Tuesday, May 14, 2013

ಶತಮಾನಂಭವತಿ




ಮೇ 12th  ಭಾನುವಾರ ಸಂಜೆ 5:30

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶತಮಾನಂಭವತಿ ಬಿಡುಗಡೆ

ನೂರುಜನ ಕವಿಗಳನ್ನು ಒಂದುಗೂಡಿಸಿ ಒಂದು ಕವನ ಸಂಕಲನ ಬಿಡುಗಡೆ ಮಾಡಿದ ಅಭೂತಪೂರ್ವ ಪ್ರಯತ್ನದಲ್ಲಿ 3K ಯಶಸ್ಸು ಕಂಡಿದೆ!

ನಮ್ಮೆಲ್ಲರ ಏಕತೆಯ ಸಂಕೇತ.. 3K Badge!
 3Kಯಲ್ಲಿ ಹುರುಪಿನ ಬಾವುಟವನ್ನು ಹಾರಿಸಿದ ಅಧಿನಾಯಕಿ ರೂಪಕ್ಕನವರೊಡನೆ ನಾನು!

ನೋಡಿ ನಮ್ಮ ಬಾಲಣ್ಣನವರ ಮುಗ್ಧ ಕೀಟಲೆಗಳು!




ಕ್ಯಾಮೆರಾ ಭರಾಟೆ ಜೋರೋ ಜೋರು!


ನಮ್ಮ ಬದರಿನಾಥ್ ಪಲವಳ್ಳಿ ಮುಖದಲ್ಲಿ ರಾಜ ಗಾಂಭೀರ್ಯ!


ಮೃದು ಸ್ವಭಾವದ ಸರಳ ಜೀವಿಗಳು... ಮಣಿಕಾಂತ್ ಮತ್ತು ಶೀಕಾಂತ್


ಛೇ ಇಲ್ಲಿ ಏನೋ ವಾಸನೆ ಬರುತ್ತಿದೆಯಲ್ಲಾ!


ಮೊದಲು ಹುಡುಗಿನಾ ಒಪ್ಪಿಸಿಬಿಡು ಜಗನ್... ಮಿಕ್ಕಿದ್ದೆಲ್ಲಾ ನಾವ್ ನೋಡ್ಕೋತೀವಿ...


ಉಪಹಾರ ತಿಂದು ಖುಷಿಪಟ್ಟವರು...


ನಾನು ಅಲ್ಲಿಯೂ ಕನ್ನಡ ಪದ ಕೇಳಿದ್ದಕ್ಕೆ ಇರಬಹುದೇ ಈ ನಗು?



ಹಂಸಲೇಖರ ಕಾಲಿಗೆ ಬಿದ್ದು "ಶತಮಾನಂಭವತಿ" ಎಂದು ಆಶೀರ್ವಾದ ಪಡೆದ ರೂಪಕ್ಕ


ಮರೆಯಲಾಗದ ಕ್ಷಣ... ಹಂಸಲೇಖರೊಂದಿಗೆ...


ಮತ್ತೊಂದು ಮರೆಯಲಾಗದ ಕ್ಷಣ.. 3K ತಂಡ ವಸುಧೇಂದ್ರ ಹಾಗು ಹಂಸಲೇಖರೊಂದಿಗೆ...



ಮುಖದ ಮೇಲೆ ಮಿಂಚಿ ಮರೆಯಾಗುವ ಕ್ಷಣಿಕ ಭಾವನೆಗಳನ್ನು ಅದ್ಭುತವಾಗಿ ಸೆರೆ ಹಿಡಿದ ಕ್ಯಾಮೆರಾ ಜಾದೂಗಾರ ಶಿವು ಕಾಳಯ್ಯ




Public TV ವರದಿಗಾರರು 3K ತಂಡದ ಸಂದರ್ಶನ ನಡೆಸಿದರು

 
ಸಂದರ್ಶನದಲ್ಲಿ ಮಿಂಚಿದ ರೂಪಕ್ಕ! 



ಸಮಾರಂಭದ ಮೂವರು ಮುಖ್ಯ ಅಥಿತಿಗಳು - ವಸುಧೇಂದ್ರ (ಬರಹಗಾರರು), ಹಂಸಲೇಖ (ಚಲನಚಿತ್ರ ಸಾಹಿತಿ ಹಾಗು ಸಂಗೀತ ನಿರ್ದೇಶಕರು) ಮಂಜುನಾಥ್ ಕೊಳ್ಳೇಗಾಲ (ಲೇಖಕರು)


ಶತಮಾನಂಭವತಿಗೆ ಮುಖಪುಟ ಹಾಗು ನಮಫಲಕ ವಿನ್ಯಾಸ, 3K ಗೆ ಲಾಂಛನ ವಿನ್ಯಾಸ ಮಾಡಿಕೊಟ್ಟ ತೇಜ್ಪಾಲ್ ಮುಗುಳ್ನಗೆಯಲ್ಲಿ ಗೋಪಿನಾಥ್ ಅವರೊಂದಿಗೆ


ಒಂದಾನೊಂದು ಕಾಲದಲ್ಲಿ ಈತನೂ ಒಬ್ಬ ಮಹಾಸಾಹಿತಿಯಂತೆ!

ಗಾನಬ್ರಹ್ಮ ಹಂಸಲೇಖರಿಗೆ ಗೋಪಿನಾಥ್ ಶಾಲು ಹೊದ್ದಿಸಿ ಗೌರವ ಸೂಚಿಸಿದರು!


ಬರಹಗಾರರಾದ ವಸುಧೇಂದ್ರ ಅವರಿಗೆ ಶಾಲು ಹೊದ್ದಿಸಿ ಸನ್ಮಾನಿಸಿದರು...


ಖ್ಯಾತ ಲೇಖಕರಾದ ಮಂಜುನಾಥ್ ಕೋಳ್ಳೇಗಾಲ ಅವರಿಗೆ ನವೀನ್ ಶಾಲು ಹೊದ್ದಿಸಿ ಸನ್ಮಾನ ಮಾಡಿದರು


ಅರುಣ್ ಹಾಗು ಸತೀಶ್ ನಾಯಕ್ ನಡುವಿನ ಪ್ರಶ್ನಾವಳಿ ಮನಸೆಳೆಯಿತು


3K ಲಾಂಛನ ಬಿಡುಗಡೆಯಾದ ಕ್ಷಣ


ಅಮೃತಘಳಿಗೆ! ಶತಮಾನಂಭವತಿ ಲೋಕಾರ್ಪಣೆ!

"ಈ ಭೂಮಿ ಬಣ್ಣದ ಬುಗುರಿ...." ಹಾಗು "ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಾಬೇಕು..." ಸಂಗೀತವನ್ನು ಅದ್ಭುತವಾಗಿ ಹಾಡಿದ ಗೋಪಿನಾಥ್ ಮತ್ತು ಸತೀಶ್ ನಾಯಕ್‍ರವರನ್ನು ಜನ ಚಪ್ಪಾಳೆ ತಟ್ಟಿ ಅಭಿನಂದಿಸಿದರು!


ಶತಮಾನಂಭವತಿ ಎಂಬ ಪದವನ್ನು ನಮ್ಮ ಪುಸ್ತಕಕ್ಕೆ ಹೆಸರಾಗಿ ಮೊದಲು ನಾಮಕರಣ ಮಾಡಿದವರು ನಮ್ಮೆಲ್ಲರ ಮೆಚ್ಚಿನ ಕವಿ ಬದರಿನಾಥ್ ಪಲವಳ್ಳಿ ಕಳೆದ 3K ಸಂಭ್ರಮದಲ್ಲಿ ಅತ್ಯುತ್ತಮ ಕವಿತೆಯ ಪ್ರಶಸ್ತಿ ಕೂಡ ಇವರಿಗೆ ಸಂದಿತು.


ಬಂದಿದ್ದವರಲ್ಲಿ ಅರ್ಧ ಜನ ಜಾಗ ಖಾಲಿ ಮಾಡಿದ ಮೇಲೆ ಕಣಕ್ಕಿಳಿದ 12th Man ನಾನು... ವಂದನಾರ್ಪಣೆಗಳು - ಪುಣ್ಯದ ಕೆಲಸ ಎಂದು ನನ್ನ ನಂಬಿಕೆ!!


Group Snap - 3K Core Team


ಕುಚ್ಚುಕ್ಕೂ ಗೆಳೆಯರು..


Online ಗೆಳೆಯರ ದಂಡು!


Hurrayyyyyyyy!!!!! ರೂಪಕ್ಕ, ಮಗಳು ಮೇಘನಾ ಪುಟಣಿಗಳ ಜೊತೆ ಗೂಡಿ ಸಂಭ್ರಮಿಸಿದ್ದು ಹೀಗೆ... ಅವರಲ್ಲಿ Worldcup ಗೆದ್ದಂಥ ಹುರುಪು!!


ಏನ್ ಚೆಂದ ಕಾಣ್ತಿದ್ದಾಳೆ ಮುಗ್ಧ ಕಂಗಳ ಮೇಘನ!


ಕಾರ್ಯಕ್ರಮದ ಟೆನ್ಷನ್ ಮಧ್ಯೆ ಕಾರಿನ ಕೀ ಕಳೆದು ಹೋದದ್ದರಿಂದ ರಾತ್ರಿ ಹತ್ತು ಘಂಟೆಯ ವರೆಗೆ ನಾವು ಅಲ್ಲೆ ಹರಟೆ ಹೊಡೆಯುತ್ತಾ ಕುಳಿತೆವು ಆಗ ತಾನೆ ನಡೆದ ಅದ್ಭುತ ಕ್ಷಣಗಳನ್ನು ಮತ್ತೆ ಮೆಲುಕು ಹಾಕಲು ನಮಗೆ ಇದಕ್ಕಿಂತ ಒಳ್ಳೇ ಅವಕಾಶ ಬೇಕಿತ್ತೆ? ಕುಟುಂಬದವರೆಲ್ಲಾ ಒಟ್ಟಿಗೆ ಕುಳಿತು ಬೆಳದಿಂಗಳೂಟ ಮಾಡಿದಂತಿತ್ತು... ಆ ಕ್ಷಣಗಳು!




ರೂಪಕ್ಕ ತಮ್ಮಂದಿರಿಗೆ ಕಥೆ ಪುಸ್ತಕದಿಂದ ಕಥೆ ಹೇಳಿ ಮಲಗಿಸುತ್ತಿರುವಂತಿದೆ!!!! ಹ್ಹ ಹ್ಹ ಹ್ಹಾ!! 
==================================== 
ಹೇಗನ್ನಿಸಿತು ನಮ್ಮ ಕುಟುಂಬದ ಈ ಕಾರ್ಯಕ್ರಮ? ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ತಪ್ಪದೇ ಇಲ್ಲೇ ಬರೆದು ತಿಳಿಸಿ... ತಿಳಿಸ್ತೀರ ತಾನೆ? ಧನ್ಯವಾದಗಳು! 

16 comments:

  1. ಮೊದಲ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಅನಿತ ಮೇಡಮ್

    ReplyDelete
  2. ಮೃದು ನಗುವಿನಿಂದ ಕಂಗೊಳಿಸುವ ಪ್ರದೀಪ್ ಹಠಾತ್ ಕಳೆದುಹೋಗಿದ್ದರು.. ಮತ್ತೆ ಮರಳಿ ಫಾರಂ ಬನ್ದರು.. ಅದು ಯಾವ ರೀತಿಯಲ್ಲಿ... ವೌ ಸೂಪರ್ ಪ್ರದೀಪ್.. ಚಿತ್ರವೂ ಅದಕ್ಕೆ ಇಳಿಬಿಟ್ಟ ಭಾವ ಪೂರ್ಣಪದಗಳ ತೋರಣ ಅತ್ಯುತ್ತಮ.. ಮುಂದುವರೆಯಲಿ ಸಂಗೀತದ ಪದಗಳ ಮೇಲೆ ಪ್ರೇಮದ ಕವಿಯ ಮೆರವಣಿಗೆ. ಸೂಪರ್ ಸೂಪರ್ ಸೂಪರ್ ಪ್ರದೀಪ್ back with a baaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaang!

    ReplyDelete
  3. I missed the event... (habba)
    Thank you for sharing....

    ReplyDelete
  4. wonderfull...pradeep..kalaavida kanri neevu

    ReplyDelete
  5. "ಶತಮಾನಂಭವತಿ" ಸಮಾರಂಭಕ್ಕೆ ನಾನು ಬಂದಿದ್ದೆ ಅಲ್ಲಿ ನೆರೆದಿದ್ದ ಎಲ್ಲ ಕವಿ ಮಿತ್ರರನ್ನು ನೋಡಿ ತುಂಬಾ ಸಂತೋಷವಾಯ್ತು...:) :) ಹಾಗೆ ಈ ಸಮಾರಂಭದ ಎಲ್ಲ ಕ್ಷಣಗಳನ್ನು ತುಂಬಾ ಸುಂದರವಾಗಿ ಈ ಮೇಲಿನ ಚಿತ್ರಗಳಲ್ಲಿ ಸೆರೆ ಹಿಡಿದು... ಒಂದು ಚಿತ್ರಕಥೆಯಂತೆ ಚೆನ್ನಾಗಿ ಚಿತ್ರಿಸಿದ್ದೀರ.. ನೋಡಿ ತುಂಬಾ ಸಂತೋಷವಾಯ್ತು... ಈ ಕಾರ್ಯಕ್ರಮದಲ್ಲಿ ನಾನು ಕೂಡ ಭಾಗಿಯಾಗಿದ್ದೆ ಅನ್ನೋದೇ ಹೆಮ್ಮೆಯ ವಿಷಯ ... :) :)

    ReplyDelete
  6. ಎರಡು ಮಾತೇ ಇಲ್ಲ ಪ್ರದೀಪ್ ಸಾರ್, ನಾನು ಕಣ್ಣೀರಾಗಿ ಬಿಟ್ಟೆ. ತಮಗೆ ಗೊತ್ತಿಲ್ಲ ನನ್ನ ಬ್ಲಾಗಿನಲ್ಲಿ ನಾನು ಬರೆದುಕೊಂಡಂತೆ ನಾನು ಈಗಲೂ ಬಹುಶಃ ಅಜ್ಞಾತ ಕವಿಯೇ. 3k, ಶ್ರೀಮತಿ. ರೂಪಾ ಸತೀಶ್ ಮತ್ತು ತಮ್ಮೆಲ್ಲರ ಅಭಿಮಾನಕ್ಕೆ ಮತ್ತು ಸಿಕ್ಕ ಡಬಲ್ ಧಮಾಕ ಸಮ್ಮಾನಕ್ಕೆ ನಾನು ಕರಗಿ ಹೋದೆ.

    ಅಂದಹಾಗೆ ನಿಮ್ಮ ಬ್ಲಾಗ್ ಪುನರ್ ಚಾಲನೆಯಾದದ್ದು ನನಗೆ ಖುಷಿ ಕೊಟ್ಟಿತು. ಇಡೀ ಕಾರ್ಯಕ್ರಮವನ್ನು ಕಣ್ಣಿಗೆ ಕಟ್ಟುವಂತೆ ಸಚಿತ್ರವಾಗಿ ಒಳ್ಳೊಳ್ಳೆಯ ಶೀರ್ಷಿಕೆ ಸಮೇತ ಪ್ರಸ್ತುತ ಪಡೆಸಿರುವುದು ಮೆಚ್ಚಿಗೆಯಾಯಿತು. ತಾವು ಒಳ್ಳೆಯ ಲೇಖಕ, ಸಹೃದಯೀ ಗೆಳೆಯ, ಪ.ಚಿಂ ರುವಾರಿಗಳಲ್ಲಿ ಒಬ್ಬರು ಮತ್ತು ಅಪ್ರತಿಮ ಛಾಯಾಗ್ರಾಹಕ.

    ಕಡೆಗೆ ಒಂದು ಮಾತು ಶತಮಾನಂಭವತಿ ಸಂಕ್ರಮಣ ಕಾಲದಲ್ಲಿ ನಿಮಗೆ 'ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು' ಆಶೀರ್ವಚನ ನಮ್ಮೆಲ್ಲರಿಂದ.

    ReplyDelete
  7. ತುಂಬಾ ಚೆನ್ನಾಗಿದೆ ಪ್ರದೀಪ್. ನಿಮ್ಮ ಬ್ಲಾಗ್ ಮತ್ತೆ ಅರಳಿದ್ದು ಸಂತಸ ಕೊಟ್ಟಿತು. ಸುಂದರ ಭಾವಚಿತ್ರಗಳು, ೩ ಕೆ ಕಣ್ಣು ನೀವು. ಧನ್ಯವಾದಗಳು ..

    ReplyDelete
  8. ರೂಪಕ್ಕನಷ್ಟೇ ಚೆನ್ನಾಗಿತ್ತು ಶತಮಾನಂಭವತಿ :) ...ಆತ್ಮೀಯರೊಂದಿಗಿನ ನನ್ನ ಮೊದಲ ಭೇಟಿ -ನನ್ನ ಖುಷಿ ..
    ನಿಮ್ಮ ಕ್ಯಾಮರಾನೂ ಅಷ್ಟೇ ಚೆನ್ನಾಗಿದೆ :)
    ಮತ್ತದೇ ಸಂಜೆಯ ನೆನಪಾಯ್ತು ಈಗ ನಿಮ್ಮ ಬ್ಲಾಗ್ ಓದಿ

    ReplyDelete
  9. "ಶತಮಾನಂಭವತಿ" ಮೂಲಕ ಮತ್ತೊಮ್ಮೆ ಬ್ಲಾಗ್ ಗೆ ಬ೦ದದ್ದು ಸ೦ತಸವೆನಿಸಿತು ಪ್ರದೀಪ್, ಪಯಣ ಶುಭಕರವಾಗಲಿ.

    ReplyDelete
  10. ಮತ್ತೊಮ್ಮೆ ಆ ಕ್ಷಣಗಳಿಗೆ ಹೊತ್ತೊಯ್ದಿರಿ.. ಫೋಟೋ ವಿವರಣೆ ಎಲ್ಲವೂ ಸೂಪರ್ ..
    ಫೋಟೋಸ್ ನೋಡ್ತಾ ನೋಡ್ತಾ ನನ್ನ ನಾನೇ ಹುಡುಕುವ ಹಾಗೆ ಆಯಿತು.. ಅಂತೂ ನಾನೂ ಒಂದು ಫೋಟೋದಲ್ಲಿ ಇದ್ದೇನೆ ಎಂಬ ಸಮಾದಾನ.. :D

    ReplyDelete
  11. ಈ ಫೋಟೊಗಳನ್ನ ಯಾವತ್ತು ನೋಡಿದ್ರೆ ನಮ್ಮ ಕಾರ್ಯಕ್ರಮ ಅವತ್ತಷ್ಟೆ ನಡೆದಿದೆಯೇನೋ ಅನ್ನೋಷ್ಟು ಜೀವಂತಿಕೆಯನ್ನ ಮರುಕಳಿಸುತ್ತವೆ ಪ್ರದೀಪ್.. ನಮ್ಮ ಬಳಗದ ಜಾದೂಗಾರ ನೀವು.. ನಿಮ್ಮ ಕ್ಯಾಮೆರ ಕಣ್ಣಿನ ಅಂಚಲ್ಲಿ ನಮ್ಮೆಲ್ಲರ ಅಂದ ಮುಪ್ಪಟ್ಟು ಆಗತ್ತೆ ಅಂದ್ರೆ ತಪ್ಪಿಲ್ಲ.. ಫೋಟೋ & ಅದರ ವಿವರಣೆ ತುಂಬ ಇಷ್ಟ ಆದವು.. ಅದರಲ್ಲಿ ತುಂಬ ಇಷ್ಟವಾದ ಕಾಮೆಂಟ್ "ಮೊದಲು ಹುಡುಗಿನಾ ಒಪ್ಪಿಸಿಬಿಡು ಜಗನ್... ಮಿಕ್ಕಿದ್ದೆಲ್ಲಾ ನಾವ್ ನೋಡ್ಕೋತೀವಿ..." ಆಹಾ ಸೂಪರ್.. :)

    ReplyDelete
  12. ಅಭಿನಂದನೆಗಳು, ಶುಭವಾಗಲಿ.

    ReplyDelete
  13. ಅಭಿನಂದನೆಗಳು, ಶುಭವಾಗಲಿ.

    ReplyDelete