Wednesday, December 30, 2009


....ಮುಗಿಯದು ಮುತ್ತಿನ ಹಾರದ ಕವನ...





ಮೊದಲ ಪುಟಕೂ ಕೊನೆಯ ಪುಟಕೂ ನಡುವೆ ಎನಿತು ಅಂತರ?..



ಕನ್ನಡ ನಾಡಿನ 'ಮುತ್ತಿನ ಹಾರ'ದಿಂದ
ಕಳಚಿ ಉದುರಿತು ಎರಡು ಮುತ್ತು
ಇಂದು ಅಭಿನವ ಭಾರ್ಗವ ವಿಷ್ಣು ಮತ್ತು
ನಿನ್ನೆ ನಮ್ಮ ಗಾನ ಗಾರುಡಿಗ ಅಶ್ವತ್ಥು

VISHNU VARDHAN


18th sept 1950 - 30th dec 2009




'ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ...'
ಎಂದು ನುಡಿದಿದ್ದವರಿಗೆ ಸಾಕಾಯಿತೇಕೆ?
ತಲುಪುವ ಮುಂಚೆ ಅರವತ್ತಕ್ಕೆ

ನಮ್ಮ ನಿಮ್ಮೆಲ್ಲರ 'ಕುಚಿಕು ಗೆಳೆಯ'
ತೊರೆದಿಹನಿಂದು ನಮ್ಮ ಕೇಳದೆ ಇಳೆಯ
'ಅಪರಾಧಿ ನಾನಲ್ಲ, ಅಪವಾದ ಎನಗಿಲ್ಲ'
ಎಂದು ನುಡಿದರೂ ಏಕೆ ಈ ವಿಧಿ?
ನಮ್ಮ 'ಆಪ್ತಮಿತ್ರ'ನಿಗೆ..
'ಆಪ್ತರಕ್ಷಕ'ನಾಗುವ ಮುನ್ನ..

'ನೂರೊಂದು ನೆನಪು ಎದೆಯಾಳದಿಂದ'
ಹಾಡಾಗಿ ಬರಲು ಸಾಧ್ಯವಿಲ್ಲ
ಇಂದು ಆನಂದದಿಂದ..
'ಕಥೆಯು ಮುಗಿದೆ ಹೋದರೂ..
ಮುಗಿಯದಿರಲಿ ಬಂಧನ' ಎಂದವರು
ಮುಗಿಸಿಹರು ಇಂದು ಎಲ್ಲಾ ಬಂಧನ
ಏಕೆ ಹೀಗೆ ಮಾಡಿದರೋ
ನಮ್ಮ ಪ್ರೀತಿಯ 'ಯಜಮಾನ'?

'ಈ ಭೂಮಿ ಬಣ್ಣದ ಬುಗುರಿ'
ಎಂದ 'ಮಡಿಕೇರಿ ಸಿಪಾಯಿ'ಯ
ಕಳಿಸಿ ಹೇಳಿಹೆವಿಂದು ವಿದಾಯ

'ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ'
ಎತ್ತಿಹಿಡಿದರು ಸಾರ್ಥಕತೆಯ ಅವರು
ಕನ್ನಡದ 'ಕೋಟಿಗೊಬ್ಬ'ರಾಗಿ ಬಾಳಿ

ಈ ಸಾಲುಗಳು...
ನಮ್ಮ ಅಭಿನವ ಭಾರ್ಗವನಿಗೆ ಅರ್ಪಣೆ
ಕೇಳಿಸದಲ್ಲ ಇನ್ನು
'ಜಯಸಿಂಹ', 'ಸಾಹಸಸಿಂಹ', 'ಸಿಂಹಾದ್ರಿಯ ಸಿಂಹದ' ಘರ್ಜನೆ

ಯುಗ ಯುಗಗಳೇ ಸಾಗಲಿ.. ನಿಮ್ಮ ನೆನಪು ಶಾಶ್ವತ....

Abhiman Studio


Me offering flowers at the cremation place, Abhiman Studio



*************************************************************************************************************************************************************







C. ASHWATH



29th dec 1939 - 29th dec 2009


ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೆ?...

ಬಳೆಗಾರ ಚೆನ್ನಯ್ಯ ಬಂದನು
ಬಂದು ನಿಂದನು, ಎಪ್ಪತ್ತರ ಬಾಗಿಲಿಗೆ,
ನಮ್ಮ ನೋಡಿ ನಕ್ಕನು ಹೊರಗಿಂದ..
ನೋಡಿ ಮುಗುಳ್ನಕ್ಕು ಹೊರಟು ಹೋದನು
ಹಾಗೆಯೇ....

ಬಹುಶಃ ಒಳಗೆ ಬರಲಪ್ಪಣೆ
ದೊರೆಯಲಿಲ್ಲವೋ ಏನೊ..
ದೊರೆಯಿಂದ...

ಗಾನ ಗಾರುಡಿಗನಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ...




4 comments:

  1. tumba tumba chennagide......vishnuvardhan bagge baridiroodu nanage tumba ista aithu......really nice........

    ReplyDelete
  2. Thank you Raksha.. actually Ashwath avra bagge nanage ashtu gottilladiruvudarinda hechhige svarasya aagi bareyoke aaglilla

    ReplyDelete