Wednesday, November 30, 2011

"ಭಾವಸಿಂಚನ" - ಎಲ್ಲೆಲ್ಲೂ ಹರುಷದ ಸಿಂಚನ!

ಗೆಳೆಯರೇ,

ನಿಮಗೆಲ್ಲ ನಾನು ಈಗಾಗಲೇ ತಿಳಿಸಿದ್ದಂತೆ ನವೆಂಬರ್ 26ರಂದು ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಮ್ಮ 3K ಸಮುದಾಯದ ಮೊದಲ ಕವನ ಸಂಕಲನ - "ಭಾವಸಿಂಚನ" ಪುಸ್ತಕದ ಬಿಡುಗಡೆ ಕಾರ್ಯಕ್ರಮವಿತ್ತು. ನಿಮ್ಮೆಲ್ಲರ ಶುಭ ಹಾರೈಕೆಗಳಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಸಂಭ್ರಮದಲ್ಲಿ ಭಾಗಿಯಾದವರಿಗೂ, ದೂರವೇ ಉಳಿದು ನಮ್ಮನ್ನು ಹಾರೈಸಿದವರಿಗೂ ಅನಂತಾನಂತ ಧನ್ಯವಾದಗಳು. ಅಂದಿನ ಸವಿ ಸವಿ ಕ್ಷಣಗಳ ಒಂದು ನೋಟ ಇಲ್ಲಿದೆ....

ನಮ್ಮ 3K ತಂಡ ಅಂದು ಅತ್ಯಂತ ಉತ್ಸಾಹಭರಿತವಾಗಿತ್ತು

ಕವಿಗಳಲ್ಲದವರ ಕವನಸಂಕಲನ..
ಭಾವಸಿಂಚನ..
ಬಿಡುಗಡೆಯ ಆ ದಿನ..
ಎಲ್ಲರಿಗೂ ರೋಮಾಂಚನ..


ಅಂದು ಬೆಳಗಿನಿಂದಲೇ ಸಮಾರಂಭದ Bannerಗಳು ಸುತ್ತಮುತ್ತಲಿನ ಜನರ ಗಮನ ಸೆಳೆದಿತ್ತು


ಬಂದ ಅತಿಥಿಗಳಿಗೂ, ಸಮುದಾಯದ ಪ್ರತಿ ಸದಸ್ಯರಿಗೂ ವಿತರಿಸಲಾದ ಸುಂದರ ಸ್ಮರಣಿಕೆಗಳು


UTV Motion Pictures, Director ತೇಜು ಶಿಶಿರವರು ಸಹ ನಮ್ಮ ಸಮುದಾಯದ ಸದಸ್ಯರು. ಅವರು ಆಗಮಿಸಿದ್ದು ನಮಗೆಲ್ಲಾ ಬಹಳ ಸಂತಸ ತಂದಿತು


ನಮ್ಮ 3K ಸಮುದಾಯದ ಸದಸ್ಯರ ದಂಡು!


ನಮ್ಮೆಲ್ಲರ ಪ್ರೀತಿಯ "ಪಕ್ಕು ಮಾಮ" ಪ್ರಕಾಶ್ ಹೆಗಡೆ ಅಲ್ಲಿ Center of attraction ಆಗಿದ್ದರು! ದುಂಡಿ ರಾಜ್‍ರವರನ್ನು ತಲುಪುವಲ್ಲಿ ನೆರವಾದ ಅವರಿಗೆ ಹೃತ್ಪೂರ್ವಕ ವಂದನೆಗಳು.


ರುಚಿಕಟ್ಟಾದ ಲಘು ಉಪಾಹಾರ, ಬಾದಾಮಿ ಹಾಲು....


ಕಾರ್ಯಕ್ರಮದ ಆರಂಭ ಕುಮಾರಿ ಭೂಮಿಕಾರವರ ಮಧುರ ಕಂಠದ ಗಾಯನದೊಂದಿಗೆ...


ನಂತರ ನಮ್ಮ ನಿಮ್ಮೆಲ್ಲರ ಸ್ನೇಹ ಲೋಕದ ಗೆಳೆಯ ಅಶೋಕ್ ವಿ ಶೆಟ್ಟಿ ಅವರಿಂದ ಸ್ವಾಗತ ಭಾಷಣ.


ಅನುಪಮಾ ಹೆಗಡೆಯವರು ಕವಿರಾಜ್‍ರವರ ಜನಪ್ರಿಯ ಗೀತೆಗಳಲ್ಲಿ ಒಂದಾದ "ಗಗನವೇ ಬಾಗಿ.." ಹಾಡನ್ನು ಹಾಡಿ ಎಲ್ಲರನ್ನು ಸ್ವಾಗತಿಸಿದ ರೀತಿ ಮನ ಸೆಳೆಯಿತು... ನಂತರ ಪ್ರೇಕ್ಷಕಕರಿಗೆ ನಮ್ಮ ಸಂಘದ ಬಗ್ಗೆ ತಿಳಿಸಲು ಸಹ ಒಂದು ಕವನವನ್ನೇ ಆರಿಸಿಕೊಂಡರು..


ಸಜ್ಜನರ ಸ್ನೇಹ ಸವಿಯುವುದಕೆ,
ಸಹೃದಯರ ಕಾವ್ಯ ಸ್ಮರಿಸುವುದಕೆ,
ಭಾವಜೀವಿಗಳ ಬಾಂಧವ್ಯ ಬೆಳೆಸುವುದಕೆ,

ಬನ್ನಿ,
ಕಾವ್ಯಲೋಕದ ಎಳೆಪೈರುಗಳು ಚಿಗುರುವ ಹೊಲಕೆ,
ಕೆಸರಲ್ಲೂ ಕಾವ್ಯಕಮಲಗಳು ಅರಳುವ ಕೊಳಕೆ,
ಹೆಮ್ಮರವಾಗಿ ಬೆಳೆವುದಿಲ್ಲಿ ನಿಮ್ಮ ಕಾವ್ಯಾಸಕ್ತಿಯ ಮೊಳಕೆ,
ಬಾಳ ಕತ್ತಲೆಯನ್ನೂ ಬೆಳಗುವುದಿಲ್ಲಿ ಕಾವ್ಯಾಮೃತದ ಬೆಳಕೇ!

ಸ್ವಾಗತಿಸುವೆವು ಎಲ್ಲರ ನಮ್ಮ ಮುಕ್ತ ಸಮುದಾಯಕೆ,
ಸಂಭ್ರಮದ ಈ ದಿನ, ನಮ್ಮೆಲ್ಲರದೊಂದೇ ಹಾರೈಕೆ,
ಉದಯವಾಗಲಿ ನಮ್ಮ ಚೆಲುವ ಸಮುದಾಯ - 3K!



ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಲೇಖಕರಾದ ಶ್ರೀ ಮಂಜುನಾಥ್ ಕೊಳ್ಳೇಗಾಲ, ಕನ್ನಡ ಸಿನಿಮಾ ಲೋಕದ ಜನಪ್ರಿಯ ಸಂಗೀತ ಸಾಹಿತಿ ಶೀ ಕವಿರಾಜ್ ಹಾಗು ಜನಪ್ರಿಯ ಹಾಸ್ಯ ಸಾಹಿತಿ ಶ್ರೀ ದುಂಡಿರಾಜ್ರವರು ಉಪಸ್ತಿಥರಿದ್ದರು. ಅವರ ಜೊತೆಯಲ್ಲಿ ನಮ್ಮ ಸಮುದಾಯದ ಅಧ್ಯಕ್ಷೆ ಶ್ರೀಮತಿ ರೂಪ ಸತೀಶ್.


ಯಾವ ಜನುಮದ ಮೈತ್ರಿ?
ಪ್ರೇಕ್ಷಕರಿಗೆ ಅತಿಥಿಗಳ ಪರಿಚಯ ಮಾಡಿಸುವ ಸಂದರ್ಭದಲ್ಲಿ ಸಮುದಾಯದ ಇಬ್ಬರೇ ಮಹಿಳಾ ಸದಸ್ಯರಾದ ರೂಪಾ ಸತೀಶ್ ಹಾಗು ಅನುಪಮಾ ಹೆಗಡೆಯವರು ತಬ್ಬಿ ಖುಷಿ ಹಂಚಿಕೊಂಡರು


ಅತಿಥಿಗಳಿಂದ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಸಾಂಪ್ರದಾಯಿಕ ಪ್ರಾರಂಭ ಕಂಡಿತು.



ಬೆಳಗುತಿರಲಿ ಹೀಗೇ ನಮ್ಮ 3K ಜ್ಯೋತಿ
ಬೆಳೆಯುತಿರಲಿ ಹೀಗೇ ಸಮುದಾಯದ ಖ್ಯಾತಿ
ಹೆಚ್ಚುತಿರಲಿ ದಿನ ದಿನವೂ ಸದಸ್ಯರ ಗಣತಿ
ನಮ್ಮೊಂದಿಗೆ ಕೈ ಜೋಡಿಸಲು ನಿಮ್ಮಲ್ಲಿ ವಿನಂತಿ

ಅಂದು ತಾರೀಖು 26/11/2011... ಅದು 2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿ ನಡೆದ ದಿನ(26/11). ಹಲವು ಜನ ಸೇನೆಯವರು ನೂರಾರು ಜನ ಅಮಾಯಕರು ಬಲಿ ತೆಗೆದುಕೊಂಡ ಒಂದು ಹೀನ ಕೃತ್ಯ ನಡೆದ ಕರಾಳ ದಿನ. ಆ ದಿನ ಹುತಾತ್ಮರಾದವರ ನೆನಪಿನಲ್ಲಿ ಎಲ್ಲರೂ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ಮಾಡಿದರು.


ಅನುಪಮಾರವರ ಸರಳ ಭಾಷೆಯ ಭಾಷಣದಲ್ಲಿ ನಿರಾಳ ಭಾವನೆಗಳು ವ್ಯಕ್ತವಾಗಿ ಎಲ್ಲರ ಗಮನ ಸೆಳೆಯಿತು.


"ಭಾವಸಿಂಚನ" ಬಿಡುಗಡೆಯ ಅಂತಿಮ ಘಟ್ಟದಲ್ಲಿ.. ಎಲ್ಲರ ಮುಖದಲ್ಲಿ ಸಂತಸದ ಸಿಂಚನ!


ಕೊನೆಗೂ ಬಂತು ನಮ್ಮದೆಂಬ ಒಂದು ಪುಸ್ತಕ!


ಅತಿಥಿಗಳ ಕೈಯಲ್ಲಿ ರಾರಾಜಿಸುತ್ತಿರುವ ಭಾವಸಿಂಚನದ ಮೊದಲ ಪ್ರತಿಗಳು


ಇದು ನಮ್ಮ ಚೊಚ್ಚಲ ಪ್ರಯತ್ನ. ಆದ್ದರಿಂದ ಅದಕ್ಕೆ ಬೆಲೆ ಕಟ್ಟಲು ನಮಗೆ ಇಷ್ಟವಾಗಲಿಲ್ಲ. ಇದು ಕನ್ನಡವನ್ನು ಬೆಳೆಸಿ ಪೋಷಿಸುವ ಎಲ್ಲರಿಗೂ ನಮ್ಮ ಕೊಡುಗೆ. ಅಂದರೆ ಇದು ಉಚಿತ. ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಪುಸ್ತಕದ ಒಂದು ಪ್ರತಿಯನ್ನು ಹಂಚಲಾಯಿತು.


ರವಿ ಕಾಣದ್ದನ್ನು ಕವಿ ಕಂಡ ಎನ್ನುತ್ತಾರೆ... ನಿಜ.. ಎಷ್ಟು ಕಲ್ಪನಾಶಕ್ತಿಯನ್ನು ಹೊಂದಿವೆ ಈ ಕವಿಗಳ ಕಣ್ಣುಗಳು.. ಕಾಣದ್ದನೂ ಕಂಡು ಬಿಡುತ್ತವೆ. ಆದರೆ ಭೂಮಿಯ ಮೇಲೆ ಇರುವುದನ್ನೂ ಕಾಣಲಾಗದ ಎಷ್ಟೋ ಜನರು ಇಂದು ನಮ್ಮ ಸುತ್ತ ಇದ್ದಾರೆ. ಅಂಥವರ ಬಾಳನ್ನು ಬೆಳಗುವ ಕೆಲಸವನ್ನು ಏಕೆ ಈ ಕವಿಗಳ ಕಣ್ಣುಗಳು ಮಾಡಬಾರದು? ನೇತ್ರದಾನ ನಮ್ಮೆಲ್ಲರ ಆಶಯವಾಗಿತ್ತು. ಎಲ್ಲರಿಗೂ ನೇತ್ರದಾನದ ಅರ್ಜಿಯೊಂದನ್ನೂ ವಿತರಿಸಲಾಯಿತು. ಇಚ್ಛೆಯಿರುವವರು ಅರ್ಜಿ ಭರ್ತಿ ಮಾಡಿ ಕೊಟ್ಟರು. ಅದನ್ನು ಸಂಬಂಧಪಟ್ಟ ಇಲಾಖೆಯವರಿಗೆ ಹಸ್ತಾಂತರಿಸಲಾಯಿತು.

ಮಂಜುನಾಥ್ ಕೊಳ್ಳೇಗಾಲರವರು ಕವನ ಸಂಕಲದೊಳಗಿನ ಒಂದೆರಡು ಕವನಗಳ ವಿಮರ್ಶೆಯೊಂದಿಗೆ ಭಾಷಣದ ಮೂಲಕ ಮನ ತಣಿಸಿದರು



"ಅಪ್ಪಾ.. ಈ ಪುಸ್ತಕ ನನಗೇ ಇರಲಿ" ಎನ್ನುತ್ತಿರುವಂತಿದೆ ನಮ್ಮ ಅಶೋಕರ ಮಗಳು ಖುಶಿ



"ಅಯ್ಯೋ ಫೋಟೋ ತೆಗೆದದ್ದು ಸಾಕು.. ನಾನಿನ್ನು ಕವನ ಓದ್ಬೇಕು ಹೋಗೀಪ್ಪಾ"
ಕವನ ಅರ್ಥವಾಗದಿದ್ದರೂ ನಾಚಿಕೆಯಿಂದ ಮುಖ ಮುಚ್ಚಿಕೊಳ್ಳಲಾದರು ಪುಸ್ತಕ ಖುಶಿಗೆ ಉಪಯೋಗವಾಯಿತು!


ಕವಿರಾಜ್‍ರವರ ಭಾಷಣದಲ್ಲಿ ಪ್ರೇಕ್ಷಕರೆಲ್ಲರೂ ತಲ್ಲೀನರಾದರು


ದುಂಡಿರಾಜ್‍ರವರು ತಾವೇ ಹೇಳಿದಂತೆ ತಮ್ಮ ಅತ್ಯಂತ ಗಂಭೀರ ಭಾಷಣ ನೀಡಿದರು. ಕಾರಣ ಈ ಪುಸ್ತಕದಲ್ಲಿರುವುದು ಹೆಚ್ಚಿನವು "Heavy Matter" ಎಂದರು.. ಪ್ರೇಕ್ಷಕರಲ್ಲಿ ನಗೆ ಮೂಡಿತು!


ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಈ ಗುಲಾಬಿ ಹೂವು ಬಾಗಿಲಲ್ಲೇ ನಿಂತು ಬರುವವರನ್ನೆಲ್ಲಾ ನಗು ನಗುತ್ತಾ ಬರಮಾಡಿಕೊಳ್ಳುತ್ತಿತ್ತು


ಅತಿಥಿಗಳಿಗೆ ಸನ್ಮಾನ, ನೆನಪಿನ ಕಾಣಿಕೆ...


ಅತಿಥಿಗಳಿಗೆ ಸನ್ಮಾನ, ನೆನಪಿನ ಕಾಣಿಕೆ...


ಅತಿಥಿಗಳಿಗೆ ಸನ್ಮಾನ, ನೆನಪಿನ ಕಾಣಿಕೆ...


ರೂಪಕ್ಕರವರಿಗೆ ಅನುಪಮಾರವರು ಸನ್ಮಾನ ಮಾಡಿದ ರೀತಿ ಎಲ್ಲರ ಗಮನ ಸೆಳೆಯಿತು.. ಅನುಪಮಾರವರು ಶಾಲನ್ನು ಗೊಂಬೆಗೆ ಸುತ್ತಿದಂತೆ ಸುತ್ತಿದಾಗ ಎಲ್ಲರಲ್ಲೂ ನಗೆ ಮೂಡಿತು.


ನಂತರ ರೂಪಕ್ಕನವರಿಗೆ ಶಾಲು ಹೊದ್ದಿಸುವ ಸರದಿ...


ಅತಿಥಿಗಳಿಂದ 3K ಬಳಗದ ಸದಸ್ಯರೆಲ್ಲರಿಗೂ ಶಾಲು, ಸ್ಮರಣಿಕೆ ವಿತರಣೆ


ಕೊನೆಗೆ ಕಾರ್ಯಕ್ರಮಕ್ಕೆ ನೆರವಾದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸುವ ಹೊಣೆ ನನ್ನದಾಯಿತು...


ಭರತ್ ಆರ್ ಭಟ್ ಅವರು ಬರೆದುಕೊಟ್ಟ ಚೀಟಿಯನ್ನು ಹೇಗೋ ತಪ್ಪಿಲ್ಲದೇ ಓದಿಬಿಟ್ಟೆ..
ಆದರೂ ಅದರಲ್ಲಿ ನಮ್ಮ ಪ್ರಕಾಶ್ ಹೆಗಡೆಯವರ ಹೆಸರೇ ಬಿಟ್ಟುಹೋಯ್ತಲ್ಲಾ ಎಂಬ ಕೊರಗು..
ಆರಂಭ ಗೀತೆ ಹಾಡಿದ ಭೂಮಿಕರವರ ಹೆಸರು ಸಹ ತಪ್ಪಿ ಹೊಯ್ತು.. ಕ್ಷಮಿಸಿ


ಸವಿ ಸವಿ ನೆನಪುಗಳು...
====================

3K ಬಳಗ


ಕನ್ನಡ ಹೆಸರಾಂತ ಸಂಗೀತ ಸಾಹಿತಿ ಕವಿರಾಜ್‍ರವರೊಂದಿಗೆ


ಅನಿಲ್ ಬೆಡಗೆ, ಆಶಾ ಪ್ರಕಾಶ್, ಪ್ರಕಾಶ್ ಹೆಗಡೆ ಹಾಗು ದುಂಡಿ ರಾಜ್ ಅವರೊಂದಿಗೆ

30 ತಿಂಗಳಲ್ಲಿ 25,000 ಪ್ರತಿಗಳು ಮಾರಾಟವಾಗಿ ದಾಖಲೆ ಸೃಷ್ಟಿಸಿದ "ಅಮ್ಮ ಹೇಳಿದ ಎಂಟು ಸುಳ್ಳುಗಳು" ಪುಸ್ತಕದ ಲೇಖಕ, ವಿಜಯಕರ್ನಾಟಕ ದಿನಪತ್ರಿಕೆಯ ಉಪಸಂಪಾದಕರು ಆದ ಎ. ಆರ್. ಮಣಿಕಾಂತ್ ಅವರೊಂದಿಗೆ


ದೊಡ್ಡಮನಿ ಮಂಜುನಾಥ್, ವೆಂಕಟೇಶ್ ಹೆಗಡೆ ಹಾಗು ಭರತ್‍ರವರೊಂದಿಗೆ..

ಗೆಳೆಯರೇ,

ಸಪ್ನ ಪುಸ್ತಕ ಮಳಿಗೆಯಲ್ಲಿ ಯಾವುದೇ ಕನ್ನಡ ಪುಸ್ತಕ ಕೊಂಡರೂ ಅದರೊಂದಿಗೆ ಭಾವಸಿಂಚನ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು.
ನಿಮಗೆ ಈ ಪುಸ್ತಕದ ಒಂದು ಪ್ರತಿ ಬೇಕಾದಲ್ಲಿ ನನಗೆ ನಿಮ್ಮ ವಿಳಾಸವನ್ನು ಈ-ಮೇಲ್ ಮೂಲಕ ಕಳುಹಿಸಿ. ಪುಸ್ತಕವನ್ನು ನೀಡಿದ ವಿಳಾಸಕ್ಕೆ Courier ಮುಖಾಂತರ ಕಳುಹಿಸಲಾಗುವುದು. ಇದು ಸಂಪೂರ್ಣ ಉಚಿತ.
ಈ-ಮೇಲ್ ಕಳುಹಿಸಬೇಕಾದ ವಿಳಾಸ:
pradeepha22@gmail.com



24 comments:

  1. WONDERFULL PRADEEP .....ULTIMATE STYLE OF DESCRIPTION ...wow... AMAZING
    -BRB(GELEYA)

    ReplyDelete
  2. ಪ್ರದೀಪ್,ನಿಮ್ಮ ಚೊಚ್ಚಲ ಪ್ರಯತ್ನ ಮಾತು ಯಶಸ್ವಿ ಕಾರ್ಯಕ್ರಮಕ್ಕೆ ಅಭಿನಂದನೆಗಳು.....ನಿಮ್ಮ ಬಳಗದಿಂದ ಇನ್ನಷ್ಟು ಪುಸ್ತಕಗಳು ಬರಲಿ ಎಂದು ಆಶಿಸುತ್ತೇನೆ.... ಊರಿಗೆ ಹೋಗಿ ಬರುವುದು ಸ್ವಲ್ಪ ತಡವಾದ್ದರಿಂದ ಅಂದು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ... ಆದಷ್ಟು ಬೇಗ ಮತ್ತೊಮ್ಮೆ ಭೇಟಿ ಆಗೋಣ...

    ReplyDelete
  3. WOW... Pradeep.... too gud work!....
    nimma poetry stylenalli vivaraNe sooperb!

    ReplyDelete
  4. pradeep..
    kaaryakramakke baralaagalilla..... yasassu kanDide nimma pustaka....
    nanagu pustaka beku..... aadre haNa tegedukoLLabeku........

    ReplyDelete
  5. ಪುಸ್ತಕ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿ, ಎಲ್ಲೆಡೆ ಸ೦ತಸದ ಅಲೆ ಪಸರಿಸಿದ್ದನ್ನು ತಿಳಿದು ಸ೦ತೋಷವಾಯ್ತು. ಅಭಿನ೦ದನೆಗಳು.
    ನಿಮ್ಮೆಲ್ಲರಿ೦ದ ಮತ್ತಷ್ಟು ಕವಿತೆಗಳ ರಚನೆಯಾಗಲಿ.. ಪುಸ್ತಕಗಳು ಹೊರಬರಲಿ.

    ReplyDelete
  6. Lovely Pradeep... good job..:)
    Nobody is perfect... drushti bottu itta hage enadaroo sanna mistake agbekante...:)No probs... :)

    ReplyDelete
  7. ಗಿರೀಶ್... ತುಂಬಾ ಧನ್ಯವಾದಗಳು.. ಆದಷ್ಟು ಬೇಗ ಮತ್ತೆ ಸಿಗೋಣ

    ReplyDelete
  8. Hi Bilimugilu - Roopakka

    tumba tumba dhabyvadagalu

    ReplyDelete
  9. ದಿನಕರ್ ಸಾರ್... ತುಂಬಾ ಧನ್ಯವಾದಗಳು... ನಿಮ್ಮ ಅಭಿಮಾನಕ್ಕೆ ವಂದನೆಗಳು. ನಮ್ಮ ಪುಸ್ತಕವು ಕನ್ನಡವನ್ನು ಬೆಳೆಸಿ ಪೋಷಿಸುವವರಿಗೆ ಕೊಡುಗೆ ಎಂದು ಪುಸ್ತಕದಲ್ಲೇ ಪ್ರಕಟಗೊಂಡಿದೆ.. ಇನ್ನು ಅದಕ್ಕೆ ಹಣ ತೆಗೆದುಕೊಳ್ಳುವುದೇ.. ಅಂಚೆ ವೆಚ್ಚವೆಲ್ಲಾ ಏನು ಮಹಾ ಬಿಡಿ.. ನಿಮ್ಮ ವಿಳಾಸ ನನಗೆ ಈ-ಮೇಲ್ ಮಾಡಿ ಪುಸ್ತಕ ಕಳುಹಿಸುತ್ತೇನೆ.

    ReplyDelete
  10. ಮಾನ್ಯ ಮನಮುಕ್ತಾರವರೇ,

    ತುಂಬಾ ಧನ್ಯವಾದಗಳು.. ನಿಮ್ಮ ಅಭಿಮಾನ, ಪ್ರೋತ್ಸಾಹ ಸದಾ ನಮ್ಮೊಂದಿಗೆ ಹೀಗೆ ಇರಲಿ ಎಂದು ಆಶಿಸುವೆ

    ReplyDelete
  11. Anupama madam

    Thanks a lot.. Please convey the message Bhumika

    ReplyDelete
  12. ಹಾಯ್ ಪ್ರದೀಪ್.. ಕಾರ್ಯಕ್ರಮದ ವಿವರಣೆ ಉತ್ತಮ ಭಾವಚಿತ್ರದೊಂದಿಗೆ ಅದ್ಭುತವಾಗಿ ಮೂಡಿ ಬಂದಿದೆ,,ಕಾರ್ಯಕ್ರಮಕ್ಕೆ ಭಾಗವಹಿಸಿ ಬಂದ ಭಾವ ಮೂಡುತ್ತಿದೆ ,,,,ಗೆಳೆಯ ಮತ್ತೊಮ್ಮೆ ಕಂಗ್ರಾಟ್ಸ್ ,,,,,ಆದಷ್ಟು ಬೇಗ ಭೇಟಿಯಾಗಿ ನಾನೋದು ಪ್ರತಿ ತೆಗೆದುಕೊಂಡು ಓದುವ ಕುತೂಹಲ ಹಾಗು ಹಂಬಲ ,,,,,,

    ReplyDelete
  13. hi
    pradeep karyakramda nirupaneya pratiyondu hantavannu tumba chennagi nirupisidira, jotege bhavchitragalu aste chennagi modi bandive,
    adare nanage ee vandu sundar samarambha kke baruvudakke agalilla annode bejaru

    ReplyDelete
  14. ಸತ್ಯ.. ತುಂಬಾ ಧನ್ಯವಾದಗಳು! ಖಂಡಿತ.. ಆದಷ್ಟು ಬೇಗನೇ ಸಿಗೋಣಾ.. ನಿಮಗೆ ಅಂತ ಒಂದು ಪ್ರತಿ ತಗೆದ್ದಿಟ್ಟಿದ್ದೇನೆ.

    ReplyDelete
  15. ಧನ್ಯವಾದಗಳು ರೇವಣ್ ಸಾರ್.. ಕಾರ್ಯಕ್ರಮದ ದಿನ ನೀವು ಬರುತ್ತೀರೆಂದುಕೊಂಡಿದ್ದೆ... ಆಮೇಲೆ ನೀವು ಕರೆ ಮಾಡಿ ಬರಲಾಗದೆಂದು ತಿಳಿಸಿದಿರೆಂದು ರೂಪರವರು ತಿಳಿಸಿದರು.. ಇರಲಿ.. ಸಂಘದ ಮುಂದಿನ ಕಾರ್ಯಕ್ರಮಕ್ಕೆ ಬನ್ನಿ

    ReplyDelete
  16. 3K ಸಮುದಾಯದ ಮೊದಲ ಕವನ ಸಂಕಲನ "ಭಾವಸಿಂಚನ" ಬಿಡುಗಡೆಯ ಪ್ರತಿ ಹ೦ತವನ್ನೂ ಸು೦ದರ ಚಿತ್ರಗಳೊ೦ದಿಗೆ ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು ಹಾಗೂ ಅಭಿನ೦ದನೆಗಳು. ೨೦೦೧ರಲ್ಲಿ ನನ್ನ೨ಪುಸ್ತಕಗಳ ಬಿಡುಗಡೆಯ ಹಾಗೂ ೨೦೦೫ರಲ್ಲಿ ನನ್ನ ಮಗಳ `ಪಯಣ ಸಾಗಿದ೦ತೆ ....' ಬಿಡುಗಡೆಯ ಸಮಾರ೦ಭಗ ನೆನಪಾಯ್ತು ! ನನ್ನ ಬ್ಲಾಗ್ ಗೆ ಭೇಟಿ ಕೊಡಿ.

    ReplyDelete
  17. ಅಭಿನಂದನೆಗಳು ಪ್ರದೀಪ್, ಅಶೋಕ್ ಮತ್ತೆಲ್ಲರಿಗೂ ಒಳ್ಳೆಯ ಪ್ರಯತ್ನ ...ಅಪೂರ್ವ ಯಶಸ್ಸು ಕಾಣಲಿ ಪುಸ್ತಕ.
    ಆ ದಿನ ನಾನು ಒಂದೆರಡು ಘಂಟೆ ಮುಂಚಿತವಾಗಿದ್ದರೆ ಖಂಡಿತಾ ಬರ್ತಿದ್ದೆ. ಒಳ್ಳೆ ಫೋಟೋ ಹಾಕಿ ಅಲ್ಲಿ ಬಂದು ಹಾಜರಾದಂತೆ ಮಾಡಿಬಿಟ್ರಿ...

    ReplyDelete
  18. ಧನ್ಯವದಗಳು ಆಜ಼ಾದ್ ಸಾರ್.. ನಮ್ಮ ಕಾರ್ಯಕ್ರಮ ಶುರುವಾಗುವ ಸಮಯಕ್ಕೆ ಸರಿಯಾಗಿ ನಿಮಗೆ ನಿಮ್ಮ ದೇಶಕ್ಕೆ ತೆರಳುವ ಸಮಯ ಇದ್ದುದು ತಿಳಿಯಿತು. ಮುಂದಿನ ಬಾರಿ ಬಂದಾಗ ತಪ್ಪದೇ ಭೇಟಿಯಾಗೋಣ.

    ReplyDelete
  19. pradeep ravare nimma kruti bidugadeyalli bhaagavahisidashte...khushiyaayitu.nimage shubhahaaraikegalu.

    ReplyDelete
  20. ಆಶಾರವರೇ ಧನ್ಯವಾದಗಳು...

    ಕಲರವರವರೇ ನಿಮಗೂ ಸಹ ಧನ್ಯವಾದಗಳು

    ReplyDelete