Sunday, March 13, 2011

Callcenter ಉದ್ಯೋಗಿ

photo courtesy: fotolia

ಸೂರ್ಯನ ಕಂಡು ಆಯಿತೊಂದು ತಿಂಗಳು
ಅಂದಿನಿಂದಲೇ ಕಂಡಿಲ್ಲ ನಾನು ಬೆಳುದಿಂಗಳು
ಗಂಟೆಗಟ್ಟಲೇ ಗಣಕಯಂತ್ರದ ಪರದೆಯ ಸಹಿಸಿ
ಕೆಂಪಾಗಿ ಅಳುತಿವೆ ಕಂಗಳು
ಹೊಟ್ಟೆಯು ಸಿಟ್ಟಿನಲಿ ಘರ್ಜಿಸುತ್ತಿದೆ
ಮಧ್ಯರಾತ್ರಿ ತಿಂದು ಕ್ಯಾಂಟೀನಿನ ತಂಗಳು

ಆಫ಼ೀಸು ಮುಗಿಸಿ ಮನೆಗೆ ಬಂದು ಎಲ್ಲರೂ
ಸವಿಯುತಿರಲು ಸಂಜೆಯ ತಂಗಾಳಿ
ಕಂಪನಿಯ ವಾಹನ ಬಂದೇಬಿಟ್ಟಿತೆಂದು,
ಬೈದುಕೊಳ್ಳುತ್ತಾ ಹೊರಟಿರುವೆ,
ಛೆ! ನನ್ನದು ರಾತ್ರಿಯ ಪಾಳಿ.
ಕಂಪನಿಯನ್ನೇ ಕಟ್ಟಿಕೊಂಡಿರುವೆ ನಾನು,
ಮದುವೆಯಾದಷ್ಟೇ ಜವಾಬ್ದಾರಿ, ಕಟ್ಟದಿದ್ದರೂ ತಾಳಿ!

ಗಾಡಿ ಬಂದಾಯಿತು, ಇನ್ನು ಮಾಡುವ ಹಾಗಿಲ್ಲ ತಡ,
ಕಾದಿಹರು ನಮ್ಮ ಕರೆಗಾಗಿ ವಿದೇಶೀ ಗ್ರಾಹಕರು,
ನಿಭಾಯಿಸಬೇಕು ಅವರು ಹೇರಿಸುವ ಅಪಾರ ಒತ್ತಡ.

Inspiration: Chetan Bhagat's "One Night at Callcenter"

30 comments:

  1. ರಾತ್ರಿ ಪಾಳಿಯ ಕೆಲಸ ತ್ರಾಸದಾಯಕವೇ..ಆದರದು ಕೆಲವು ಸಮಯ ಅನಿವಾರ್ಯ ಕೂಡಾ.
    callcenter ಉದ್ಯೋಗಿಗಳ ಬವಣೆಯನ್ನು ಕವನದಲ್ಲಿ ಚೆನ್ನಾಗಿ ವಿವರಿಸಿದ್ದೀರಿ.

    ReplyDelete
  2. ಧನ್ಯವಾದಗಳು ಮನಮುಕ್ತಾ..

    ReplyDelete
  3. Thanks a lot Guru Sir... keep visiting :)

    ReplyDelete
  4. ನಿಜ ಹೇಳೀದಿರಿ ಪ್ರದೀಪ್.. ಒಂದು ಕಡೆ ನಾವು ಹೊರಗಿನವರಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಖುಷಿಯಾದರೂ, ಇನ್ನೊಂದು ಕಡೆ ನಮ್ಮ ಜನರ ಜೀವನ ಹೀಗಾಗುತ್ತಿದೆ ಎಂದು ಬೇಸರವಾಗುತ್ತಿದೆ :(

    ReplyDelete
  5. ಕಾಲ್ ಸೆಂಟಿಗರನ್ನು ಕವನದಲ್ಲಿ ಚನ್ನಾಗಿ ಹಿಡಿದಿದ್ದೀರಿ....
    ಒಳ್ಳೆಯ ಕವನ

    ReplyDelete
  6. Pradeep Sir,

    Good analysis of the fate of call centre employees. Its a different world totally.

    ReplyDelete
  7. ನಿಜ ವಿದ್ಯಾ‍ರವರೇ, ವಿದೇಶಿಯರಿಗೆ ಕೆಲಸ ಮಾಡುತ್ತೇವೆ ಎಂದು ಹೆಮ್ಮೆ ಪಡುತ್ತಾರೆ, ಅವರ ಉಚ್ಛಾರಶೈಲಿಯಂತೆ ಮಾತಾಡುತ್ತಾರೆ. ಆದರೆ ಆ ಕೆಲಸದ ಬವಣೆಗಳು ಬಹಳ.. ಕೆಲವು ಗಳೆಯರನ್ನು ಈ ರೀತಿ ಕಣ್ಣಾರೆ ಕಂಡ ಅನುಭವ. ಧನ್ಯವಾದಗಳು!

    ReplyDelete
  8. ಕನಸಿನ ಕಂಗಳಿನವರೇ, ನನ್ನ ಬ್ಲಾಗಿಗೆ ಸುಸ್ವಾಗತ.. ಅನಂತ ಧನ್ಯವಾಗಳು ಹೀಗೇ ಬರುತ್ತಿರಿ.

    ReplyDelete
  9. Santosh Sir,

    You are right.. Callcenter night shift guys are really appreciable for their struggle in a totally different world but I am sad about their fate. :(

    Thanks a lot! :)

    ReplyDelete
  10. Hii Pradeep,

    Nice, tumbaa chennagi 'Call center' jeevanavannu varnisiddeeri....Thank u...

    ReplyDelete
  11. u have explained the fact of life in your poem . nice one.

    ReplyDelete
  12. call center employee's life has been described perfectly...itz nice poem pradeep...but not their life...

    ReplyDelete
  13. ಕಾಲ್ ಸೆಂಟರ್ ಅಂದ್ರೆ ಮೊದಲಿಗೆ ಏನೋ ಒಂಥರಾ ಅನ್ನಿಸ್ತಿತ್ತು ಏನಿದು ಕೆಲ್ಸ ಅಂತಾ...ಪ್ರದೀಪ್ ಚನ್ನಾಗಿ ಕವನಿಸಿದ್ದೀರಿ..ಇವರ ಸುತ್ತ

    ReplyDelete
  14. Thanks Girish.. ya I feel sad for them.. :(

    ReplyDelete
  15. ಧನ್ಯವಾದಗಳು ಜಲನಯನ ನಾಗರಾಜ್‍ರವರೇ..

    ReplyDelete
  16. radeep..nimma swanta ....anubhavada ...prateeka,,chennagide,,keep writing

    ReplyDelete
  17. ಅನೇಕ ಐಟಿ ಉದ್ಯೋಗಿಗಳ ಮನದಾಳವನ್ನು ಸರಿಯಾಗಿ ಸೆರೆಹಿಡಿದಿದ್ದೀರಿ

    ReplyDelete
  18. nija.. dhanyavadagalu Deepasmita..

    ReplyDelete
  19. ವಾಸ್ತವತೆಯ ಕವನ...ಚೆನ್ನಾಗಿದೆ...

    word verification thegadre comment bariyoke innU Khushi.

    ReplyDelete
  20. Thank You Digwas.. as per your suggestion removed the word verification

    ReplyDelete