Friday, November 11, 2011

"ಭಾವಸಿಂಚನ" - ಪುಸ್ತಕ ಬಿಡುಗಡೆ ಸಮಾರಂಭ - ಆಹ್ವಾನ




ಗೆಳೆಯರೇ,

3K ಎಂಬುದು ಬಹಳ ವರ್ಷಗಳಿಂದ ಉದಯೋನ್ಮುಖ ಕವಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಒಂದು ಸಮುದಾಯ. ಪ್ರಖ್ಯಾತ ಅಂತರ್ಜಾಲ ತಾಣವಾದ ಆರ್ಕೂಟ್‍ನಲ್ಲಿ ಜನಿಸಿದ ಈ ಸಮುದಾಯ ಈಗ ತನ್ನದೇ ರೂಪ ಪಡೆಯುತ್ತಿದೆ. ನಾನು ನನ್ನ ಮೊದಲ ಸಾಲುಗಳನ್ನು ಕವನ ಎಂದು ಬಗೆದು ಗೀಚಲು ಶುರುಮಾಡಿದಾಗಿನಿಂದಲೂ ನನ್ನನು ಪ್ರೋತ್ಸಾಹಿಸಿ ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ದೊರೆಯುವಂತೆ ಮಾಡಿದ್ದು ನಮ್ಮ 3K.

ಕಳೆದ ಮೂರು ವರ್ಷಗಳಿಂದ ಸಮುದಾಯ ಕಂಡ ಅತ್ಯುತ್ತಮ ಕವನಗಳನ್ನು ಒಂದು ಕವನ ಸಂಕಲನವಾಗಿ ಹೊರತರುತ್ತಿದ್ದೇವೆ.

ಇದೇ ತಿಂಗಳ 26ನೇ ತಾರೀಖು ನಮ್ಮ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದ್ದೇವೆ

Kannada Sahitya Parishat
Chamarajpet, Bangalore

November 26th, 2011, Saturday,
Evening 6 PM

ದಯವಿಟ್ಟು ಎಲ್ಲರೂ ಬಂದು ನಮ್ಮ ಸಮುದಾಯವನ್ನು ಹಾರೈಸಬೇಕಾಗಿ ವಿನಂತಿ.

ಬನ್ನಿ, ಮತ್ತೊಮ್ಮೆ ಎಲ್ಲರೂ ಭೇಟಿಯಾಗೋಣ. ನಿಮ್ಮೆಲ್ಲರೊಡನೆ ಬೆರೆತು ಬಹಳ ದಿನವಾಯ್ತು...

ಧನ್ಯವಾದಗಳು

9 comments:

  1. ‘ಒಮ್ಮೆ ಒಬ್ಬ ಹುಡುಗಿಯು ಬೇಂದ್ರೆಯವರಿಗೆ ತನ್ನ ಒಂದು ಕವನವನ್ನು ನೀಡಿ, ‘ಕವಿಯಾಗಲು ಎಷ್ಟು ಕವನಗಳನ್ನು ಬರೆಯಬೇಕು?' ಎಂದು ಕೇಳುತ್ತಾಳೆ. ಆಗ ಬೇಂದ್ರೆಯವರು, ‘ಒಂದು ಮಗುವನ್ನು ಪಡೆದ ತಾಯಿಯೂ ತಾಯಿಯೇ, ಒಂದು ಕವನವನ್ನು ಬರೆದರೂ ಕವಿ' ಎಂದು ಹೇಳುತ್ತಾರೆ!'`ಭಾವಸಿಂಚನ'ದ ಎಲ್ಲಾ ಕವಿಗಳಿಗೂ ನನ್ನ ಅಭಿನ೦ದನೆಗಳು. ಕಾರ್ಯಕ್ರಮಕ್ಕೆ ನನ್ನ ಶುಭ ಹಾರೈಕೆಗಳು.

    ReplyDelete
  2. ಪ್ರಭಾಮಣಿಯವರೇ,

    ತುಂಬಾ ಧನ್ಯವಾದಗಳು! ಬೇಂದ್ರಯವರ ಸನ್ನಿವೇಶ ಕುತೂಹಲಕರವಾಗಿದೆ... ಅಂತೆಯೇ ಏನಾಗುತ್ತದೋ ನೋಡಿಯೇ ಬಿಡೋಣ ಅಂತ ನಾವುಗಳೂ ಕವಿಗಳಾಗ ಹೊರಟಿದ್ದೇವೆ.. ದಯವಿಟ್ಟು ತಾವೂ ಸಮಾರಂಭಕ್ಕೆ ಆಗಮಿಸಿ ನಮ್ಮನ್ನು ಹರಸಬೇಕೆಂದು ಕೋರುವೆ.

    ReplyDelete
  3. ಭಾವಸಿ೦ಚನದ ಎಲ್ಲಾ ಕವಿಗಳಿಗೂ ಅಭಿನ೦ದನೆಗಳು ಹಾಗೂ ಶುಭಾಶಯಗಳು.ಜೊತೆಗೆ ಕಾರ್ಯಕ್ರಮ ಉತ್ತಮವಾಗಿ ಸಾಗಲಿ ಎ೦ಬ ಹಾರೈಕೆಗಳು.

    ReplyDelete
  4. ತುಂಬಾ ಧನ್ಯವಾದಗಳು ಮನಮುಕ್ತಾರವರೇ... ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ

    ReplyDelete
  5. Congragulations to all the Young poets...All the best for your program..

    ReplyDelete
  6. Thanks a lot Girish.. Please come to function

    ReplyDelete
  7. hai pradeep....
    naavu barabahudaaaa?
    - Roopa

    ReplyDelete
  8. Ha ha ha...

    Hai Roopakka... Naanu nimmanna kelona anta idde naanu barabahuda anta!! :)))

    ReplyDelete
  9. ತುಂಬಾ ತುಂಬಾ ಧನ್ಯವಾದಗಳು ವಸಂತ್... ಕಾರ್ಯಕ್ರಮ ಆಗಲೇ ಮುಗಿಯಿತು.. ಆದಷ್ಟು ಬೇಗ ಅದರ ಬಗ್ಗೆ ನಿಮಗೆ ತಿಳಿಸುತ್ತೇನೆ.

    ReplyDelete