Tuesday, May 20, 2014

MH-370



ನಿಲ್ಲು ನಿಲ್ಲು ನಿಲ್ಲೇ ಓ ಪತಂಗ
ಹೊತ್ತೊಯ್ದೆ ಜೀವಗಳ ಅದೆಲ್ಲಿಗೆ ಸಂಗ?

ಪೂರ್ವ ನಿಶ್ಚಿತ ಪಥದಿಂದ ಏಕೀ ನಿಗೂಢ ಪಲ್ಲಟ?
ಆಜನ್ಮ ರ‍್ಯಾಡಾರು ಬಂಧನದಿಂದ ಮುಕ್ತವಾಗುವ ಹಠ
ಸಾರಥಿಯೇ ಸಾವ ಬಯಸಿ ಸಂಪರ್ಕ ಕಡಿದನೇ ದಿಟ?
ಹಿಂದೂ ಮಹಾಸಾಗರ ಸೇರಿತೇ ಸೂತ್ರ ಹರಿದ ಪಟ?

ಅಂತ್ಯ ಹಾಡಿದ ಪೈಲಟು ಹಾರೈಸಿ ಅಂತಿಮ ಶುಭರಾತ್ರಿ
ಹಗಲ ಮತ್ತೆ ಕಾಣೆವೆಂದು ಮೊದಲೇ ಇತ್ತೇ ಖಾತರಿ?
ಎಲ್ಲೆಲ್ಲೂ ಅಚ್ಚರಿ! ಅಲಭ್ಯ ಗುಪ್ತಯಾನದ ಮಾಹಿತಿ,
ಮತ್ತೆ ಹುಟ್ಟಿ ಬಂದನೇ ಒಸಾಮ ಕೆಡವಲು ನಿನ್ನಾಹುತಿ?

ಭೂಗೋಳವ ಜಾಲಾಡಿ ಸೋತರು ಅಂತರಾಷ್ಟ್ರೀಯ ಪಡೆ
ವಿಫಲವಾಯಿತು ಅಪೂರ್ವ ಶೋಧ ಹುಡುಕಿ ಎಲ್ಲ ಕಡೆ
ನಕ್ಕರು ಮಂಗಳಗ್ರಹ ಜೀವಿಗಳು ನೋಡಿ ನಮ್ಮೆಡೆ
ಸ್ವಗ್ರಹದಿ ವಿಮಾನದ ಸುಳಿವಿಲ್ಲ, ನಮ್ಮ ಹಿಡಿದಾರೆ? ಬಿಡೆ.

ವಾಯುವಿಹಾರದಿ ಸದ್ದಿಲ್ಲದೆ ಸುಖನಿದ್ರೆಯಾಯಿತು ಚಿರನಿದ್ರೆ
ತಲುಪಿದೆ ಆಗಸದಾಚೆಯ ಅಙ್ಞಾತ ದೇಶ, ಅನಂತ ಎತ್ತರ,
ಮತ್ತೆ ಮತ್ತೆ ಒಡಲ ಜೀವಗಳ ಎತ್ತೆತ್ತಿ ನೀರಿಗೆಸೆದು ಬಂದರೂ
ನೀನಂತೂ ಗಂಗೆಯಂತೆಯೇ ಪ್ರಶ್ನಾತೀತ, ನಿರ್ದಯಿ, ನಿರುತ್ತರ!

ನಿಲ್ಲು ನಿಲ್ಲು ನಿಲ್ಲೇ ಓ ಪತಂಗ
ಹೊತ್ತೊಯ್ದೆ ಜೀವಗಳ ಅದೆಲ್ಲಿಗೆ ಸಂಗ?




8 comments:

  1. ನಿಜ.. ಎಂತಹ ದುರ್ಘಟನೆ.. :( ಕನಸುಗಳ ಕಟ್ಟಿದ್ದವರು, ಜವಾಬ್ದಾರಿ ಹೊತ್ತವರು, ಭವ್ಯ ಭವಿಷ್ಯ ಹೊಂದಿದ್ದ ಮಕ್ಕಳು ಯಾರ್ಯಾರಿದ್ದರೋ.... ಕಾಣದಂತೆ ಮಾಯವಾದರಲ್ಲಾ...!!
    ಅದು ಒಂದುರೀತಿಯ ಕವಿತಾರ್ಪಣ ಆ ಅಗಲಿದ ಆತ್ಮಗಳಿಗೆ ..

    ReplyDelete
  2. I thing same tune made as DIL RANGEELA film song as nillu nillu ondu nimisha...

    With Regards,
    Santosh Kulkarni
    santosh9702.blogspot.in

    ReplyDelete
  3. Hi Pradeep,
    MH370..... kavanada roopadalli nammellara asahyaakathe vyaktavaagide! manushyaru enella saadhisidaru - intha sandarbhagaLalli enenu saadhisiye illa annuva bhaava mooduttade. Agalida aatmagaLige shaanti korutta, indendu intha durghatane aagadirali endu prarthisuve.

    ReplyDelete
  4. ಪ್ರದೀಪಣ್ಣಾ...ಸೂಪರ್ರು...
    ಮರ್ತೇ ಬಿಟ್ಟಿದ್ದೆ ನಾನು ಆ ವಿಮಾನದ ಕಥೆನಾ....ನೆನಪಿಸಿದಿರಿ..
    ಕವನದ ವಸ್ತುವೇ ವಿಶಿಷ್ಟವಾಗಿದೆ :)..ಜೊತೆಗೊಂದು ಆಕಾರ,+ಪ್ರಾಸ ನಂಗಿಷ್ಟವಾಯ್ತು :)...

    "ಅಂತ್ಯ ಹಾಡಿದ ಪೈಲಟು ಹಾರೈಸಿ ಅಂತಿಮ ಶುಭರಾತ್ರಿ
    ಹಗಲ ಮತ್ತೆ ಕಾಣೆವೆಂದು ಮೊದಲೇ ಇತ್ತೇ ಖಾತರಿ"
    ಚೆನಾಗಿದೆ ಕಣ್ರಿರಿ..
    ಧನ್ಯವಾದಗಳು ಬರೆಯುತ್ತಿರಿ :)...
    ನಮಸ್ತೆ :).

    ReplyDelete
  5. ಆ ಮಹಾದುರಂತಕ್ಕೆ ಇದೊಂದು ಸೂಕ್ತ ಶೋಕಗೀತೆ.

    ReplyDelete
  6. ಇಂದಿಗೂ ನಿಜವಾದ ಗುಟ್ಟೇ ಆಗಿರುವ ಈ ದುರಂತದ ಅಸಲೀಯತ್ತು ಎಂದಿಗಾದರೂ ತೆರೆದುಕೊಂಡೀತು, ಹಾಗೆಯೇ, ಮುಂದೆ ಇಂತಹ ದುರಂತಗಳು ಸಂಭವಿಸದಂತೆ ವಹಿಸಬಹುದು ಎಚ್ಚರಿಕೆಯಾ!

    ಸಾಗರನ ಕುರಿತಂತೆ ಸಮರ್ಥ ಸಾಲು:
    'ನೀನಂತೂ ಗಂಗೆಯಂತೆಯೇ ಪ್ರಶ್ನಾತೀತ, ನಿರ್ದಯಿ, ನಿರುತ್ತರ!'

    ReplyDelete
  7. ಚೆನ್ನಾಗಿದೆ ಪ್ರದೀಪ್ ಜೀ...

    ReplyDelete
  8. ಇದೊಂದು ಬಗೆಹರಿಯದ ದುರಂತ, unsolved mystery. ಏನಾಯಿತೆಂದು ಇನ್ನೂ ಗೊತ್ತಾಗಿಲ್ಲ. ಒಳ್ಳೆಯ ಕವನ

    ReplyDelete