Re-posting my old poem on friend's demand. This was the poem most liked by my friends.
ಕವನದ ಸನ್ನಿವೇಶ: ಒಂದು ಹುಡುಗಿಯು ತನ್ನಲ್ಲಿ ತೋರುತ್ತಿರುವ ಸ್ನೇಹವು ಪ್ರೇಮವಿರಬಹುದೆ ಎಂದು ಹುಡುಗನಿಗೆ ಸಂದೇಹ ಆಗುತ್ತದೆ. ಅದು ನಿಜವೊ ಇಲ್ಲ ಪ್ರೇಮದ ನಿರೀಕ್ಷೆಯಲ್ಲಿರುವ ತನ್ನ ಮನಸ್ಸಿನ ಭ್ರಮೆಯೋ ತಿಳಿಯದೆ ಗೊಂದಲ ಪಡುತ್ತಾನೆ. ಮನಸ್ಸಿಗೆ ಬುದ್ಧಿ ಹೇಳುತ್ತಾನೆ.
ಕರಗದಿರು ಮನವೇ, ಅವಳ ಸುಮಧುರ ಸ್ನೇಹಕ್ಕೆ,
ಕರಗಿ ಎರಡು ಬಗೆಯದಿರು, ಸ್ನೇಹದ ಧ್ಯೇಯಕ್ಕೆ,
ಅವಳು ಆಡುವ ಮಾತು, ಅವಳು ನೀಡುವ ಸಲಿಗೆ,
ಚೂರು ಹೆಚ್ಚೆನಿಸಬಹುದು ನಿನ್ನ ಯೋಗ್ಯತೆಯ ಬೆಲೆಗೆ
ಕೆಡವದಿರು ಈ ಮುಗ್ಧೆಯ, ನಿನ್ನ ಪ್ರೇಮದ ಬಲೆಗೆ,
ಹೊಗಳಬೇಕೋ ತೆಗಳಬೇಕೋ ನಾ ಕಾಣೆ
ನಿನ್ನ ಕಲ್ಪನೆಯ ಕಲೆಗೆ.
ನಿನ್ನ ಮನದ ಮಹದಾಸೆಯ ಅವಳರಿತ ಘಳಿಗೆ,
ಸಿಡಿಯಬಹುದು ಅವಳ ಹೃದಯ,
ಹೋಗಿಬಿಡಬಹುದು ತೂರಿ ನಿನ್ನ ಸ್ನೇಹವ ಗಾಳಿಗೆ
ಮರಳಿ ಬಾರದಿರಬಹುದು ಎಂದೂ ನಿನ್ನ ಬಳಿಗೆ

ಹಿಡಿದಿರಬಹುದು ಆಕೆ ಎಂದೋ ಜೊತೆ ನಡೆವಾಗ
ನಡುವೆ ಆಯ ತಪ್ಪಿ ನಿನ್ನ ಕೈಯ,
ಹಿಡಿದ ಕೈಯ ಹಿಡಿದೆ ಇರಲಿ
ಎಂಬ ನಿನ್ನ ಆಸೆಯು ಸರಿಯಾ?
ಮಾಡಿರಬಹುದು ನೀ ಅವಳಿಗೆ
ಮೆಚ್ಚಬೇಕಾದಂತಹ ಸಹಾಯ
ಅದರ ಪ್ರತಿಯಾಗಿ ಒಲವ
ಅಪೇಕ್ಷಿಸುವುದು ಸರಿಯಾ?
ಆದ ಆಕಸ್ಮಿಕಗಳ ಭಾವಿಸದಿರು
ಅದೆಂದು ಅವಳ ಅಭಿನಯ
ನೀ ಮಾಡುವ ತುಂಟಾಟಕೆ ರೇಗದೆ
ನಕ್ಕು, ತಲೆಯ ತಗ್ಗಿಸಿ ಹೋದರೆ
ತಿಳಿ ಅದುವೆ ಅವಳ ವಿನಯ
ಆಗುವ ಬಯಕೆ ಏಕೆ ಮನವೇ
ಇಷ್ಟು ಆತುರದಿ ಅವಳ ಇನಿಯ?
ನಿನ್ನ ಊಹೆ ಸುಳ್ಳಾದರೆ, ಮತ್ತೆ
ನೀನಾಗುವುದಿಲ್ಲ ಅವಳ ಗೆಳೆಯ.
ತುಂಬಾ ಒಳ್ಳೆಯ ಕವನ...ಈ ಸನ್ನಿವೇಶ ತುಂಬಾ ಜನರ ಜೀವನದಲ್ಲಿ ಬಂದು ಅವರ ಸ್ನೇಹ ಸತ್ತುಹೋಗಿರಬಹುದು...ಸ್ನೇಹದಲ್ಲಿ ಪ್ರೇಮವ ಹುಡುಕುವವರೆಲ್ಲಾ ಈ ರೀತಿ ಯೋಚಿಸಿದರೆ ಎಸ್ಟೋ ಸ್ನೇಹ ಸಾಯದೆ ಚಿರಕಾಲ ನಗುವುದು ಖಂಡಿತ...
ReplyDeleteThanks "Naa geechida Kavana"... tumba satyada maatu..
ReplyDeleteತುಂಬಾ ಮಧುರವಾಗಿ ಸ್ನೇಹ -ಪ್ರೀತಿ ಸುತ್ತ ಸನ್ನಿವೇಶದಲ್ಲಿ ಮನದ ಗೊಂದಲಕ್ಕೆ ಸಮಾಧಾನದ ಮಾತನ್ನು ಚೆನ್ನಾಗಿ ಹೇಳಿದ್ದಿರಾ... ಆದರೆ ಅವಳು ಪ್ರೆಮಿಸುತ್ತಿದ್ದು ಅವನಿಂದ ಮೊದಲು ಬರಲಿ ಎಂಬ ನೀರಿಕ್ಷೆಯಲ್ಲಿದ್ದರೆ....
ReplyDeleteNice poem
ಹಾಯ್ ಪ್ರದೀಪ್....
ReplyDeleteನಿಮ್ಮ ಕವನ ಓದಿ ತುಂಬಾ ಕುಶಿ ಆಯಿತು...ಭಾವನಾತ್ಮಕವಾಗಿದೆ...ಧನ್ಯವಾದಗಳು...
@ Sitaram thanks.. ಆ ಸಂದರ್ಭಕ್ಕೆ ಬೇರೊಂದು ಕವಿತೆ ಬರಿದರೆ ಆಯಿತು ಅಷ್ಟೆ!
ReplyDelete@Ashok... tumba dhanyavaadagalu
ReplyDeleteawesome poem :)
ReplyDeletepradeep kavana tumba chennagide.... bhavanegala suliyali siliku, gondalagidaguva yuva manaskaralli mooduva bhavaneya kavana tumba chennagide.
ReplyDelete