Wednesday, September 8, 2010

ಅಂತು ಇಂತು.. ಮೆಟ್ರೋ ಬಂತು..





ಅಂತೂ ಬಂತು ಬೆಂಗಳೂರಿಗೆ ಮೆಟ್ರೋ
ಅದಕಾಗಿ ಅದೆಷ್ಟು ಕೋಟಿ ಕೊಟ್ಟ್ರೊ?
ಸಾವಿರಾರು ಸಾಲು ಮರಗಳ ಸುಟ್ಟ್ರೊ?
ಅದೆಷ್ಟು ಮಂದಿ ಮನೆ ಅಂಗಡಿ ಬಿಟ್ಟ್ರೊ?

ಬಂದಿತು ನಮ್ಮೂರಿಗೆ ಮೆಟ್ರೊ ರೈಲು
ಮರುಳಾದರು ಜನ ನೋಡಿ ಅದರ ಸ್ಟೈಲು
ಕೆಲವರು ಕುತೂಹಲದಿ ಎಂ.ಜಿ. ರಸ್ತೆಗೆ ಹೋಗಿ
ಕಂಡರು ಕೊರಿಯಾದಿಂದ ಬಂದ ಬೋಗಿ





ಅಗೆದರು ನಗರದಿ ಇದ್ದ ಎಲ್ಲಾ ರಸ್ತೆ
ರೋಡಿಗಿಳಿದರೆ ಸಾಕು ಪಡಬಾರದಷ್ಟು ಅವಸ್ಥೆ
ಕಟ್ಟುವಾಗಲೆ ಉರುಳಿ ಬಿತ್ತು ಎರಡು ಬಾರಿ
ಸೇತುವೆ ಅಡ್ಡ ಬಿದ್ದು ಹೇಳಿದಂತೆ ನಮಸ್ತೆ


ಸೇತುವೆ ಕಟ್ಟಿದರು ಮೇಲೆ ಹೋಗಲು ಟ್ರೇನು
ಸೇತುವೆ ಜೊತೆಗೆ ಉರುಳಿ ಬಿತ್ತು ದೊಡ್ಡದೊಂದು ಕ್ರೇನು
ಯೋಜನೆ ರೂಪಿಸಿದವರಿಗೆ ಇತ್ತೊ ಇಲ್ಲವೊ ಬ್ರೇನು
ಹೋದ ಜೀವಗಳು ಬರುವುದೇ ಪರಿಹಾರ ಕೊಟ್ರೇನು?

NOTE: All pictures taken by myself!

6 comments:

  1. ಚೆನ್ನಾಗಿ ಬರೆದಿದ್ದಿರಾ..ಮೆಟ್ರೋ ಅವಾ೦ತರ ಜೊತೆಗೆ ಅದರ ಸೊಬಗು.

    ReplyDelete
  2. ಪ್ರೇಮ ಕವಿಗಳೆ,
    ತುಮ್ಬಾ ಚೆನ್ನಾಗಿದೆ ನಿಮ್ಮ ಪರಿಕ್ರಮ.... ಮೆಟ್ರೋ ರೈಲಿನ ಚಿತ್ರದ ಫೋಟೊ ಪಜೀತಿ ಚೆನ್ನಾಗಿದೆ.... ನನ್ನ ಬ್ಲೊಗ್ ಗೆ ಬನ್ನಿ....

    ReplyDelete
  3. @ ಸೀತಾರಾಮ್ ಸಾರ್ ತುಂಬ ಧನ್ಯವಾದಗಳು..

    @ ದಿನಕರ್ ಸಾರ್ ತುಂಬಾ ಧನ್ಯವಾದಗಳು.. ನಿಮ್ಮ ಬ್ಲೊಗ್ ನೋಡಿದೆ "ತಪ್ಪು ಯಾರದು?" ಎಂಬ ರೈಲ್ವೆ ಅಪಘಾತದ ಬಗೆಗಿನ ನಿಮ್ಮ ಅದ್ಭುತ ಕಥೆಯನ್ನು ಓದಿದೆ.. Superb..

    ReplyDelete
  4. ಹಾಯ್ ಪ್ರದೀಪ್ ,

    ಚಿತ್ರಗಳೊಂದಿಗೆ ಬಂದ ನಿಮ್ಮ ' ಮೆಟ್ರೋ ರೈಲು' ತುಂಬಾ ಚೆನ್ನಾಗಿತ್ತು, ಪ್ರಾಸ ಸಂಯೋಜನೆ ಇಷ್ಟ ಆಯಿತು, ಸುಂದರ ಕವನ...ಧನ್ಯವಾದಗಳು....

    ReplyDelete
  5. ಕವಿತೆ + ವಿಚಾರ + ಚಿತ್ರಗಳ ಬಳಕೆ ಅತೀ ಸೊಗಸಾಗಿದೆ.. ಆದರೆ ವಿಷಯಕ್ಕೆ ಹೊಂದುವಂತೆ ಮರಗಳ ಕಡಿದ ಚಿತ್ರ ಮತ್ತು ಸೇತುವೆಯ ಚಿತ್ರ ಹಾಗು ಅದರಿಂದ ಆದ ರಸ್ತೆ ಅಡೆತಡೆಗಳ ಚಿತ್ರಣವನ್ನು ಸೇರಿಸಿದರೆ ಇನ್ನೂ ಅರ್ಥಪೂರ್ಣ ಹಾಗು ಹೆಚ್ಚು ಆಕರ್ಷಣೆ ಈ ಕವಿತೆಯಲ್ಲಿ ಹುಟ್ಟುತ್ತದೆ.. ಸ್ವಲ್ಪ ಪ್ರಯತ್ನ ಮಾಡಿ ನೋಡಿ.. ವಂದನೆಗಳು.. :)

    ReplyDelete