ಬೆಳಗಾಯಿತು ಏಳು ಶ್ರೀ ಗುರು ರಾಘವೇಂದ್ರ... ಮಂತ್ರಾಲಯ ಮಠದ ಮುಖ್ಯ ದ್ವಾರದ ಎದುರು ಸೂರ್ಯೋದಯದ ದೃಶ್ಯ! =========================================================
ಮಠದ ಎದುರು ಹೊರಗೆ ಇರುವ ರಾಯರ ಪುತ್ತಳಿಯ ಮೇಲೆ ಮುಂಜಾನೆಯ ಪ್ರಥಮ ಸೂರ್ಯಕಿರಣಗಳು ==================================================================
ಮಠದ ಪಕ್ಕದಲ್ಲೇ ಇರುವ ಮಂಚಾಲಮ್ಮನ ದೇವಾಲಯ
ಮಂತ್ರಾಲಯಕ್ಕೆ ಇನ್ನೊಂದು ಹೆಸರು ಮಂಚಾಲೆ. ಇಲ್ಲಿನ ಗ್ರಾಮದೇವತೆ ಹೆಸರು ಮಂಚಾಲಮ್ಮ. ಮಠದ ಪಕ್ಕದಲ್ಲೇ ಮಂಚಾಲಮ್ಮನ ಸನ್ನಿಧಿ ಇದೆ. ಇಲ್ಲಿಗೆ ಬರುವ ಭಕ್ತಾದಿಗಳು ಮೊದಲು ಮಂಚಾಲಮ್ಮನ ದರ್ಶನ ಮಾಡಿ ನಂತರವೇ ರಾಯರ ದರ್ಶನಕ್ಕೆ ತೆರಳುವರು. =================================================================
ದೇವಾಲಯದ ಹಿಂಭಾಗದಲ್ಲಿರುವ ತುಂಗಭದ್ರಾ ನದಿ. 2009ರಲ್ಲಿ ಭಾರಿ ಪ್ರವಾಹವನ್ನು ತಂದು ಇಡೀ ಮಂತ್ರಾಲಯವನ್ನೇ ಮುಳುಗಿಸಿದ್ದ ತುಂಗಭದ್ರಾ ನದಿ ಈ ಬೇಸಿಗೆಗೆ ಒಣಗಿ ಹರಿಯುವುದನ್ನೆ ಮರೆತಿದ್ದಾಳೆ! 2009ರಲ್ಲಿ ಬಂದ ಭಾರಿ ಪ್ರವಾಹದಲ್ಲಿ ಇಲ್ಲಿನ ದೇವಸ್ಥಾನವೂ ಮುಳುಗಿ ಹೋಗಿತ್ತು. ಮಂಚಾಲಮ್ಮನ ದೇವಾಲಯವೂ ಬಿದ್ದು ಹೋಗಿತ್ತು. ರಾಯರ ಬೃಂದಾವನವೂ ಸಂಪೂರ್ಣ ಮುಳುಗಿತ್ತು. ಇಲ್ಲಿನ ಕಟ್ಟಡಗಳ ಎರಡನೆಯ ಮಹಡಿಯವರೆಗೆ ನೀರು ಬಂದಿತ್ತು. ಇಲ್ಲಿನ ಮಠದ ಸ್ವಾಮಿಗಳಾದ ಸುಯತೀಂದ್ರ ಶ್ರೀಗಳನ್ನು Helicopter ತಂದು ರಕ್ಷಿಸಲಾಗಿತ್ತು! ಇವೆಲ್ಲ ನಡೆದುದಕ್ಕೆ ಮಂಚಾಲಮ್ಮನ ಶಾಪವೇ ಕಾರಣವೆಂದು ಜನ ನಂಬಿದ್ದರು. ಈಗ ಇಲ್ಲಿ ಕಾಣುತ್ತಿರುವ ಕಟ್ಟಡಗಳೆಲ್ಲ ಹೋದ ವರುಷ ಪುನರ್ ನಿರ್ಮಾಣಗೊಂಡಿರುವುದು. ====================================================================
ತುಂಗಭದ್ರಾ ನದಿಯಲ್ಲಿ ಮಿಂದು, ಮಂಚಾಲಮ್ಮನ ದರ್ಶನ ಮಾಡಿ, ರಾಯರ ಮಠದ ಒಳಗೆ ಹೋದೆ. ಒಳಗೆ ಧರ್ಮ ದರ್ಶನಕ್ಕೇ ಬೇರೆ ಬಾಗಿಲು ಹಾಗು ಸೇವಾದರ್ಶನಕ್ಕೆ ಬೇರೆ ಬಾಗಿಲುಗಳಿದ್ದವು. ದೇವಾಲಯದ ಸುತ್ತಲಿನ ಗೋಡೆಗಳ ಮೇಲೆ ರಾಯರ ಇಡೀ ಜೀವನದ ಮುಖ್ಯ ಸನ್ನಿವೇಶಗಳನ್ನು ಬಣ್ಣ ಬಣ್ಣದ ಚಿತ್ರಗಳಲ್ಲಿ ಬಿಡಿಸಿದ್ದಾರೆ.
====================================================================
ಶ್ರೀ ಗುರು ರಾಘವೇಂದ್ರರ ಸನ್ನಿಧಿ. ಬೃಂದಾವನ. ಮಠದ ಒಳಗೆ ಮೊಬೈಲ್ ಮತ್ತು ಕ್ಯಾಮೆರಾಗಳಿಗೆ ಅನುಮತಿಯಿಲ್ಲದಿದ್ದರೂ ರಾಯರ ಬೃಂದಾವನದ ಫೋಟೋ ತೆಗೆಯಲೇಬೇಕು ಎಂದು ಪಟ್ಟು ಹಿಡಿದು, ಕದ್ದು ಮುಚ್ಚಿ ಒಳಗೆ ಕೊಂಡೊಯ್ದು ಈ ಫೋಟೋ ತೆಗೆದೇ ಬಿಟ್ಟೇ! ಕ್ಷಮೆಯಿರಲಿ! =======================================================
ರಾಯರ ಬೃಂದಾವನದ ಪಕ್ಕದಲ್ಲೇ ಇರುವ ಶ್ರೀ ವಾಧೀಂದ್ರ ತೀರ್ಥರ ಬೃಂದಾವನ. =======================================================================
11-04-2009 ರಂದು ಸ್ವರ್ಗಸ್ಠರಾದ ಶ್ರೀ ಸುಶಮೀಂದ್ರ ತೀರ್ಥರ ಬೃಂದಾವನ. ===================================================================
ಮಂತ್ರಾಲಯದ ಸುಪ್ರಸಿದ್ಧ ಪರಿಮಳ ಪ್ರಸಾದ ತಯಾರಾಗುತ್ತಿರುವ ಅಡುಗೆಮನೆ =================================================================================
ಸದಾ ಮೂಗಿನ ಮೇಲೆ ಸಿಟ್ಟು ಇರುವವರು ಮಂತ್ರಾಲಯಕ್ಕೆ ಬಂದು ದರ್ಶನ ಮಾಡಿ ಈ ಉಂಗುರವನ್ನು ಇಲ್ಲವೇ ಕೈಬಳೆಯನ್ನು ತೊಟ್ಟರೆ ದೇಹದ ಉಷ್ಣ ಕಡಿಮೆಯಾಗುವುದೆಂದು ಹೇಳುವುದುಂಟು!
ಇಲ್ಲಿನ Local Transport - ಜಿಂಗ್‍ಚಾಕಾಗಿರೋ ಆಟೋ!
ಮಂತ್ರಾಲಯದಲ್ಲಿ ಅಲ್ಪ ಸಂಖ್ಯೆಯಲ್ಲಿರುವ ಮುಸ್ಲಿಮರಿಗೆ ಈ ಆಟೋಗಳೇ ಜೀವನೋಪಾಯ. ಸುತ್ತಮುತ್ತಲಿನ ಹಳ್ಳಿಗಳಿಗೆ ಒಮ್ಮೆಗೆ 15-17 ಸೀಟು ಹಾಕಿಕೊಂಡು ಓಡಿಸುತ್ತಾರೆ. ಇಲ್ಲಿಂದ ಸುಮಾರು 20km ದೂರದಲ್ಲಿ ಪಂಚಮುಖಿ ಆಂಜನೇಯ ದೇವಸ್ಥಾನವಿದೆ. ಅಲ್ಲಿ ರಾಘವೇಂದ್ರ ಸ್ವಾಮಿಗಳು 12 ವರ್ಷಗಳ ಕಾಲ ಕುಳಿತು ತಪಸ್ಸು ಮಾಡಿದ ಗುಹೆಯಿದೆ. ಅವರ ತಪಸ್ಸಿಗೆ ಮೆಚ್ಚಿ ಆಂಜನೇಯನು ಈ ಪಂಚಮುಖಿ ಅವತಾರದಲ್ಲಿ ಪ್ರತ್ಯಕ್ಷನಾದನೆಂದು ಚರಿತ್ರೆ ಇದೆ. ಈ ದೇವಾಲಯಕ್ಕೆ ಇದೇ ಆಟೋ ಹತ್ತಿ ಹೊರಟೆ.. ಹೋಗುವ ದಾರಿಯಲ್ಲಿ ಇಡಪನೂರು ಬಳಿ ತುಂಗಭದ್ರ ನದಿಗೆ ಅಡ್ಡವಾಗಿ ಒಂದು ಸೇತುವೆ ಬರುತ್ತದೆ. ಇಲ್ಲಿ ನದಿಯ ಒಂದು ತೀರ ಕರ್ನಾಟಕ, ಮತ್ತೊಂದು ತೀರ ಆಂಧ್ರ. ಆಂಧ್ರದಿಂದ ಸೇತುವೆ ದಾಟಿ ಕರ್ನಾಟಕಕ್ಕೆ ಬರುತ್ತಿದಂತೆ ಚಾಲಕನು ತನ್ನ ಬದಿಯ ಸೀಟಿನಲ್ಲಿ ಕುಳಿತಿದ್ದ ಇಬ್ಬರನ್ನು ಹಿಂದೆ ಸೇರಿಸಿ, ತಾನು ಖಾಕಿ ಶರ್ಟನ್ನು ಹಾಕಿಕ್ಳ್ಳುತ್ತಾ ಈ ಕರ್ನಾಟಕ ಪೋಲೀಸರು ಮಾಮೂಲಿಗೆ ಸಾಯುತ್ತಾರೆ ಎಂದು ಗೊಣಗಿಕೊಂಡ. ಆಟೋದ ಒಳಗೆ ಕಿಶ್ಕಿಂದಿಯಲ್ಲಿ ನೇತುಹಾಕಿಕೊಂಡು ಹೋಗುತ್ತಿದ್ದರೆ ಅವನದು ಮ್ಯೂಸಿಕ್ ಸಿಸ್ಟಮ್ ಹಾಕಿದ! ಅದರಲ್ಲಿ ದಾರಿ ಉದ್ದಕ್ಕೂ "ಜಾನೇ ಜಾ" ಅಂತ ಯಾವುದೋ ಕರ್ಕಶ ದನಿಯ ಹಳೇ ಖವ್ವಾಲಿ! ರಾಮ ರಾಮ! ಸಾಕಾಗೋಯ್ತು! ==============================================================================
=================================================================
=====================================================================
ನಿಸರ್ಗ ನಿರ್ಮಿತ ಗದ್ದುಗೆ ಮತ್ತು ತಲೆ ದಿಂಬು ========================================================================= |
ನಮ್ಮ ಜಿಂಗ್‍ಚಾಕ್ ಆಟೋ ಮೇಲೆ ಒಂದು ಮುಸ್ಲಿಂ ಬಾವುಟ, ಸುಂದರ ಪ್ಲಾಸ್ಟಿಕ್ ಹೂಗುಚ್ಛ, ಹಾರುತ್ತಿರುವ ಮಿಣ ಮಿಣ ಬಟ್ಟೆ ಜೊತೆಗೆ ಸಂಜೆಯ ಸುಂದರ ನೀಲಿ ಆಕಾಶ! |
=====================================================================================
=====================================================================================
=====================================================================
====================================================================================
================================================================================
================================================================================== ರಾಯರ ಬಗ್ಗೆ ಕಲೆ ಹಾಕಿದ ಕೆಲವು ಮಾಹಿತಿಗಳು ===========================
ರಾಯರ ಬಗ್ಗೆ ಕಲೆ ಹಾಕಿದ ಕೆಲವು ಮಾಹಿತಿಗಳು
===========================
ನಿಜವಾದ ಹೆಸರು - ವೇಂಕಟನಾಥ
ಜನ್ಮ ದಿನಾಂಕ - 1597 AD ಮನ್ಮಥನಾಮ ಸಂವತ್ಸರ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ
ಜನ್ಮಸ್ಥಳ - ಭುವನಗಿರಿ
ನಕ್ಷತ್ರ - ಮೃಗಶಿರಾ
ತಂದೆಯ ಹೆಸರು - ತಿಮ್ಮಣ್ಣ ಭಟ್ಟರು
ತಾಯಿಯ ಹೆಸರು - ಗೋಪಿಕಾಂಬ
ಅಕ್ಕ - ವೇಂಕಟಾಂಬ
ಅಣ್ಣ - ಗುರುರಾಜಾಚಾರ್ಯರು
ಉಪನಯನ - 1602 AD
ವಿವಾಹ - 1614 AD
ಪತ್ನಿ - ಸರಸ್ವತೀಬಾಯಿ
ಪುತ್ರ - ಲಕ್ಷ್ಮೀನಾರಾಯಣಾಚಾರ್ಯ
ಸನ್ಯಾಸ ಸ್ವೀಕಾರ - 1621 AD
ಬರೆದ ಒಟ್ಟು ಗ್ರಂಥಗಳು - 48
ಬೃಂದಾವನ ಪ್ರವೇಶ - 1671 AD ವಿರೋಧಿ ನಾಮ ಸಂವತ್ಸರ ಶ್ರಾವಣ ಬಹುಳ ಬಿದಿಗೆ, ಗುರುವಾರ
ಮಾರನೇ ದಿನ ಮುಂಜಾನೆ ಮಂತ್ರಾಲಯದಿಂದ ಹೊರಟು ನಾನು ವಿದ್ಯಾಭ್ಯಾಸ ಮಾಡಿದ ಊರಾದ ದಾವಣಗೆರೆಯ ಕಡೆಗೆ ಪ್ರಯಾಣ ಬೆಳೆಸಿದೆ. ಬಳ್ಳಾರಿಯ ಮುಖಾಂತರ ಹೋಗಬೇಕಾದರೆ ಕೆಲವು ಸುಂದರ ದೃಶ್ಯಗಳು ಕಂಡವು. ಬಿಡದೇ ಕ್ಯಾಮೆರಾ ಕ್ಲಿಕ್ಕಿಸಿದೆ..
ಬಳ್ಳಾರಿ ಜಿಲ್ಲೆಯ ಸೊಂಡೂರಿನ ಧೂಳು ತುಂಬಿದ ಗಣಿಯ ದಾರಿಯಲ್ಲಿ ಸೋಲೆನ್ನದೆ ಸಾಗಿದೆ ಆಮೆ ಗತಿಯಲ್ಲಿ ಜನ ಜೀವನ.. =================================================================== |
ಗಣಿಗಳ ಧೂಳಿನಲ್ಲಿ ಮುಚ್ಚಿ ಹೋದ ದಾರಿಗಳ ಬದಿಗೊಂದು ಚೂರು Greenery - Scenery! ತಾರನಗರ ಜಲಾಶಯ, ಬಳ್ಳಾರಿ