24th April 2011, Sunday, ನಿಜಕ್ಕೂ ಒಂದು ವಿಶಿಷ್ಟ ಅನುಭವ. ಪ್ರಕಾಶಣ್ಣರ ಎರಡನೇ ಪುಸ್ತಕ "ಇದೇ ಇದರ ಹೆಸರು" ಬಿಡುಗಡೆ ಸಮಾರಂಭ. ಪ್ರಕಾಶಣ್ಣರನ್ನು ಮೊದಲನೆಯ ಬಾರಿ ನೋಡಿ ಮಾತನಾಡಿಸಿದ ಖುಷಿ ಒಂದೆಡೆಯಾದರೆ, ಬರೀ ಕಂಪ್ಯೂಟರ್ ಪರದೆಗೆ ಅಂಟಿಕೊಂಡಂತಿದ್ದ ಬ್ಲಾಗಿಗರ ಸ್ನೇಹ ಮೊದಲಬಾರಿಗೆ ಪ್ರತ್ಯಕ್ಷ ರೂಪ ಪಡೆಯಿತೆಂಬ ಉತ್ಸಾಹ. ನಾನು ಬ್ಲಾಗಿಗರನ್ನು ಭೇಟಿಯಾಗಿದ್ದು ಇದೇ ಮೊದಲಾದ್ದರಿಂದ ಯಾರ ಮುಖ ಪರಿಚಯವೂ ಇರಲಿಲ್ಲ. ಅಲ್ಲಿಗೆ ಬಂದಿದ್ದ ಎಲ್ಲರನ್ನೂ.. ಯಾರು ಯಾರು ಯಾವ ಯಾವ ಬ್ಲಾಗಿನವರು ಎಂದು ಗುರುತು ಹಿಡಿಯುವುದೇ ಒಂದು ಮೋಜಿನ ಆಟವಾಗಿತ್ತು.. "ಸಾರ್ ನೀವಾ... ಹೇಗಿದ್ದೀರ?" ಎಂಬ ಮಾತಿನಿಂದ ಮೊದಲಾಗಿ ಬ್ಲಾಗಿನಲ್ಲಿ ಪ್ರತಿಯೊಬ್ಬರೂ ಎಂದೋ ಹಾಕಿದ್ದ ಲೇಖನವೋ, ಕಥೆಯೋ, ಫೋಟೋವೋ.. ನೆನಪಿಸಿ ಅದರ ಬಗ್ಗೆ ತಮಾಷೆ ಮಾಡುವವರೆಗೂ ಮಾತು ಸಾಗಿತ್ತು.
ಇದು ನನ್ನ ಹಾಗು ಪ್ರಕಾಶಣ್ಣನವರ ಮೊದಲ ಭೇಟಿ. ಮೊದಲು ನೋಡಿದಾಗ ಇನ್ನು ಸಮಾರಂಭ ನಡೆಯುತ್ತಿತ್ತು. ಅವರು ಬಿಜ಼ಿಯಾಗಿ ಓಡಾಡುತ್ತಿದ್ದರು. ಮಾತನಾಡಿಸಬೇಕು ಅಂದುಕೊಂಡೆ. ಅವರು ದೊಡ್ಡವರು.. ನಾನು ಮಾತನಾಡಿಸಲು ಹೋಗಿ ಅವರ ಕೆಲಸಗಳಿಗೆ ಅಡ್ಡಿಯನ್ನುಂಟು ಮಾಡುವುದು ಬೇಡ ಎಂದುಕೊಂಡು ಸುಮ್ಮನಾದೆ. ಆದರೆ ಕಾರ್ಯಕ್ರಮದ ನಂತರ ಅವರು ಹೊರಗೆ ಸಿಕ್ಕಾಗ "ನಮಸ್ಕಾರ ಸಾರ್" ಎಂದೆ ಅಷ್ಟೆ.. ಅವರೇ ನನ್ನನು "ಪ್ರದೀಪ್ ರಾವ್" ಎಂದು ಕರೆದು ಗುರುತಿಸಿದರು. ಬಹಳ ಸಂತೋಷವಾಯಿತು.
ಪ್ರಕಾಶಣ್ಣರನ್ನು ಮೊದಲ ಬಾರಿ ಭೇಟಿಯಾದಾಗಲೇ ಮೆಚ್ಚಿದೆ. ಅವರ ವ್ಯಕ್ತಿತ್ವವನ್ನು ಸರಳವಾಗಿ ಮೂರೇ ಪದಗಳಲ್ಲಿ ಹೇಳಬೇಕೆಂದರೆ ಅವರೊಬ್ಬ ಸ್ನೇಹಜೀವಿ.. ಭಾವಜೀವಿ.. ಹಾಸ್ಯಜೀವಿ.
ಸಮಾರಂಭದ ಮುಖ್ಯ ಅತಿಥಿ ಹಾಸ್ಯನಟ ಕೋಮಲ್‍ರವರ ಜೊತೆಗೆ ನಮ್ಮ "ಪಕ್ಕುಮಾಮ"
ಅಲ್ಲಿ ದೊಡ್ಡ ದೊಡ್ಡ ಕ್ಯಾಮೆರಾಗಳ ಭರಾಟೆ ಜೋರಾಗಿತ್ತು!
ಅದ್ಭುತ ಛಾಯಾಚಿತ್ತಾರಗಳಿಂದ ಮೋಡಿ ಮಾಡಿದ ದಿಗ್ವಾಸ್ ಹೆಗ್ಡೆ. ಪುಸ್ತಕದ ಮುಖಪುಟ ಚಿತ್ರ ಇವರ ಕೊಡುಗೆ.
ಅವರ ಬ್ಲಾಗ್- "ಚಿತ್ರಪಟ" http://chithrapata.blogspot.com
ನಾನು ದಿಗ್ವಾಸ್‍ರವರೂ ನಮ್ಮೆಲ್ಲರೊಡನೆ ಫೋಟೋದಲ್ಲಿ ಬೀಳಲಿ ಎಂದು Group Photoಗೆ ಬನ್ನಿ ಎಂದು ಕರದೆ. ಆದರೆ ಅವರು ಫೋಟೋ ತೆಗೆಯಲು ಕರೆಯುತ್ತಿದ್ದಾರೆ ಎಂದು ತಿಳಿದುಕೊಂಡು ಫೋಟೊ ತೆಗೆಯುತ್ತಾ ಕ್ಯಾಮೆರಾ ಹಿಂದೆಯೇ ಉಳಿದುಕೊಂಡರು..!
ಅಂದು ಸಮಾರಂಭದಲ್ಲಿ ನೂರಾರು ಜನ ಸಹೃದಯರನ್ನು ನೋಡಿದೆ. ಭೇಟಿಯಾಗಿ ಪರಿಚಯ ಮಾಡಿಕೊಂಡೆ. ದಿನವೂ ಬ್ಲಾಗ್‍ಗಳನ್ನು ನೋಡಿ ಓದುವ ನನಗೆ ಅಲ್ಲಿ ಬಂದಿದ್ದ ಎಲ್ಲ ಒಳ್ಳೆ ಬ್ಲಾಗಿಗರ ಮತ್ತು ಅವರ ಬ್ಲಾಗುಗಳ ಪರಿಚಯ ಮಾಡಿಕೊಳ್ಳುವ ಆಸೆಯಿತ್ತು. ಅಲ್ಲಿ ನೆರೆದಿದ್ದ ಅನೇಕ ಬರವಣಿಗೆಗಾರರ ಬ್ಲಾಗಿನ ಬಗ್ಗೆ ತಿಳಿದುಕೊಂಡೆ. ಆದರೆ ಇನ್ನು ಕೆಲವರು ಒಳ್ಳೆ ಒಳ್ಳೆ ಲೇಖಕರ ಪರಿಚಯ ಹಾಗು ಅವರ ಬ್ಲಾಗಿನ ಪರಿಚಯ ಗಡಿಬಿಡಿಯಲ್ಲಿ ಕೈ ತಪ್ಪಿ ಹೋಯಿತು ಎನ್ನಿಸಿತು.. ಅದಕ್ಕೆ ನನ್ನ ಬ್ಲಾಗಿನಿಂದಲೇ ಪ್ರಯತ್ನ ಮಾಡುತ್ತಿದ್ದೇನೆ. ಫೋಟೋ ಗಳ ಮೂಲಕ ನನಗೆ ಗೊತ್ತಿರುವವರ ಹಾಗು ಅವರ ಬ್ಲಾಗಿನ ಪರಿಚಯ ನಿಮಗೆ ಮಾಡಿಸುತ್ತೇನೆ. ನನಗೆ ಗೊತ್ತಿಲ್ಲದವರ ಬಗ್ಗೆ ನಿಮಗೆ ಗೊತ್ತಿದ್ದರೆ ನೀವು ಅವರ ಪರಿಚಯ ಹಾಗು ಬ್ಲಾಗ್ ವಿಳಸವನ್ನು ನನಗೆ ತಿಳಿಸಿ
PLEASE FILL UP THE BLANKS:
PHOTO-1
From left to right:
1> PARAANJAPE K.N. - "ಜೀವನ್ಮುಖಿ" - http://nirpars.blogspot.com/
2> Balu Subbu - "ನಿಮ್ಮೊಳಗೊಬ್ಬ ಬಾಲು" - http://nimmolagobba.blogspot.com/
3> Gubbachci Satish - "ಗುಬ್ಬಚ್ಚಿ ಸತೀಶನ ಚಿಲಿಪಿಲಿ" - http://nallanalle.blogspot.com/
4> ಯಾರವರು?
PHOTO-2
ಇವರು "ಮಾನಸರಂಗ" ಬ್ಲಾಗಿನ ವಾಣಿಶ್ರೀಯವರಂತೆ ಕಂಡರು. ಹೌದೆ ಅಲ್ಲವೇ ತಿಳಿಸಿ?http://vanishrihs.blogspot.comದೆಹಲಿಯಿಂದ ಬಂದ ಸೀತಾರಾಮ ಕೆಮ್ಮಣ್ಣುರವರು
ಅವರ ಬ್ಲಾಗ್ - "ಒಂಚೂರು ಅದು! ಇದು!" -
http://nannachutukuhanigavanagalu.blogspot.com
ಆಧ್ಯಾತ್ಮಿಕ ಹಾಗು ಸಾತ್ವಿಕ ವಿಚಾರಗಳುಳ್ಳ ಉತ್ತಮ ಲೇಖನಗಳ ಬ್ಲಾಗ್ "ನಿಮ್ಮೊಡನೆ ವಿ.ಆರ್. ಭಟ್"ನ ವಿಷ್ಣು ಭಟ್‍ರವರು.
ಅವರ ಬ್ಲಾಗ್-http://nimmodanevrbhat.blogspot.com
PHOTO-3
From left to right:
1> Ashok Shetty Kodlady - "ಕುಶಿ" - http://ashokkodlady.blogspot.com
2> ಯಾರವರು?
3> ಯಾರವರು?
4> Shivprakash - "ನೆನಪಿನ ಪುಟಗಳು" - http://urshivabmf.blogspot.com
5> Gubbachci Satish - "ಗುಬ್ಬಚ್ಚಿ ಸತೀಶನ ಚಿಲಿಪಿಲಿ" - http://nallanalle.blogspot.com/
6> Girish S. - "ಗಿರಿ-ಶಿಖರ" - http://giri-shikhara.blogspot.com
7> Nagraj K. - "ಪೆನ್ನುಪೇಪರ್" - http://pennupaper.blogspot.com
8> ನಾನೇ - ಇದೇ ನನ್ನ ಬ್ಲಾಗ್!
9> Real name unknown ಕಾವ್ಯನಾಮ-ದೀಪಸ್ಮಿತ - "ಇನಿದನಿ" - http://ini-dani.blogspot.com/
PHOTO-4
ನಿಂತವರು: (From left to right):
1> ಯಾರವರು?
2> ಯಾರವರು?
3> ಯಾರವರು?
4> ದೊಡ್ಡಮನಿ ಮಂಜುನಾಥ್ - "ಮಂಜು ಕರಗುವ ಮುನ್ನ" - http://manjukaraguvamunna.blogspot.com
5> ಯಾರವರು?
6> ರಾಘವೇಂದ್ರ - ಬ್ಲಾಗ್ ಯಾವುದು?
7> Dinakar Mogeri - "ಮೂಕ ಮನದ ಮಾತು" - http://dinakarmoger.blogspot.com
8> ಯಾರವರು?
9> ಯಾರವರು?
10> Balu Subbu - "ನಿಮ್ಮೊಳಗೊಬ್ಬ ಬಾಲು" - http://nimmolagobba.blogspot.com/
11> ಯಾರವರು?
12> Ashok Shetty Kodlady - "ಕುಶಿ" - http://ashokkodlady.blogspot.com
13> ಯಾರವರು?
14> ಯಾರವರು?
15> ಇವರು ಗೊತ್ತಿಲ್ಲ ಅಂದ್ರೆ ಹೊಡೆತ ಗ್ಯಾರಂಟಿ - Prakash Hegde - "ಇಟ್ಟಿಗೆ ಸಿಮೆಂಟು"
http://ittigecement.blogspot.com
16> ಯಾರವರು?
17> ಯಾರವರು?
18> ಯಾರವರು?
19> ಯಾರವರು?
20> ಯಾರವರು?
ಹಿಂದೆ ಕುಳಿತವರು: (From left to right):
21> ಯಾರವರು?
22> Nagraj K. - "ಪೆನ್ನುಪೇಪರ್" - http://pennupaper.blogspot.com
23> ನಾನೇ - ಇದೇ ನನ್ನ ಬ್ಲಾಗ್!
24> Mahabalagiri Bhat - "ಕರಾವಳಿ ರೈಲು" - http://karavalirail.blogspot.com/
ಮುಂದೆ ಕುಳಿತವರು : (from left to right):
25> ಯಾರವರು?
26> Shivprakash - "ನೆನಪಿನ ಪುಟಗಳು" - http://urshivabmf.blogspot.com
27> Girish S. - "ಗಿರಿ-ಶಿಖರ" - http://giri-shikhara.blogspot.com
28> ಯಾರವರು?
========================================================================
ಇಲ್ಲಿ "ಯಾರವರು?" ಎಂದು ಪ್ರಶ್ನೆ ಕೇಳಿರುವವರ ಬಗ್ಗೆ ನಿಮಗೆ ಗೊತ್ತಿದ್ದರೆ ದಯವಿಟ್ಟು ಅಲ್ಲಿ ಕೊಟ್ಟಿರುವ ಫೋಟೋ ನಂಬರ್ ಜೊತೆಗೆ ಸೀರಿಯಲ್ ನಂಬರ್ ಹೇಳಿ ತಿಳಿಸಿ.. ಹೀಗೆ ಇಲ್ಲೊಂದು Mini Blog Directory ಉದ್ಭವವಾಗಲಿ! ಜೈ ಹೋ!
========================================================================
ಫೋಟೋ ಕೃಪೆ - ಬಾಲು ಸುಬ್ಬು, ಪ್ರಕಾಶ್ ಹೆಗಡೆ, ಸಂತೋಷ್ ಹೆಗಡೆ ಮತ್ತು ದಿಗ್ವಾಸ್ ಹೆಗಡೆ =======================================================