ಆಧ್ಯಾತ್ಮಿಕ ಚಿಂತನೆ
ಬದುಕುತಿರಲು ಓ ಮಾನವ,
ಈ ನಶ್ವರ ದೇಹವ ನಂಬಿ
ಜೋಕೆ ತುಳುಕಿ ಹೋದೀತು
ಪಾಪದ ಕೊಡವು ತುಂಬಿ
ಎಂಟು ದಿಸೆಯಲ್ಲೂ ಕಟ್ಟಿಹಾಕಿರಲು
ನಮ್ಮನು ಈ ಲೌಕಿಕ ಬಂಧನ
ವೈರಾಗ್ಯ ಪಡೆಯಲು ಹೋಗುವುದು ಎತ್ತ?
ದಾರಿಯ ತೋರಿ ಕಾಪಾಡು ದೇವ
ಆಧ್ಯಾತ್ಮದ ಬೆಳಕ ಕಾಣರಿಯದ ಅಂಧನ
ನಿನ್ನೆಡೆ ಬಾಗಿರಲಿ ಸದಾ ನನ್ನ ಚಿತ್ತ.
ಕರುಣಿಸಿ ಒಮ್ಮೆ ಅಂತರಂಗ ಶುದ್ಧಿ
ಬಿಡಿಸು ನಾನು-ನನ್ನದೆಂಬ ಬುದ್ಧಿ
ಜೀವವಿರುವ ತನಕ ಜೀವಿಸುವೆವು
ಇನ್ನೊಂದು ಜೀವವ ತಿಂದು
ಮಾಡಿದ ಕರ್ಮಗಳು ತೀರಿದವೆಂದು
ಬಗೆವರು ಗಂಗಾನದಿಯಲ್ಲಿ ಮಿಂದು
ಮುಂದೂಡುತ್ತಿದ್ದರೆ ನಾಳೆ, ನಾಳೆಯೆಂದು
ಆಧ್ಯಾತ್ಮದ ಪಾಠ ಕಲಿಯುವುದು ಎಂದು?
Dont Miss this very meaningful song sung by Dr. Rajkumar
ಪ್ರೇಮ ಕವಿಯ ಪಯಣ ಅಧ್ಯಾತ್ಮದತ್ತ????
ReplyDeleteಚೆ೦ದದ ಕವನ
ಮೊದಲ ನಾಲ್ಕು ಸಾಲ೦ತೂ ತು೦ಬಾ ಚೆನ್ನಾಗಿದೆ.
ಬದುಕುತಿರಲು ಓ ಮಾನವ,
ReplyDeleteಈ ನಶ್ವರ ದೇಹವ ನಂಬಿ
ಜೋಕೆ ತುಳುಕಿ ಹೋದೀತು
ಪಾಪದ ಕೊಡವು ತುಂಬಿ
ಈ ಸಾಲುಗಳು ತುಂಬಾ ಅರ್ಥಪೂರ್ಣ...ತುಂಬಾ ಸುಂದರವಾಗಿದೆ ನಿಮ್ಮ ಕವನ...
@ Sitaram.. ಪ್ರೇಮದ ಹೊರತಾಗಿಯೂ ಕವನ ಬರೆಯಲು ಬಹಳಷ್ಟು ವಿಷಯಗಳು ಲೋಕದಲ್ಲಿದೆ ಅನ್ನಿಸ್ತು.. ಪ್ರಯೋಗ ಮಾಡಿ ನೋಡಿದೆ..
ReplyDelete@ Ashok.. tumba thanks sir.