Monday, November 25, 2013

ನಗುಬೆಳಕ ಚೆಲ್ಲುತಿರು ಹೀಗೇ...


ಕತ್ತಲೆಯ ಕ್ಷಣಗಳು..
ನನ್ನ ಕಾಡುವವು ಗೆಳತಿ..
ನಿನ್ನ ಮೌನದಂತೆ..

ನನ್ನ ಅವ್ಯಕ್ತ ಆಸೆಗಳೇ
ನನಗೆ ಮುಳುವಾಗುವವು..

ನಿನ್ನ ಒಲವಿನ ಹಣತೆಯ ಸುತ್ತ
ಹಾರಾಡುವ ಹುಳುವಾಗುವವು..

ಸಾಯುವವು ವಿರಹದಗ್ನಿಯಲಿ
ರೆಕ್ಕೆ ಸುಟ್ಟು...

ನೀ ನಗುಬೆಳಕ ಚೆಲ್ಲಲು
ಅವಕೆ ಮರುಹುಟ್ಟು...

ಎರೆಯುತಿರು ಕಣ್ಣಲ್ಲೆ
ಪ್ರೀತಿಯ ತೈಲವ ಹೀಗೆ...

ಬೆಳಗುತಿರು ಮನೆ ಮನದಿ
ಅನಂತ ಅನುರಾಗದ ದೀವಿಗೆ! 
=========================================
 
ಚಿತ್ರದಲ್ಲಿರುವವರು: ದಿಲೀಪ್ ರಾವ್ &  ಸಂಧ್ಯಾ ಎಂ. ಎಸ್. (ನನ್ನ ಅಣ್ಣ ಮತ್ತು ಅತ್ತಿಗೆ)

23 comments:

  1. ಪರಸ್ಪರಾನುರಾಗವೇ ಬಾಳಿಗೆ ಬೆಳಕಾಗುವಂತಹ ಕವಿತೆ ಚೆನ್ನಾಗಿದೆ

    ReplyDelete
    Replies
    1. ತುಂಬಾ ಧನ್ಯವಾದಗಳು ರವಿ ಸಾರ್... ಬಹುಶಃ ನನ್ನ ಬ್ಲಾಗಿಗೆ ನಿಮ್ಮ ಮೊದಲ ಭೇಟಿ ಎಂದುಕೊಳ್ಳುವೆ... ನಿಮ್ಮ ಆಶೀರ್ವಾದಗಳು ಹೀಗೆ ಸಿಗುತಿರಲಿ

      Delete
  2. ವಾಹ್..!! ಸೂಪರ್ ಚೆಂದದ ಕವನ

    ReplyDelete
    Replies
    1. ತುಂಬಾ ಧನ್ಯವಾದಗಳು ಸುಗುಣಾ ಮೇಡಮ್

      Delete
  3. ಭಾವಗಳ ಹುಟ್ಟಿಗೂ ಮತ್ತು ಅನಾವಶ್ಯ ವಿಚಾರಗಳ ಅವಸಾನಕೂ ಆಕೆಯೇ ಕಾರಣ. ತುಂಬಾ ನೆಚ್ಚಿಗೆಯಾಯಿತು. ಛಾಯಗ್ರಹಣ ಅತ್ಯುತ್ತಮ.

    ReplyDelete
    Replies
    1. ತುಂಬಾ ಧನ್ಯವಾದಗಳು ಬದರಿ ಸಾರ್... ನಿಮ್ಮ ಪ್ರೋತ್ಸಾಹಕ್ಕೆ ನಾನೆಂದು ಚಿರಋಣಿ!

      Delete
  4. ಚಂದದ ಸಾಲುಗಳು, ತುಂಬಾ ಚೆನ್ನಾಗಿದೆ .

    ReplyDelete
    Replies
    1. ಧನ್ಯವಾದಗಳು ಚೆನ್ನಬಸವರಾಜ್ ಸಾರ್...

      Delete
  5. ಚೆನ್ನಾಗಿದೆ ಕವಿತೆ... ಛಾಯಾಗ್ರಹಣ ಅದ್ಬುತ ...

    ReplyDelete
    Replies
    1. ಧನ್ಯವಾದಗಳು ರಾಕೇಶ್! :)

      Delete
  6. ಪ್ರದೀಪ್ ತುಂಬಾ ಇಷ್ಟವಾಯ್ತು.... ಕವಿತೆ ಮತ್ತು ಚಿತ್ರ....

    ReplyDelete
    Replies
    1. ನಿಮ್ಮ ಮೆಚ್ಚುಗೆಗೆ ತುಂಬಾ ತುಂಬಾ ಧನ್ಯವಾದಗಳು!

      Delete
  7. ಸುಂದರವಾಗಿದೆ ... ದೀಪದೊಳಗಿನ ಕಾಂತಿ

    ReplyDelete
  8. chennaagide.... e sandarbhadalli GSS avara kavithe yaako nenapaayitu.. shubhavaagali...

    ReplyDelete
    Replies
    1. Tumba dhanyavadagalu Raviraj avre... nanna blog ge nimm modala bheti... susvaagata... GSS avara yaava kavite endu tilisidare nanagu nenapagabahudittu... dhanyavadagalu... barta iri...

      Delete
  9. Thank you Nenapu avre :) nanna blog ge susvaagata :)

    ReplyDelete
  10. Both picture & writing are very catchy Pradeep. u r growing.. :)

    ReplyDelete