Wednesday, December 22, 2010

ಪ್ರೇಮ ಕವಿಯ ಪಯಣಕೆ 1 ವರ್ಷ!



23rd December 2010ಗೆ ನನ್ನ ಈ ಬ್ಲಾಗ್ ಅವತರಿಸಿ ಒಂದು ವರ್ಷವಾಯಿತು. ಒಂದು ವರ್ಷದಿಂದ ನನ್ನ ಬ್ಲಾಗ್‍ಗೆ ಬಂದು ನಾನು ಗೀಚಿದ ಕಥೆ-ಕವನಗಳನ್ನು ಓದಿ, ಕೆಲವು ಬಾರಿ ಕಾಮೆಂಟುಗಳನ್ನು ಹಾಕಿ ನನ್ನನು ಪ್ರೋತ್ಸಾಹಿಸಿದಕ್ಕೆ ಅನಂತ ಅನಂತ ಧನ್ಯವಾದಗಳು. ನಿಮ್ಮೆಲ್ಲರಿಗೆ ನಾನು ಚಿರರುಣಿ. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನ, ಪ್ರೋತ್ಸಾಹಗಳು ಈ ಪೇಮ ಕವಿಯ ಪಯಣಕ್ಕೆ ಹೀಗೆ ವರ್ಷಾನುವರ್ಷ ದೊರೆಯುತ್ತಿರಲಿ ಇಂದು ಆಶಿಸುವೆ.

Flashback...

ಒಂದು ವರ್ಷದ ಹಿಂದೆ..

ಎಲ್ಲಿಗೀ ಪಯಣ..
ಯಾವುದೋ ದಾರಿ..
ಏಕಾಂಗಿ ಸಂಚಾರಿ...

ಎಂಬ ರಾಜ್‍ಕುಮಾರ್ ಹಾಡು ಟಿವಿಯಲ್ಲಿ ನೋಡುತಿದ್ದ ನಾನು ಬ್ಲಾಗ್‍ಗೆ ಯಾವ ಹೆಸರಿಡಬೇಕು ಎಂಬಾ ಯೋಚನೆಯಲ್ಲಿದ್ದೆ.. ಸ್ನೇಹಿತರೆಲ್ಲರೂ ಮೊದಲಿಂದಲೂ ನನ್ನ ಪ್ರೇಮಕವಿ ಎಂದು ಕರೆಯುತ್ತಿದ್ದರು.. ಕನ್ನಡದಲ್ಲಿ ಪ್ರೇಮಕವಿಯೆಂದು ಹೆಸರು ಪಡೆದವರು ಕೆ.ಎಸ್.ನರಸಿಂಹ ಸ್ವಾಮಿಯವರು. ಅವರ ಕ್ಷಮೆಯೊಂದಿಗೆ ಅವರ ಬಿರುದನ್ನು ಕದ್ದು ನಾನು "ಪ್ರೇಮಕವಿಯ ಪಯಣ" ಎಂದು ನಾಮಕರಣ ಮಾಡಿದೆ..

ಒಂದು ವರ್ಷದ ಹಿಂದೆ ಈ ಪಯಣ ಶುರುವಾಗಿದ್ದು ನಂಜನಗೂಡಿನ ಶ್ರೀಕಂಠೇಶ್ವರ ದೇವಲಯದಿಂದ. ಆ ದೇವಾಲಯದ ಬಗ್ಗೆ ಬರೆದಿದ್ದೆ ಈ ಬ್ಲಾಗಿನ ಮೊದಲ ಲೇಖನ. ಶ್ರೀಕಂಠೇಶ್ವರನ ಆಶೀರ್ವಾದದೊಂದಿಗೆ ಶುರುವಾದ ಈ ಪಯಣ ಇಂದು ಯಶಸ್ವಿಯಾಗಿ ಸಾಗಿದೆ. ಈ ಪಯಣಕ್ಕೆ ಹಲವು ಕವಿಗೆಳೆಯರು ಜೊತೆಯಾದರು. ಹಲವು ಸ್ಮರಣಾರ್ಹ ಸಂದರ್ಭಗಳು ಬಂದವು. ಪಯಣ ಅಂದ ಮೇಲೆ ಹಲವು ಜನರು ಬರುತ್ತಿರುತ್ತಾರೆ. ಹೋಗುತ್ತಿರುತ್ತಾರೆ.. ಬರುವವರಿಗೆ ನಾನು ಎಂದೂ ಕೈ ಬೀಸಿ ಕರೆಯುವೆ.. ಹೋಗಲೇಬೇಕೆನ್ನುವವರನ್ನು ನಾನು ತಡೆಯಲಾರೆ.. ಈ ಪಯಣ ಶುರು ಮಾಡಲು ಸ್ಪೂರ್ತಿ ನೀಡಿದವರು ಏಕೋ ದೂರವಾಗಿದ್ದಾರೆ.. ಇಂದು ಅವರಿಗೂ ಧನ್ಯವಾದಗಳನ್ನು ತಿಳಿಸುವೆ. ನಾನು ಬ್ಲಾಗ್‍ಗೆ ಏನೇ ಗೀಚಿ ಹಾಕಿದರೂ ತಮ್ಮ ಅಮೂಲ್ಯ ಸಮಯದಲ್ಲಿ ಅದನ್ನು ಓದಿ ಅಭಿಪ್ರಾಯ ತಿಳಿಸುವ ಸತ್ಯ, ಸೀತಾರಾಮ್, ಅಶೋಕ್, ದಿನಕರ್, ಪ್ರಭಾಮಣಿ, ಸೌರಭ, ಮಂಜುನಾಥ್ ಮತ್ತು ಉಳಿದವರೆಲ್ಲರಿಗೂ ತುಂಬಾ ಧನ್ಯವಾದಗಳು.

ಈ ಪಯಣ ಇಂದು ಸಾಗುತಿದೆ ಯಶಸ್ವಿಯಾಗಿ...

ಸಾಗುತಿದೆ.. ಪಯಣ.. ಪ್ರೀತಿಯ ಕಡೆಗೆ.. ಸ್ನೇಹದ ಕಡೆಗೆ.. ಙ್ನಾನದ ಕಡೆಗೆ..

ಸಾಗುತಿರಲಿ ಈ ಪಯಣ ಎಂದೆಂದೂ.. ನಿಮ್ಮೊಡನೆ..

15 comments:

  1. ಪ್ರದೀಪ್ ರವರೆ ,
    ಬ್ಲಾಗ್ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮ ಬ್ಲಾಗ್ ನ ಸ೦ತಸ ಪಯಣ ಹೀಗೇ ನಿರ೦ತರವಾಗಿ ಸಾಗಲಿ. ನಮ್ಮೆಲ್ಲರಿಗೂ ನಿಮ್ಮ ಸೃಜನಶೀಲತೆಯ, ಉತ್ಸಾಹದ ಔತಣ ನೀಡುತ್ತಿರಲಿ. ಅಭಿನ೦ದನೆಗಳು.

    ReplyDelete
  2. ಪ್ರೆಮಕವಿಗಳೇ,,,,ಅಭಿನಂದನೆಗಳು....ಈ ನಿಮ್ಮ ಯಶಸ್ಸಿಗೆ....

    ಸಾಗುತ್ತಿರಲಿ ಗೆಳೆಯ ನಿನ್ನಿ ಪಯಣ..
    ಪ್ರೇಮದ ಅಲೆಯ ಮೇಲೆ ...
    ಸ್ನೇಹ ಪ್ರೀತಿ ಜ್ನಾನದೆಡೆಗೆ .....

    ಮೂಡುತ್ತಿರಲಿ ಕವನಗಳು
    ಪುಟಿಯುತ್ತಿರುವ ಕಾರಂಜಿಯಂತೆ
    ಮನಸು, ಕನಸುಗಳ ಭಾವದೆಡೆಗೆ ...

    ಹಂಬಲಿಸುತ್ತಿವೆ ಈ ನಿನ್ನ ಅಭಿಮಾನಿ ಗೆಳೆಯರ ಹೃದಯಗಳು....
    ಹರಿಸುತ್ತಿರು ಕಾವ್ಯಧಾರೆ......ತಣಿಸಲು ಹಂಬಲಿಸುತ್ತಿರುವ ಹೃದಯಗಳ..
    ಉಲ್ಲಾಸದ ಬೆಳಕಿನೆಡೆಗೆ

    ಇಂತಿ ನಿನ್ನ ಪ್ರೀತಿಯ ಅಭಿಮಾನಿ ಗೆಳೆಯ...
    ಸತ್ಯ ಸಿಂಪ್ಲಿ.....ಸ್ಟುಪಿಡ್...

    ReplyDelete
  3. ಪ್ರದೀಪ್ ಪ್ರೇಮಕವಿಗೆ...
    ವರ್ಷ ತುಂಬಿದ ಸಂದರ್ಭದಲ್ಲಿ ಶುಭ ಹಾರೈಕೆ...

    ReplyDelete
  4. all the best wishes for your journey...wil always be with u in your journey :)

    ReplyDelete
  5. pradeep prema kavigali vaarshikotsavada shubhaashayagalu.mattu shubhahaaraikegalu. yashasviyaagi munduvareyali nimma payana.abhinandanegalu

    ReplyDelete
  6. ಪ್ರಭಾಮಣಿಯವರೆ ತುಂಬಾ ಧನ್ಯವಾದಗಳುಗಳು. ನಿಮ್ಮ ಪ್ರೋತ್ಸಾಹ ಕೂಡ ಹೀಗೆ ನಿರಂತರವಾಗಿ ದೊರೆಯುತ್ತಿರಲಿ ಎಂದು ಆಶಿಸುವೆ.

    ReplyDelete
  7. ಸತ್ಯ ನಿಮ್ಮ ಅಭಿಮಾನಕ್ಕೆ ಅನಂತ ಅನಂತ ಧನ್ಯವಾದಗಳು. ಬಹಳ ಇಷ್ಟವಾಯಿತು ನಿಮ್ಮ ಕವನ. ಈ ಪಯಣ ಯಶಸ್ವಿಯಾಗುವಲ್ಲಿ ನಿಮ್ಮ ಇಂಥ ಎಷ್ಟೋ ಮನ ಸೆಳೆಯುವಂಥ ಕಾಮೆಂಟುಗಳ ಪ್ರಭಾವವಿದೆ..ಹಂಬಲಿಸುತ್ತಿರುವ ಹೃದಯಗಳ. ತಣಿಸಲು ನಾನು ಸದಾ ಕಾಲ ಕಾವ್ಯಗಳೊಂದಿಗೆ ಬರುತ್ತಿರುವೆ. ನೀವುಗಳು ಸಹ ಇಲ್ಲಿಗೆ ಆಗಾಗ ಬರುತ್ತಿರಿ. ಮತ್ತೊಮ್ಮೆ ಧನ್ಯವಾದಗಳು.

    ReplyDelete
  8. ಜಲನಯನರವರೆ ನನ್ನ ಬ್ಲಾಗ್‍ಗೆ ಸುಸ್ವಾಗತ. ತುಂಬಾ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  9. ಕಾವ್ಯಸುಗಂಧರವರೆ ತುಂಬಾ ಧನ್ಯವಾದಗಳು.

    ReplyDelete
  10. Swaroop thanks for visiting my blog for the first time after an year! better late than never. keep visiting ..:)

    ReplyDelete
  11. ಕಲರವರವರೆ ನನ್ನ ಬ್ಲಾಗ್‍ಗೆ ಸುಸ್ವಾಗತ. ತುಂಬಾ ಧನ್ಯವಾದಗಳು. ಆಗಾಗ ಬರುತ್ತಿರಿ..

    ReplyDelete
  12. ನನ್ನ ಬ್ಲಾಗ್‍ಗೆ ಸುಸ್ವಾಗತ ವಸಂತ್.. ನಿಮ್ಮ ಹಾರೈಕೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ.

    ReplyDelete