Tuesday, September 28, 2010

2001 - 9/11 - WTC Love story!


The World Trade Center (WTC) was a complex of seven buildings in Lower Manhattan in New York City that were destroyed in the September 11, 2001 terrorist attacks.The famous twin towers were 110 storey buildings. On September 11, 2001, terrorists hijacked American Airlines Flight 11 and crashed it into the northern facade of the north tower at 08:46, impacting between the 93rd and 99th floors. Seventeen minutes later, a second team of terrorists crashed the similarly hijacked United Airlines Flight 175 into the south tower, impacting between the 77th and 85th floorsAfter burning for 56 minutes, the South Tower collapsed, followed a half-hour later by the North Tower, with the attacks on the World Trade Center resulting in 2,752 deaths. 7 World Trade Center collapsed later in the day and the other buildings, although they did not collapse, had to be demolished because they were damaged beyond repair. Groundbreaking for the World Trade Center took place on August 5, 1966. The North Tower was completed in December 1970 and the South Tower was finished in July 1971.

- Source Wikipedia



ಆವಳು ಪಕ್ಕದ ಮನೆಯ ಹುಡುಗಿ
ಬೆಳೆಯುವಾಗಲೇ ನನ್ನ ಮನ ಸೆಳೆದ ಬೆಡಗಿ
ನೋಡುತ್ತಿದ್ದೆ ನಾನವಳ ಆಗಾಗ ಕಿಟಕಿ ಮರೆಯಲ್ಲಿ ಅಡಗಿ

ಆವಳ ನೋಡುತ್ತಲೇ ಬಳೆದೆ
ಹಗಲು ರಾತ್ರಿ ಅವಳ ಸನಿಹದಲ್ಲೇ ಕಳೆದೆ
ಬೆಳೆದು ನಿಂತೆ ನಾ ಆಗಸದ ಎತ್ತರಕೆ
ಕಾದು ನಿಂತೆ ಅವಳ ಒಪ್ಪಿಗೆಯ ಉತ್ತರಕೆ
ಅವಳ ಕನಸುಗಳೆಂಬ ಕಂಬಗಳ ಮೇಲೇರಿ
ನಾ ಮೆಟ್ಟಿ ನಿಂತೆ ಬಾಳಿನ ಮೇಲು ಮೆಟ್ಟಿಲು
ಸಾಧ್ಯವಾಗಿರಲಿಲ್ಲ ಬಹಳಷ್ಟು ವರ್ಷ ಯಾರಿಗೂ
ಮತ್ತೊಮ್ಮೆ ನನ್ನಷ್ಟು ಎತ್ತರಕ್ಕೆ ಕಟ್ಟಲು

ನನ್ನಂತೆಯೇ ಅವಳು, ಅವಳಂತೆಯೇ ನಾನು
ನಮ್ಮ ಪ್ರೀತಿಯ ಮೆಚ್ಚಿ ತಲೆ ಮುಟ್ಟಿ ಹರಿಸಿತ್ತು ಬಾನು,
ನೋಡಿದವರೆಲ್ಲ ಕಂಡರು, ಕಂಡು ನುಡಿದರು,
ಕನ್ನಡಿಯಂತೆ ಹೊಳೆವ ಅವಳ ಕಣ್ಣ ತುಂಬ
ಅನುಕ್ಷಣ ಕಾಣುತಿತ್ತು ನನ್ನದೇ ಬಿಂಬ!

ವಿಶ್ವದ ಮೂಲೆ ಮೂಲೆಯಿಂದ ಬಂದು ನೋಡಿ
ಹಾಡಿ ಹೊಗಳುತ್ತಿದ್ದರು, ಜನ ನಮ್ಮ ಜೋಡಿ
ಆಗ ಸ್ವರ್ಗಕೂ ನಮಗೂ ಮೂರೇ ಮಹಡಿ!
ನಿಂತಿದ್ದೆವು ಸಂತಸದಿ ಆಗಸವ ಚುಂಬಿಸಿ
ತಣಿಸಿದ್ದೆವು ನೂರಾರು ಜನರ ಕಣ್ಣು ಮನ ತುಂಬಿಸಿ

ಅದೊಂದು ದಿನ ರಾತ್ರಿ ಮುರಿದಳವಳು ಮೌನ,
ಇಂತೆಂದಳು ಕರೆದು ನನ್ನ,

ನಾವು ಪ್ರೇಮಿಗಳದರೂ ಬರಲು ಸಾಧ್ಯವಿಲ್ಲ ಸನಿಹ,
ತಬ್ಬದಿರು ನೀ ನನ್ನ, ಓ ನನ್ನ ಇನಿಯ,
ಮಾತಿಗೆ ತಪ್ಪಿ ಒಂದು ಹೆಜ್ಜೆ ಮುಂದಿಟ್ಟರೂ ನೀನು
ಉರುಳಿ ಬೀಳುವೆ ನೀ, ಅಗುವುದಿಲ್ಲಿ ಭೀಕರ ಪ್ರಳಯ!

ಆಗಿನ ಇಸವಿ ಎರಡು ಸಾವಿರ ಒಂದು,
ಅಂದಿನ ತಾರೀಖು ಸೆಪ್ಟೆಂಬರ್ ಹನ್ನೊಂದು,
ನನ್ನನೂ, ನನ್ನ ಒಳಗಿದ್ದ ಜನರನ್ನೂ
ಮುಂಜಾನೆಯೇ ಕೈ ಬೀಸಿ ಕರೆಯುತ್ತಿತ್ತು
ಎಲ್ಲಿಂದಲೋ ಒಂದು ಮೋಹನ ಮುರುಳಿ ರಾಗ
ಗಾಬರಿಯಿಂದ ಕಣ್ಬಿಟ್ಟು ನೋಡಿದೆ ನಾನಾಗ!



ನನ್ನೆಡೆಗೆ ನುಗ್ಗಿ ಬರುತಿತ್ತು, ಒಂದು ಬೃಹತ್ ವಿಮಾನ
ಅವಳು ಸುರಕ್ಷಿತ ವಾಗಿರುವುದ ಕಂಡು ನನಗೆ ಸಮಾಧಾನ!

ಸೀಳಿತು ನನ್ನೆದೆಯ ದೇಹವಾಯಿತು ಛಿದ್ರ
ನಾ ಹೊತ್ತಿ ಉರಿದು ಉರುಳಿದ ದೃಶ್ಯ ರುದ್ರ


ಉರುಳುವಾಗ ಅವಳ ಮಾತುಗಳು ನೆನಪಾಯ್ತು
ಅದರಂತೆ ಈ ದೇಹ ನಿಂತಲ್ಲೇ ಪುಡಿಯಾಯ್ತು
ಈಗ ಬಹುಶಃ ನಿಮಗೆ, ನಾನ್ಯಾರೆಂದು ಗೊತ್ತಾಯ್ತು!

World Trade Centerನ Twin Towersನಲ್ಲಿ
ನಾನು North Tower ಅವಳು South Tower!

ಛೆ! ನಾ ಹೇಳುವುದಿತ್ತು ಅವಳಿಗೆ ಇನ್ನೂ ಬಹಳಷ್ಟು ಬಾಕಿ
ನಮ್ಮ ಕರುಣೆಯೆ ಇಲ್ಲದೆ ಕೊಂದ ಒಸಾಮಾ ಎಂಬ ಪಾತಕಿ
ಹಿಡಿದು ತಂದು ಸಜೀವ ದಹಿಸಿ ಇಲ್ಲಿಯೇ ಹೂತು ಹಾಕಿ
ಆವನು ಯಾವ ದೇಶದಲ್ಲಿಯೇ ಅಡಗಿದ್ದರೂ..
ನನ್ನ ವಿಳಾಸ: ಸಮಾಧಿ, Ground-Zero!

Above: A view of Ground zero 2 days after the attack.

Below: 2 hi power Laser beams are lit at Ground zero on 11th September 2010 to mark the 9th year anniversary of 9/11 attcks in memory of the Beautiful Twin Towers of WTC




ಫೋಟೋ ಕೃಪೆ: ಅಂತರ್ಜಾಲ

13 comments:

  1. WTC ಯ ನೈಜವಾದ ..ದಾರುಣ ಅ೦ತ್ಯದ ಮೊದಲಿನ ವಾಸ್ತವಕ್ಕೆ ಹೆಣೆದ ಸು೦ದರ ಕಲ್ಪನೆ..ಅ೦ತ್ಯದ ಸಮಯದ ಭಾವನೆಯ ಕಲ್ಪನೆ ಚೆನ್ನಾಗಿದೆ.ಬರೆಯುತ್ತಿರಿ.

    ReplyDelete
  2. hi...geleya,,what a comparison,,,really u r great,,,,,i liked ur way of expression..keep writing

    ReplyDelete
  3. ಪ್ರದೀಪ್,
    ಮನಸ್ಸು ತುಂಬಿ ಬಂತು.... ತುಂಬಾ ಚೆನ್ನಾಗಿದೆ...... ಮತ್ತೆ ನೆನಪು ಕೆದಕಿತು....

    ReplyDelete
  4. ತುಂಬಾ ಸರಳವಾಗಿ ಹೇಳಿದಿರ ಆ ದಾರುಣ ಪ್ರೇಮಿಗಳ ಕತೆಯನ್ನ
    ಮತ್ತೆ ನೆನಪಾಯ್ತು ಸೆಪ್ಟೆಂಬರ್ 11

    ReplyDelete
  5. Tumba thanks Manjunath! Modala sala bandidira.. Svagatha.. heege barta iri.. Thanks!

    ReplyDelete
  6. ಚೆಂದದ ಹೆಣಿಕೆ ಕಲ್ಪನೆ. ಕೊನೆಯ ಆಶಯ ಬೇಗ ಪೂರೈಸಲಿ!

    ReplyDelete
  7. Tumba Thanks Sitaram sir.. nimma haaraike bahalastu deshada haaraike kuda.. aa shubha dina begene barali anta haaraisuve..

    ReplyDelete
  8. Pradeep,

    Sorry for late, Very Nice tumbaa chennaguide, nirupane ishta aitu

    ReplyDelete