Saturday, January 15, 2011

ರಾಜಕೀಯದ ಎಳ್ಳು



ರಾಜಕೀಯದ ಎಳ್ಳು

ಮತ ಕೇಳಲು ಮಾತ್ರ ಬರುತಿದ್ದ ರಾಜಕಾರಿಣಿಗಳು
ಮನೆ ಬಾಗಿಲಿಗೆ ಬಂದಿಹರು ಇಂದು, ಬೀರಲೆಂದೇ ಎಳ್ಳು
ರಾರಾಜಿಸುತಿಹುದು ಪ್ರತಿ ಎಳ್ಳು ಪೊಟ್ಟಣದ ಮೇಲೂ
ಅವರದೇ ಹೆಸರು, ಚಿತ್ರ ಹಾಗು ಕೈ-ಕಮಲಗಳು,

ಹಿರಿಯರು ಅಂದು ಎಂದರು
ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು
ಇವರು ಇಂದು ಹೇಳುವರು
ನಾವ್ ಕೊಟ್ಟ ಎಳ್ಳು ತಿಂದು ನಮಗೇ ಓಟು ಮಾಡು
ಯಾರೋ ಕೇಳಿದ ಅದಕೆ ಕೊಟ್ಟರೆ ಸಾಕೆ ಎಳ್ಳು-ಬೆಲ್ಲ?
"ಹಬ್ಬದ ದಿನನಾದ್ರು ಸ್ವಲ್ಪ ತಡ್ಕಳಪ್ಪಾ..
ಚುನಾವಣೆ ಬರಲಿ ಕೊಡುವೆ ನೋಟು, ಬಿರಿಯಾನಿ, ಬಾಟ್ಲಿಯೆಲ್ಲಾ!"

ಬಂದಿದೆಯೆಂದು ಮತ್ತೆ ಮಕರ ಸಂಕ್ರಾಂತಿ
ಬೇಡಿಕೊಳ್ಳುತಿಹರು ದೇವರಿಗೆ ಪಕ್ಷದಲ್ಲಿ ಶಾಂತಿ
ದಿನವೂ ಹೀಗೆ ಬಾಯಾಗುತಿರಲಿ ಸಿಹಿ
ಕೋಟಿ ಕೋಟಿ ಬರುತಿರಲಿ ನಾವ್ ಮಾಡಲು ಒಂದು ಸಹಿ
ಹೋಳಿಗೆಯೊಳಗೆ ಹೂತು ಹೋದಂತೆ ಹೂರಣ
ಮುಚ್ಚಿಹೋಗಲಿ ನಾವ್ ಮಾಡಿದ್ದ ಎಲ್ಲಾ ಹಗರಣ
ಮನೆಯ ಮುಂದೆ ಹೊಳೆಯುತಿರಲು ಎಳೆ ಮಾವಿನ ತೋರಣ
ಲೋಕಾಯುಕ್ತರು ದಾಳಿ ನಡೆಸಿ ಕೇಳದಿರಲಿ
ಲಕ್ಷ-ಲಕ್ಷದ ಲೆಕ್ಕಾಚಾರದಲ್ಲಾದ ಲೋಪಕೆ ಕಾರಣ
ಸಿಗುತಿರಲಿ ಬಿಟ್ಟಿಯಾಗಿ ಬೆಂಗಳೂರಲ್ಲಿ ಭೂಮಿ
ತೆಪ್ಪಗೆ ಕುಳಿತಿರಲಿ ನಾವ್ ಏನೇ ಮಾಡಿದರೂ ನೋಡುತ್ತ
ಸದ್ದಿಲ್ಲದೆ ಸನ್ಮಾನ್ಯ ಕುಮಾರಸ್ವಾಮಿ!





15 comments:

  1. ನಿಮಗೂ ಮಕರ ಸ೦ಕ್ರಮಣದ ಶುಭಾಶಯಗಳು.

    ReplyDelete
  2. ರಾಜಕಾರಣಿಗಳು ಎಳ್ಳು ಬೀರಿದ್ದರ ಹಿ೦ದಿನ ಮರ್ಮವನ್ನು ಚೆನ್ನಾಗಿ ಕವನಿಸಿದ್ದೀರಿ! ನಿಮಗೂ ಮಕರ ಸ೦ಕ್ರಾ೦ತಿಯ ಶುಭಾಶಯಗಳು

    ReplyDelete
  3. ತುಂಬಾ ಧನ್ಯವಾದಗಳು ಮನಮುಕ್ತರವರೆ.. ನಿಮಗೂ ಸಹ ಸಂಕ್ರಾಂತಿಯ ಶುಭಾಶಯಗಳು

    ReplyDelete
  4. ಧನ್ಯವಾದಗಳು ಪ್ರಭಾಮಣಿಯವರೆ.. ನಿಮಗೂ ಸಹ ಸಂಕ್ರಾಂತಿಯ ಶುಭಾಶಯಗಳು

    ReplyDelete
  5. tumbaa thanks Dinakar bahala dinagala nantara nimma comment nodi bahala santosha aaytu.. :)

    ReplyDelete
  6. ಪ್ರದೀಪ್ ನಿಮಗೆ ನಿಮ್ಮ ಆತ್ಮಿಯರಿಗೆ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

    ReplyDelete
  7. Pradeep Rao..,

    ರಾಜಕೀಯದ ಎಳ್ಳು ಚೆನ್ನಾಗಿಯೇ ಬೆರೆತಿದೆ..
    ಶುಭಾಶಯಗಳು...

    ReplyDelete
  8. Thank you Jalanayana. Wish you the same!

    ReplyDelete
  9. This comment has been removed by the author.

    ReplyDelete
  10. Tumba dhanyavaadagalu Vichlitaravare.. nimgu saha sankrantiya shubhAshayagalu

    ReplyDelete
  11. pradeep rao ravare nimma kavanadalli raajakeeyada ellu chennaagi beresiddeera! nimaguu sankrantiya shubhaashayagalu.

    ReplyDelete
  12. tumnba dhanyavaadagalu kalaravaravare.. nimagu sankranti habbada shubhashayagalu

    ReplyDelete