Friday, December 10, 2010

ಮೊಬೈಲ್ ರಾಯ.. ನಿನಗೆ ವಿದಾಯ!"BREAKING" NEWS
--------------------------------------------------------------------------------------------

ಮೇರು ಪ್ರತಿಭೆಯ, ನಮ್ಮ-ನಿಮ್ಮೆಲ್ಲರ ನೆಚ್ಚಿನ ಯುವ ಛಾಯಾಚಿತ್ರಗಾರ - ಮೊಬೈಲ್ ರಾಯ (N73) ಇನ್ನಿಲ್ಲ !!
---------------------------------------------------------------------------------------------
ನವೆಂಬರ್ 25 ನೇ ತಾರೀಖು, ಬೆಲಂದೂರ್ ರಿಂಗ್ ರಸ್ತೆಯಲ್ಲಿ ಸಂಜೆ ಸುಮಾರು ಏಳು ಗಂಟೆಗೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವ ಛಾಯಾಚಿತ್ರಗಾರ ಮೊಬೈಲ್ ರಾಯರು ನೆನ್ನೆ ದಿನ ತಮ್ಮ ಅಂತಿಮ Call ಮುಗಿಸಿ ಶಾಶ್ವತವಾಗಿ Switch Off ಆಗಿದ್ದಾರೆ! ಅವರಿಗೆ ಕೇವಲ 2 ವರ್ಷ 6 ತಿಂಗಳು ವಯಸ್ಸಾಗಿತ್ತು!
-------------------------------------------------------------------------------------------
ಅಪಘಾತದ ಸನ್ನಿವೇಶ:
ಇದೇ ಅಪಘಾತದಲ್ಲಿ ಇವರ ಜೊತೆಗಿದ್ದ "ಪ್ರೇಮ ಕವಿ" (ಅವರೊಬ್ಬ ಕವಿಯೇ? ಎಂಬುದು ಚರ್ಚೆಯಲ್ಲಿರುವ ವಿಷಯ ಎಂಬುದು ಬೇರೆ ಮಾತು!) ಪ್ರದೀಪ್ ರಾವ್‍ರವರು ಲಘುವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರೆ, ಜೊತೆಗಿದ್ದ Spot-Boy Kinetic Honda ಅವರು ನಡೆಯುವ, ಓಡುವ ಸ್ಥಿತಿಯಲ್ಲಿಲ್ಲದಿದ್ದರೂ ಪೋಲೀಸರು ಸಿಕ್ಕಿದ್ದೇ ಸೀರುಂಡ ಎಂದು ಹಣದಾಸೆಗೆ ಎಳೆದುಕೊಂಡು ಹೋಗಿದ್ದರು. ಮೂರು ಜನರು Director ಹಾಗು Producer ರವರನ್ನು ಕಂಡು ಹೊಸ ಸಿನಿಮಾ ಒಂದರ Call Sheet ಗೆ ಸಹಿ ಹಾಕಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.. ಸಿನಿಮಾಗೆ ಕೊಲ್ಕತ್ತಾಯಿಂದ ಬಿಂಕದ ಬೆಂಗಾಲಿ ನಾಯಕಿ "ಶುಭ್ರ"(Please Note: ಅವರ ಹೆಸರಿಗೂ Character ಗೂ ಯಾವುದೇ ಹೋಲಿಕೆಯ ತಪ್ಪು ಕಲ್ಪನೆ ಮಾಡದಿರಿ!) ಅವರನ್ನು ಕರೆತರಲಾಗಿತ್ತು. Meeting ಮುಗಿಸಿ ಹೊರಬಂದ ಅವರು ಹಳೇ ಗೆಳೆಯನೊಬ್ಬನನ್ನು ನೋಡಲು ಕಲಾಸಿಪಾಳ್ಯಗೆ Drop ಕೇಳಿದರು.. ಆಗ ಪಾಪ.. ಪ್ರದೀಪ್ ರವರು ತಮ್ಮ Route ಬೇರೆಯದಾದರೂ ಬೆಂಗಳೂರಿನಲ್ಲಿ ಒಂಟಿ ಬೆಂಗಾಲಿ ಹುಡುಗಿಯನ್ನು ಬಿಟ್ಟು ಹೋಗುವುದು ಥರವಲ್ಲವೆಂದು ಅವರಿಗೆ
drop ಕೊಡಲು ಒಪ್ಪಿಕೊಂದೆಬಿಟ್ಟರು! ಅಯ್ಯೋ ರಾಮ! ಹಿಂದೆ ಬೆಂಗಾಲಿ ಹುಡುಗಿ ಕೂತಿರಬೇಕಾದ್ರೆ ಮುಂದೆ ಬೆಂಗಳೂರ್ ಹುಡುಗಿ ಬಂದ್ರೆ ಕಾಣುತ್ತಾಳ? ನೀವೇ ಹೇಳಿ? ಅಷ್ಟೇ ಆಗಿದ್ದು.. ಮುಂದೆ ರಸ್ತೆ ದಾಟುತ್ತಿದ್ದ ಬೆಂಗಳೂರ್ ಹುಡುಗಿ ಪಾಪ ಕಾಲು ಮುರ್ಕೊಂಡಳು! ರಸ್ತೆಯಲ್ಲಿ ಅದೂ ಬೆಂಗಳೂರು ರಸ್ತೆಯಲ್ಲಿ ಹುಡುಗಿ ಬಿದ್ದರೆ ಜನರು ಸುಮ್ನಿರ್ತಾರ? ಅಪಘಾತ ನಡೆಯುತ್ತಿದ್ದಂತೆಯೇ ಸುತ್ತ ಮುತ್ತ ಇದ್ದ ಜನ ನಾ ಮುಂದೆ ತಾ ಮುಂದೆ ಎಂದು Super Hero ಗಳಂತೆ ಓಡಿಬಂದರು.. ಹೊಸ ಸಿನಿಮಾ Shooting ಶುರು ಆಗುವುದಕ್ಕೆ ಮುಂಚೆಯೇ Climax Fighting ಹೇಗಿರಬೇಕು ಅಂತ ಪ್ರದೀಪ್ರವರಿಗೆ Rehersal ತೋರಿಸಿಹೊದರೆಂದು ಪ್ರತ್ಯಕ್ಷದರ್ಶಿತಿಳಿಸಿದ್ದಾರೆ! ನಂತರ ಪ್ರದೀಪ್ರವರು ಹೇಗೋ ಸಂಭಾಳಿಸಿಕೊಂಡು ಎದ್ದು NIMHANS ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದರು.. (ಅವರು ಆ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳುವುದು ಒಳ್ಳೆಯದು ಎಂದು ಹಲವರು ಬಹಳ ದಿನಗಳಿಂದ ಸಲಹೆ ಕೊಡುತಿದ್ದರು ಎಂದು ಮೂಲಗಳು ತಿಳಿಸಿವೆ!)
ಆಸ್ಪತ್ರೆಯಲ್ಲಿ ವೈದ್ಯರು ಕೇಳಿದರಂತೆ - "ಅಪಘಾತವಾದಾಗ ಪ್ರಜ್ಞೆ ತಪ್ಪಿದ್ದಿರ?"
"ಇನ್ನು ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ತಪ್ಪುವುದರಲ್ಲಿತ್ತು ಅಷ್ಟರಲ್ಲಿ ಅಪಘಾತವಾಗಿ ಹೋಯ್ತು!"
---------------------------------------------------------------------------------------------

N73 - 3.2 Megapixel Camera - ಸಾಧನೆಎರಡು ವರ್ಷಗಳಿಂದ ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ತೆಗೆದು ಎಲ್ಲರ ಮನ ತಣಿಸಿದ್ದ ಮೊಬೈಲ್ ರಾಯ ಇಂದು ಶಾಶ್ವತವಾಗಿ ತನ್ನ Shutter Close ಮಾಡಿಕೊಂಡಿದ್ದಾನೆ ಇನ್ನು "ACTION" ಎಂಬಾ ಕೂಗಿಗೆ ಆಟ ಪ್ರತಿಕ್ರಯಿಸಲಾರ! ಆತ ತೆಗೆದ ಚಿತ್ರಗಳು "ಪ್ರೇಮ ಕವಿಯ ಪಯಣ" ದಲ್ಲಿ ಪ್ರದರ್ಶಿತಗೊಂಡು ಜನರಲ್ಲಿ ರೋಮಾಂಚನ ಮೂಡಿಸಿತ್ತು. ನಂಜನಗೂಡಿನಿಂದ ಶುರುವಾಗಿದ್ದ ಪ್ರೇಮಕವಿಯ ಜೊತೆಗಿನ ಈತನ ಪಯಣ ಇಂದು ಕೊನೆಗೊಂಡಿದೆ.. ಲಾಲ್ ಬಾಗ್ ನ Flower Show, ಬೆಂಗಳೂರಿನ ನಮ್ಮ ಮೆಟ್ರೋ, ಇತ್ಯಾದಿ ಅದ್ಭುತ ಚಿತ್ರಗಳ ತೆಗೆದಿದ್ದ ಈತ ಕೇವಲ 3 ತಿಂಗಳ ಹಿಂದಷ್ಟೇ ನಿಮ್ಮೆಲರಿಗೆ ಬೆಂಗಳೂರಿನ 101 ಗಣಪತಿಗಳ ದರ್ಶನ ಮಾಡಿಸಿದ್ದ. ಕವಿ, ಕಾವ್ಯ, ಜನಪದ ಹಾಗು ಸಾಹಿತ್ಯ ಕಾರ್ಯಕ್ರಮಗಳೆಂದರೆ ಈತನಿಗೆ ಬಹಳ ಆಸಕ್ತಿಯ ವಿಷಯಗಳಾಗಿದ್ದವು. ಸಾಂಸ್ಕೃತಿಕ, ಪುರಾಣಿಕ, ಐತಿಹಾಸಿಕ ಸ್ಥಳಗಳ ಭೇಟಿ ಹಾಗು ಅವುಗಳ ಚಿತ್ರೀಕರಣ ನೆಚ್ಚಿನ ಹವ್ಯಾಸ. ಇನ್ನೇನು ಹೋಗುವ ಸಮಯ ಹತ್ತಿರ ಬಂದಿದ್ದಾಗಲು ಕೊನೆಯ Battery Charge ಗಟ್ಟಿ ಹಿಡಿದು ಮೊನ್ನೆ ನಡೆದ 3K - ಕವಿ ಕೂಟದ ಸಂಭ್ರಮದಲ್ಲಿ ಭಾಗವಹಿಸಿ, ಅಲ್ಲಿ ಬಂದಿದ್ದವರೆಲ್ಲರನ್ನು ಕಂಡು ತನ್ನ ಕಣ್ಣು ತುಂಬಿಕೊಂಡಿತು. ಆ ತುಂಬಿಕೊಂಡ ಮಂಜು ಮಂಜಿನ ಕಣ್ಣುಗಳಲ್ಲಿ ಒಂದು ಚಿತ್ರ ತೆಗೆದುಕೊಟ್ಟನು. ಅದೇ ಈ ಮೊಬೈಲ್ ರಾಯನ ಕೊನೆಯ ಚಿತ್ರವಾಗಿತ್ತು!
ಇದೆ ಆ ಕೊನೆಯ ಚಿತ್ರ


-------------------------------------------------------------------------------------------------
ಅಂತ್ಯಸಂಸ್ಕಾರ (ಸ್ಥಳ: National Market, ಸಮಯ: ಭಾನುವಾರ, ಬೆಳೆಗ್ಗೆ 11 ಗಂಟೆಗೆ)


ಮೊಬೈಲ್ ರಾಯನ ಪಾರ್ಥಿವ Panel ಅನ್ನು ಸ್ನೇಹಿತರಾದ ಸ್ವರೂಪ್ ಹಾಗು ಮಂಜು ರವರು ಕಂಡು ಅಂತಿಮ ನಮನಗಳನ್ನು ಸಲ್ಲಿಸಿದರು. ಇದೇ ಭಾನುವಾರದ ದಿನ ಬೆಳೆಗ್ಗೆ 11 ಗಂಟೆಗೆ Second hand goods ಗೆ famous ಆಗಿರುವ National Market ನಲ್ಲಿ ಮೊಬೈಲ್ ರಾಯನಿಗೆ ಅಂತ್ಯ ಸಂಸ್ಕಾರಗಳನ್ನು ಪೂರೈಸಲಾಗುವುದು. ಅಪಘಾತವಾದ ಮರುದಿನವೇ ಅವರು ತಮ್ಮ Will ಬರೆದಿಟ್ಟಿದ್ದಾರೆ.. ಅವರ ಇಚ್ಛೆಯಂತೆ ಅವರ SIM card ಅವರ ಉತ್ತರಾಧಿಕಾರಿಗೆ ದೊರಕುವುದು.. ಅದರಲ್ಲಿರುವ currency ಹಾಗು Contacts ಕೂಡ ಉತ್ತರಾಧಿಕಾರಿಯ ಸ್ವತ್ತು. ಮಿಕ್ಕಂತೆ ಕಣ್ಣು, ಕಿವಿ, ಕಿಡ್ನಿ ಎಲ್ಲ heavy damage ಆಗಿರೋದ್ರಿಂದ ಯಾರು ಅವಕ್ಕೆ ಕೈ ಹಾಕೋ ಹಾಗಿಲ್ಲ ..


........
....


ಇನ್ನು ಏನ್ ತಿಥಿ ವಡೆ ಸಿಗುತ್ತೇನೋ ಅಂತ ನೋಡ್ತಾ ಇದ್ದೀರಾ..??!!

ಅಷ್ಟೆಲ್ಲ Scene ಇಲ್ಲ..

Party ಬೇಕಿದ್ರೆ ಬನ್ನಿ..

ಮೊಬೈಲ್ ರಾಯನ ಸಿಂಹಾಸನದ ಉತ್ತರಾಧಿಕಾರಿಯಾಗಿ ಆಯ್ಕೆಯಾದವರಿಗೆ..

***** ಪಟ್ಟಾಭಿಷೇಕ ಸಮಾರಂಭ *****


C O M I N G S O O N ...


------------------------------------------------------------------------------------------------

ಲೇಖನದಲ್ಲಿರುವ ಪಾತ್ರಗಳು ಹಾಗು ಸನ್ನಿವೇಶಗಳು ಕೇವಲ ಕಾಲ್ಪನಿಕ. ವಾಸ್ತವಕ್ಕೆ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕಾಕತಾಳೀಯವಷ್ಟೆ. ಅಪಘಾತದಲ್ಲಿ N73 ಒಡೆದು ಹೋಗಿದ್ದಷ್ಟೆ ಕಠೋರ ಕಹಿ ಸತ್ಯ!

5 comments:

 1. ಅದ್ಭುತ ಚಿತ್ರಗಳನ್ನು ನೀಡಿ ಕಣ್ಣು ಮುಚ್ಚಿದ ಗೆಳೆಯ N73 ಯ ಅ೦ತಿಮ ಕ್ಷಣಗಳ ವಿವರಗಳನ್ನೊಳಗೊ೦ಡ ಅ೦ದದ ಲೇಖನವನ್ನು ಮನೆ ಮ೦ದಿಯೆಲ್ಲಾ ಒಟ್ಟಾಗಿ ಆನ೦ದಿಸಿದೆವು. ಚಮತ್ಕಾರಿಕ ಶೈಲಿ! ಧನ್ಯವಾದಗಳು. N73 ಆತ್ಮಕ್ಕೆ ಶಾ೦ತಿ ಸಿಗಲೆ೦ದು ಕೋರುತ್ತೇವೆ! ನನ್ನ ಬ್ಲಾಗ್ ಗೊಮ್ಮೆ ಬನ್ನಿ.

  ReplyDelete
 2. @ Prabhamaniyavre.. dhanyavaadagalu.. khandita aadashtu bega samaya madikondu.. nimma blog oduve..

  @Thanks Vanishri

  ReplyDelete
 3. super kano.... sakkat funny aagide .... ashte alu kooda bartaa ide ... onthara different feelingu!!!!!!!

  ReplyDelete
 4. Thanks Manju.. time madkondu blog ge bandidakke.. Alu yaake guru.. naan moogu murkondu, gaadi kediskondu, mobile odedu haakondu kooda inta funny description kottidini accident bagge.. nagu naguta nali nali maga..

  ReplyDelete