿಮರಿಗೆ ಈ ಆಟೋಗಳೇ ಜೀವನೋಪಾಯ. ಸುತ್ತಮುತ್ತಲಿನ ಹಳ್ಳಿಗಳಿಗೆ ಒಮ್ಮೆಗೆ 15-17 ಸೀಟು ಹಾಕಿಕೊಂಡು ಓಡಿಸುತ್ತಾರೆ. ಇಲ್ಲಿಂದ ಸುಮಾರು 20km ದೂರದಲ್ಲಿ ಪಂಚಮುಖಿ ಆಂಜನೇಯ ದೇವಸ್ಥಾನವಿದೆ. ಅಲ್ಲಿ ರಾಘವೇಂದ್ರ ಸ್ವಾಮಿಗಳು 12 ವರ್ಷಗಳ ಕಾಲ ಕುಳಿತು ತಪಸ್ಸು ಮಾಡಿದ ಗುಹೆಯಿದೆ. ಅವರ ತಪಸ್ಸಿಗೆ ಮೆಚ್ಚಿ ಆಂಜನೇಯನು ಈ ಪಂಚಮುಖಿ ಅವತಾರದಲ್ಲಿ ಪ್ರತ್ಯಕ್ಷನಾದನೆಂದು ಚರಿತ್ರೆ ಇದೆ. ಈ ದೇವಾಲಯಕ್ಕೆ ಇದೇ ಆಟೋ ಹತ್ತಿ ಹೊರಟೆ.. ಹೋಗುವ ದಾರಿಯಲ್ಲಿ ಇಡಪನೂರು ಬಳಿ ತುಂಗಭದ್ರ ನದಿಗೆ ಅಡ್ಡವಾಗಿ ಒಂದು ಸೇತುವೆ ಬರುತ್ತದೆ. ಇಲ್ಲಿ ನದಿಯ ಒಂದು ತೀರ ಕರ್ನಾಟಕ, ಮತ್ತೊಂದು ತೀರ ಆಂಧ್ರ. ಆಂಧ್ರದಿಂದ ಸೇತುವೆ ದಾಟಿ ಕರ್ನಾಟಕಕ್ಕೆ ಬರುತ್ತಿದಂತೆ ಚಾಲಕನು ತನ್ನ ಬದಿಯ ಸೀಟಿನಲ್ಲಿ ಕುಳಿತಿದ್ದ ಇಬ್ಬರನ್ನು ಹಿಂದೆ ಸೇರಿಸಿ, ತಾನು ಖಾಕಿ ಶರ್ಟನ್ನು ಹಾಕಿಕ್ಳ್ಳುತ್ತಾ ಈ ಕರ್ನಾಟಕ ಪೋಲೀಸರು ಮಾಮೂಲಿಗೆ ಸಾಯುತ್ತಾರೆ ಎಂದು ಗೊಣಗಿಕೊಂಡ. ಆಟೋದ ಒಳಗೆ ಕಿಶ್ಕಿಂದಿಯಲ್ಲಿ ನೇತುಹಾಕಿಕೊಂಡು ಹೋಗುತ್ತಿದ್ದರೆ ಅವನದು ಮ್ಯೂಸಿಕ್ ಸಿಸ್ಟಮ್ ಹಾಕಿದ! ಅದರಲ್ಲಿ ದಾರಿ ಉದ್ದಕ್ಕೂ "ಜಾನೇ ಜಾ" ಅಂತ ಯಾವುದೋ ಕರ್ಕಶ ದನಿಯ ಹಳೇ ಖವ್ವಾಲಿ! ರಾಮ ರಾಮ! ಸಾಕಾಗೋಯ್ತು! ==============================================================================








ಪಂಚಮುಖಿ ಆಂಜನೇಯ ದೇವಸ್ಥಾನ

=================================================================








ನಿಸರ್ಗ ನಿರ್ಮಿತ ವಿಮಾನ

=====================================================================








ನಿಸರ್ಗ ನಿರ್ಮಿತ ಗದ್ದುಗೆ ಮತ್ತು ತಲೆ ದಿಂಬು =========================================================================







ನಮ್ಮ ಜಿಂಗ್‍ಚಾಕ್ ಆಟೋ ಮೇಲೆ ಒಂದು ಮುಸ್ಲಿಂ ಬಾವುಟ, ಸುಂದರ ಪ್ಲಾಸ್ಟಿಕ್ ಹೂಗುಚ್ಛ, ಹಾರುತ್ತಿರುವ ಮಿಣ ಮಿಣ ಬಟ್ಟೆ ಜೊತೆಗೆ ಸಂಜೆಯ ಸುಂದರ ನೀಲಿ ಆಕಾಶ!

=====================================================================================








ತುಂಗಾ ತೀರದಲ್ಲಿ ಸೂರ್ಯಾಸ್ತ

=====================================================================================










ಸೂರ್ಯಾಸ್ತದ ಎದುರು ನನ್ನದೂ ಒಂದು "Simple Guy" type phose!


=====================================================================








ನದಿಯ ದಂಡೆ ಮೇಲೆ ಕಬ್ಬಿನ ಹಾಲು ಮಾರುವವ.. ಸಂಜೆ ಟೈಮ್.. Full Busy!

====================================================================================








ಚಂದ್ರೋದಯ.. 19th March 2011 - Super Moon ಆಗಲು ಹೊರಟಿರುವ ಚಂದ್ರ

================================================================================








ಸಂಜೆಯ ಸಮಯದಲ್ಲಿ ರಾಯರು ತೇರನ್ನೇರಿ ಹೊರಟಿದ್ದಾರೆ.

================================================================================== ರಾಯರ ಬಗ್ಗೆ ಕಲೆ ಹಾಕಿದ ಕೆಲವು ಮಾಹಿತಿಗಳು ===========================





ರಾಯರ ಬಗ್ಗೆ ಕಲೆ ಹಾಕಿದ ಕೆಲವು ಮಾಹಿತಿಗಳು
===========================
ನಿಜವಾದ ಹೆಸರು - ವೇಂಕಟನಾಥ
ಜನ್ಮ ದಿನಾಂಕ - 1597 AD ಮನ್ಮಥನಾಮ ಸಂವತ್ಸರ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ
ಜನ್ಮಸ್ಥಳ - ಭುವನಗಿರಿ
ನಕ್ಷತ್ರ - ಮೃಗಶಿರಾ
ತಂದೆಯ ಹೆಸರು - ತಿಮ್ಮಣ್ಣ ಭಟ್ಟರು
ತಾಯಿಯ ಹೆಸರು - ಗೋಪಿಕಾಂಬ
ಅಕ್ಕ - ವೇಂಕಟಾಂಬ
ಅಣ್ಣ - ಗುರುರಾಜಾಚಾರ್ಯರು
ಉಪನಯನ - 1602 AD
ವಿವಾಹ - 1614 AD
ಪತ್ನಿ - ಸರಸ್ವತೀಬಾಯಿ
ಪುತ್ರ - ಲಕ್ಷ್ಮೀನಾರಾಯಣಾಚಾರ್ಯ
ಸನ್ಯಾಸ ಸ್ವೀಕಾರ - 1621 AD
ಬರೆದ ಒಟ್ಟು ಗ್ರಂಥಗಳು - 48
ಬೃಂದಾವನ ಪ್ರವೇಶ - 1671 AD ವಿರೋಧಿ ನಾಮ ಸಂವತ್ಸರ ಶ್ರಾವಣ ಬಹುಳ ಬಿದಿಗೆ, ಗುರುವಾರ



================= ~~~~~ ooooooooooo ~~~~~ =================

ಮಾರನೇ ದಿನ ಮುಂಜಾನೆ ಮಂತ್ರಾಲಯದಿಂದ ಹೊರಟು ನಾನು ವಿದ್ಯಾಭ್ಯಾಸ ಮಾಡಿದ ಊರಾದ ದಾವಣಗೆರೆಯ ಕಡೆಗೆ ಪ್ರಯಾಣ ಬೆಳೆಸಿದೆ. ಬಳ್ಳಾರಿಯ ಮುಖಾಂತರ ಹೋಗಬೇಕಾದರೆ ಕೆಲವು ಸುಂದರ ದೃಶ್ಯಗಳು ಕಂಡವು. ಬಿಡದೇ ಕ್ಯಾಮೆರಾ ಕ್ಲಿಕ್ಕಿಸಿದೆ..








ಛಳಿಯಲ್ಲಿ ನಡಗುತಾ ನಿಂತ ಒಂಟಿ ಗಿಡಗಳಿಗೆ ಮತ್ತೊಮ್ಮೆ ಆಸೆ ಹುಟ್ಟಿಸಲು ಬಂದ ಬೆಚ್ಚನೆಯ ಬೆಳಕಿನ ರವಿರಾಯ! ಆ ಆಸೆಗೆ ಕೆಂಪಾದ ಕೆನ್ನೆಗಳ ಬಣ್ಣ ಮಾಸುವ ಮುನ್ನ ಬಿಡದೇ ಕ್ಯಾಮೆರಾ ಕ್ಲಿಕ್ಕಿಸಿದ ಈ ಕವಿರಾಯ! =========================================================







ಬಳ್ಳಾರಿ ಜಿಲ್ಲೆಯ ಸೊಂಡೂರಿನ ಧೂಳು ತುಂಬಿದ ಗಣಿಯ ದಾರಿಯಲ್ಲಿ ಸೋಲೆನ್ನದೆ ಸಾಗಿದೆ ಆಮೆ ಗತಿಯಲ್ಲಿ ಜನ ಜೀವನ.. ===================================================================








ಗಣಿಗಳ ಧೂಳಿನಲ್ಲಿ ಮುಚ್ಚಿ ಹೋದ ದಾರಿಗಳ ಬದಿಗೊಂದು ಚೂರು Greenery - Scenery! ತಾರನಗರ ಜಲಾಶಯ, ಬಳ್ಳಾರಿ









15 comments:

  1. ೧೯೯೮ರಲ್ಲಿ ನಮ್ಮ ಕುಟು೦ಬ ವರ್ಗದವರೆಲ್ಲಾ ಮ೦ತ್ರಾಲಯಕ್ಕೆ ಹೋಗಿದ್ದೆವು. ಈಗ ನೀವು ತೆಗೆದಿರುವ ಫೋಟೋಗಳು ನೆನಪುಗಳನ್ನು ನವೀಕರಿಸಿದವು. ನೀವು ನೀಡಿರುವ ಮಾಹಿತಿ , ದಾರಿಯ ದೃಶ್ಯಾವಳಿಗಳು ಎಲ್ಲವು ಚೆನ್ನಾಗಿವೆ. ಜಿಂಗ್‍ಚಾಕ್ ಆಟೋ ಕೂಡಾ ಸಕತ್ತಾಗಿದೆ ಪ್ರದೀಪ್. ರಾಯರ ಮೇಲೆ ಬಹಳ ಭಕ್ತಿ ಇರೊಹಾಗಿದೆ!

    ReplyDelete
  2. very nice.......
    inspired to visit Mantralaya .........
    sure ll visit with my family .............

    ReplyDelete
  3. ತುಂಬಾ ಧನ್ಯವಾದಗಳು ಪ್ರಭಾಮಣಿಯವರೇ, 1998 ಎಂದರೆ 13 ವರ್ಷಗಳೇ ಆಗಿ ಹೊಯ್ತಲ್ಲ! ಸಮಯವಾದರೆ ಮತ್ತಮ್ಮೆ ಹೋಗಿ ಬನ್ನಿ ಚೆನ್ನಾಗಿರುತ್ತೆ. ಅಲ್ಲಿ ಬೇಸಿಗೆಯಲ್ಲಿ ಬಹಳ ಸೆಕೆ, ಮಳೆಗಾಲದಲ್ಲಿ ಪ್ರವಾಹ! ಕಾಲ ನೋಡಿಕೊಂಡು ಹೋಗಿಬನ್ನಿ.. ಹೌದು ಡಾ. ರಾಜ್ ಅಭಿನಯದ 1976 ಚಿತ್ರ "ಮಂತ್ರಾಲಯ ಮಹಾತ್ಮೆ" ನೋಡಿದ ಮೇಲಂತೂ ರಾಯರ ಮೇಲೆ ಭಕ್ತಿ ಹೆಚ್ಚಾಗಿದೆ..

    ReplyDelete
  4. ತು೦ಬಾ ಹಿ೦ದೆ ಮ೦ತ್ರಾಲಯವನ್ನು ನೋಡಿದ್ದೆ..
    ಚೆ೦ದದ ವಿವರಣೆಗಳು..ಸು೦ದರ ಫೋಟೋಗಳು..ನೋಡಿ ಖುಶಿಯಾಯ್ತು..
    ಶುಭವಾಗಲಿ.

    ReplyDelete
  5. ಧನ್ಯವಾದಗಳು ಮನಮುಕ್ತಾರವರೇ..

    ReplyDelete
  6. pradeep photo's matra super mastagive... noDta iddre mattomme noDona ansutte... thanks a lot

    ReplyDelete
  7. Thanks Manasuravare.. "Super Mastagive"-- Double degree!?? ha ha ha :)

    ReplyDelete
  8. Very Nice...........Superbbb...nimma lekhana odi/nodi Darushan maadidaste anubhavavayitu....Dhanyavadagalu...

    ReplyDelete
  9. Tumba thanks Ashok.. Devaru nimma ella bedikegaLannu ederisali

    ReplyDelete
  10. tumba chendada nirupane jotege puraka sundara chitragalu.

    ReplyDelete
  11. tumba thanks Sitaram sir.. Welcome back to my blog! :)

    ReplyDelete
  12. ನೆನ್ನೆ ತಾನೇ ಜೀವನದಲ್ಲಿ ಈ ನಡುವಿನ ೬ ತಿಂಗಳಲ್ಲಿ ೩ ನೇ ಬಾರಿಗೆ ರಾಯರ ದರ್ಶನ ಆಯಿತು ಅಶ್ಚರ್ಯವೆನ್ನಿಸುವ ಅನುಭವ ಹಾಗೂ ಸುಂದರ ದರ್ಶನ

    ReplyDelete