3K ಬಳಗದ ಶತಮಾನಂಭವತಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಂಸಲೇಖರವರು "ಕವಿತ್ವಕ್ಕೆ ಗ್ರಾಮ್ಯ ಸೊಗಡು ಅಗತ್ಯ. ಜಗತ್ತಿನಲ್ಲಿ ಮುಗ್ಧತೆಯನ್ನು ಹುಡುಕಲು ಹೊರಟಾಗ ಅದು ನಮಗೆ ಕಾಣಸಿಗುವುದು ಹಳ್ಳಿಗಾಡಿನ ಜನರಲ್ಲಿ ಎಂಬುದನ್ನು ಮರೆಯಬಾರದು" ಎಂದು ಅಭಿಪ್ರಾಯಪಟ್ಟಿದ್ದರು. ಅದೇ ಕಾರಣಕ್ಕೆ ನನ್ನ ಈ ಕವನವನ್ನು ಅವರು ಮೆಚ್ಚಿಕೊಂಡರು ಎಂದು ಕೇಳಿ ನನಗೆ ಅಪಾರ ಸಂತೋಷವಾಯಿತು! ಈ ಹಿಂದೆ ನೀವೆಲ್ಲಾ ಓದಿರಬಹುದು... ಮತ್ತೊಮ್ಮೆ ಶತಮಾನಂಭವತಿಯಲ್ಲಿ ಪ್ರಕಟಗೊಂಡ ನೆನಪಿಗೆ...
ಛಾಯಾಚಿತ್ರ ಕೃಪೆ - ಅಂತರ್ಜಾಲ
ಗಣಕ-ಗಮಕ
ಹಳ್ಳಿ ಹೈದರು ನಾವ್ ನಿನ್ನೀ ತನಕ
ಕಂಡಿರಲಿಲ್ಲ ಪ್ರತ್ಯಕ್ಷ ಒಂದೂ ಗಣಕ
ಇವತ್ಯಾಕೋ ನಮ್ಗೂ ತಿಳ್ಕೊಳ್ಳೋ ತವಕ
ಕಲಿಸಿದರೆ ಕಲೀತೀವ್ರಿ ಹಾಡ್ಕೊಂಡೇ ಗಮಕ!
ಬೆಳಗೈತಿ ಇದು ಇಂದು ಎಲ್ಲರ ಬದುಕ
ನೀಡೈತಿ ಇದ ಕಲಿತವಗೆ ಧನ ಕನಕ
ನಮ್ಮ್ಯಾಗೂ ದಯೆ ತೋರೋ ಓ ಬೆನಕ
ನಿನ್ಹಾಂಗ ಐತಲ್ಲೊ ಇಲಿಯೊಂದು ಇದಕ
ಮೋಡಿ ಮಾಡೈತ್ರಿ ಆ ಬಣ್ಣದ ಪರದೆ
ನೋಡಾಕಿದು ಥೇಟ್ ನಮ್ ಟಿವಿ ಥರದ್ದೇ
ಬೇಕಾದ್ ಕಡಿ ಕ್ಲಿಕ್ಕಿಸಬಹುದು ಇಲಿ ಹಿಡಿದ್ರೆ
ಕಣ್ಮುಚ್ಚಿ ತೆಗೆಯೋದ್ರೋಳಗ ಜಗತ್ತೇ ನಿಮ್ ಮುಂದೆ!
ಬೆರಳಚ್ಚು ಯಂತ್ರದ ಪುಟ್ಟ ಶಾಖೆ
ಕೊಟ್ಟರು ಒತ್ತಲು ನಮ್ಮೆಲ್ಲರ ಕೈಗೆ
ನೂರೊಂದು ಗುಂಡಿಗಳು ಇತ್ತು ರೀ ಅದಕೆ
ಮೇಷ್ಟ್ರಂದ್ರು ಏನೇನೋ ಒತ್ತೀರಿ ಜೋಕೆ!
ಗೊಂಯ್ಗುಡ್ತಿತ್ತು ಮೇಜಿನ ಕೆಳಗೊಂದು CPU
ಅದುವೇ ಗಣಕಯಂತ್ರದ ಪ್ರಧಾನ ಕಛೇರಿಯು
ಇರುವಂತೆ ನಮ್ಮ ಹಳ್ಳಿಗೊಬ್ಬ ಆಪೀಸರ್ರು
ಒಳಗೆ ಕುಂತೌನಂತೆ ಇಲ್ಲೊಬ್ಬ ಪ್ರೊಸೆಸ್ಸರ್ರು!
ಬಲು ಮೋಸ ತಮ್ಮ ಈ ಕಂಪ್ಯೂಟರ್ರು
ಮೇಜಿನ ಕೆಳಗೆ ಕೈ ಚಾಚಿದರೆ ಆ ಆಪೀಸರ್ರು
ಲಂಚದ ಆಸೆ ಹೆಚ್ಚಾಗಿ ಕಳ್ ಬಡ್ಡೀ ಮಗ
ಮೇಜಿನ ಕೆಳಗೇ ಕುಂತು ಬಿಟ್ಟೌನಲ್ಲಾ ಈ ಪ್ರೊಸೆಸ್ಸರ್ರು!
=============================
ಕಂಡಿರಲಿಲ್ಲ ಪ್ರತ್ಯಕ್ಷ ಒಂದೂ ಗಣಕ
ಇವತ್ಯಾಕೋ ನಮ್ಗೂ ತಿಳ್ಕೊಳ್ಳೋ ತವಕ
ಕಲಿಸಿದರೆ ಕಲೀತೀವ್ರಿ ಹಾಡ್ಕೊಂಡೇ ಗಮಕ!
ಬೆಳಗೈತಿ ಇದು ಇಂದು ಎಲ್ಲರ ಬದುಕ
ನೀಡೈತಿ ಇದ ಕಲಿತವಗೆ ಧನ ಕನಕ
ನಮ್ಮ್ಯಾಗೂ ದಯೆ ತೋರೋ ಓ ಬೆನಕ
ನಿನ್ಹಾಂಗ ಐತಲ್ಲೊ ಇಲಿಯೊಂದು ಇದಕ
ಮೋಡಿ ಮಾಡೈತ್ರಿ ಆ ಬಣ್ಣದ ಪರದೆ
ನೋಡಾಕಿದು ಥೇಟ್ ನಮ್ ಟಿವಿ ಥರದ್ದೇ
ಬೇಕಾದ್ ಕಡಿ ಕ್ಲಿಕ್ಕಿಸಬಹುದು ಇಲಿ ಹಿಡಿದ್ರೆ
ಕಣ್ಮುಚ್ಚಿ ತೆಗೆಯೋದ್ರೋಳಗ ಜಗತ್ತೇ ನಿಮ್ ಮುಂದೆ!
ಬೆರಳಚ್ಚು ಯಂತ್ರದ ಪುಟ್ಟ ಶಾಖೆ
ಕೊಟ್ಟರು ಒತ್ತಲು ನಮ್ಮೆಲ್ಲರ ಕೈಗೆ
ನೂರೊಂದು ಗುಂಡಿಗಳು ಇತ್ತು ರೀ ಅದಕೆ
ಮೇಷ್ಟ್ರಂದ್ರು ಏನೇನೋ ಒತ್ತೀರಿ ಜೋಕೆ!
ಗೊಂಯ್ಗುಡ್ತಿತ್ತು ಮೇಜಿನ ಕೆಳಗೊಂದು CPU
ಅದುವೇ ಗಣಕಯಂತ್ರದ ಪ್ರಧಾನ ಕಛೇರಿಯು
ಇರುವಂತೆ ನಮ್ಮ ಹಳ್ಳಿಗೊಬ್ಬ ಆಪೀಸರ್ರು
ಒಳಗೆ ಕುಂತೌನಂತೆ ಇಲ್ಲೊಬ್ಬ ಪ್ರೊಸೆಸ್ಸರ್ರು!
ಬಲು ಮೋಸ ತಮ್ಮ ಈ ಕಂಪ್ಯೂಟರ್ರು
ಮೇಜಿನ ಕೆಳಗೆ ಕೈ ಚಾಚಿದರೆ ಆ ಆಪೀಸರ್ರು
ಲಂಚದ ಆಸೆ ಹೆಚ್ಚಾಗಿ ಕಳ್ ಬಡ್ಡೀ ಮಗ
ಮೇಜಿನ ಕೆಳಗೇ ಕುಂತು ಬಿಟ್ಟೌನಲ್ಲಾ ಈ ಪ್ರೊಸೆಸ್ಸರ್ರು!
=============================
ಇದರ ಇನ್ನೊಂದು ಆಯಾಮವೂ ಇದೆ, ಹಳ್ಳಿಗಾಡಿನ ಯುವಕರಲ್ಲಿ ಮತ್ತು ಗ್ರಾಮೀಣ ಮಕ್ಕಳಲ್ಲಿ ಗಣಕ ಯಂತ್ರಗಳ ಅರಿವು ಮೂಡಿಸುವ ಗೀತೆಯಾಗಿಯೂ ಈ ಗೀತೆ ಬಳಸಿಕೊಳ್ಳಬಹುದು.
ReplyDeleteಮುಖ್ಯವಾಗಿ ಮನಸೆಳೆದದ್ದು :
"ನಮ್ಮ್ಯಾಗೂ ದಯೆ ತೋರೋ ಓ ಬೆನಕ
ನಿನ್ಹಾಂಗ ಐತಲ್ಲೊ ಇಲಿಯೊಂದು ಇದಕ"
ಮೊಟ್ಟ ಮೊದಲ ಪ್ರತಿಕ್ರಿಯೆಗೆ, ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು! Badarinath sir...
Deleteತುಂಬ ಇಷ್ಟವಾದ ಸಾಲುಗಳು:
ReplyDeleteಗೊಂಯ್ಗುಡ್ತಿತ್ತು ಮೇಜಿನ ಕೆಳಗೊಂದು CPU
ಅದುವೇ ಗಣಕಯಂತ್ರದ ಪ್ರಧಾನ ಕಛೇರಿಯು
ಇರುವಂತೆ ನಮ್ಮ ಹಳ್ಳಿಗೊಬ್ಬ ಆಪೀಸರ್ರು
ಒಳಗೆ ಕುಂತೌನಂತೆ ಇಲ್ಲೊಬ್ಬ ಪ್ರೊಸೆಸ್ಸರ್ರು!
ಸೂಪರ್ ಕವನ ಪ್ರದೀಪ್ :)
ತುಂಬಾ ಧನ್ಯವಾದಗಳು Sulatha Shetty
Deleteಗಣಕ ಯಂತ್ರಕ್ಕೆ ಪ್ರೇಮ ಕವಿಯ ನಮನ ಸೂಪರ್ ಆಗಿದೆ. ಆಫೀಸರ್ ಪ್ರೋಸೆಸ್ ಮಾಡಿದ್ರೆ ಕೆಲಸ.. ಪ್ರೊಸೆಸರ್ ಗೆ ಆಫೀಸ್ ಇದ್ರೆ ಗೆಲಸ... ಸೂಪರ್
ReplyDeleteತುಂಬಾ ಧನ್ಯವಾದಗಳು ಶ್ರೀಕಾಂತ್ ಸರ್
ReplyDeleteಪ್ರೇಮ ಕವಿಯ ಮನೆಯಂಗಳಕ್ಕೆ ಮೊದಲ ಬೇಟಿ.. ಮೊದಲ ಬೇಟಿಯಲ್ಲೇ ಮನ ಸೆಳೆದ ಸುಂದರ ಕವಿತೆ... ಸೂಪರ್ ಕವಿಗಳೇ... :)
ReplyDeleteಈ ಪಯಣಕೆ ಹೊಸದಾಗಿ ಸೇರಿಕೊಂಡ ಮೌನರಾಗಕ್ಕೆ ಸುಸ್ವಾಗತ. ಹೀಗೆ ಸಾಗುತ್ತಿರಿ ನಮ್ಮೊಂದಿಗೆ. ಧನ್ಯವಾದಗಳು!
Deleteಪ್ರದೀಪ್ ,
ReplyDeleteಈ ಕವನ ಎಲ್ಲರ ಪ್ರಸಂಶೆಗೆ ಪಾತ್ರವಾಗಬೇಕಾದ ಕವನ.... ಅದಕ್ಕೆ ಸಲ್ಲಬೇಕಾದ ಗೌರವ ಸಂದಿದೆ ಎಂದು ನನ್ನ ಅನಿಸಿಕೆ...
ತುಂಬಾ ಚೆನ್ನಾಗಿದೆ...
ಹಂಸಲೇಖರು ನೆನ್ನೆ ಮತ್ತೆ ಸಿಕ್ಕಿದಾಗಲೂ ನನ್ನ ಈ ಕವನವನ್ನು ಇನ್ನು ನೆನಪಿನಲ್ಲಿಟ್ಟುಕೊಂಡಿದ್ದು ಬಹಳ ಖುಷಿಕೊಟ್ಟಿತು! ಧನ್ಯವಾದಗಳು ದಿನಕರ್ ಸಾರ್!
Delete