Monday, February 15, 2010

ಕಣ್ಣಾಮುಚ್ಚೇ ಕಾಡೇಗೂಡೇ..
ಕವನದ ಸನ್ನಿವೇಷ: ಬಾಲ್ಯದಲ್ಲಿ ಜೊತೆಯಲ್ಲೆ ಆಡಿ ಬೆಳೆದ ಗೆಳತಿಯ ಮೇಲೆ ಪ್ರೀತಿಯು ಮೂಡಿ ಬಂದಾಗ...
ಕಣ್ಣಾಮುಚ್ಚೇ ಕಾಡೇಗೂಡೇ...
ಎಂದು ಹಾಡಿದ್ದೆ ನನ್ನ ಕಣ್ಮುಚ್ಚಿ ನೀನಂದು
ಕಣ್ಣ ಮುಚ್ಚಿದೊಡನೆ ಕಾಡಿಬಿಡುವೆ
ಕನಸಾಗಿ ನನ್ನ ನೀನಿಂದು.

ಇಪ್ಪತ್ತು ವರ್ಷ ಹೆಚ್ಚಾದರೂ ವಯಸ್ಸು
ನಿನ್ನನ್ನೆಂದೂ ಮರೆಯಲಿಲ್ಲ ಮನಸು
ಸೇರಲು ನಿನ್ನ ಬಂದಿರುವೆ ವಾಪಸ್ಸುಅಂದು ಮರಳಲ್ಲಿ ಕಟ್ಟಿದ್ದೆವು
ನಾವೊಂದು ಪುಟ್ಟ ಮನೆ
ಇಂದು ನನ್ನ ಮನಸಲ್ಲೆ ಕಟ್ಟಿರುವೆ
ನೀ ಸಾವಿರ ಕನಸುಗಳ ಅರಮನೆ

ಅಂದು ಛಾವಣಿಯ ಮೇಲೆ ಕುಳಿತು
ನಾವು ಆಡಿದ್ದ ಬೆಳುದಿಂಗಳು
ಇಂದು ಚಂದ್ರನನ್ನೆ ಕದ್ದೊಯ್ದ ನಿನ್ನ
ಹುಡುಕುತಿದೆ ಕತ್ತಲಲಿ ಕಂಗಳು

ಅಂದು ನೀ ಕಳೆದುಹೋಗದಿರಲೆಂದು
ಕೈ ಹಿಡಿದು ತೋರಿದ್ದೆ ಸಂತೆ
ಇಂದು ನನ್ನ ಕಾಡುತಿದೆ, ಬಾಳ ಸಂತೆಯಲಿ
ನಿನ್ನ ಕಳೆದುಕೊಳ್ಳುವ ಚಿಂತೆ

ನೀ ಅತ್ತಾಗ ಕರೆದುಕೊಂಡು ಹೋದೆ
ನಿನಗೆ ತೋರಲು ಸಾಗರದ ತೀರ
ಅಪ್ಪ ಬೈಯ್ಯುವರೆಂದು ತಿಳಿದಿದ್ದರೂ ನಂತರ
ಆಸೆಯಿತ್ತು ಹೋಗಲು ನಿನ್ನೊಡನೆ ದೂರ
ನೀ ಹಠವ ಹಿಡಿದು ಕುಳಿತಾಗ
ಏರಿಸಿದ್ದೆ ನಿನ್ನ ಮಾವಿನ ಮರ
ಹಣ್ಣ ಕಿತ್ತು ಓಡಿದ್ದೆವು ಕಳ್ಳರ ಥರ
ಆಹಾ! ಆ ನೆನಪುಗಳು ಎಷ್ಟು ಮಧುರ!

ನಿನ್ನ ಮನದಲ್ಲಿ ನೀನಿನ್ನು ಪುಟ್ಟ ಬಾಲೆ
ಹೊತ್ತಿಸಿ ನನ್ನಲ್ಲಿ ಪ್ರೀತಿಯ ಜ್ವಾಲೆ
ಆಡುತಿರುವೆ ಮತ್ತೆ ಕಣ್ಣಾಮುಚ್ಚಾಲೆ
ತೂಗುವುದ ನಿಲ್ಲಿಸು ಹೌದು-ಇಲ್ಲಗಳ ನಡುವೆ
ನನ್ನ ಮನಸ್ಸಿನ ಉಯ್ಯಾಲೆ!


----------------------------------------------

'ಯಜಮಾನ' ಚಿತ್ರದ ಸುಂದರ ಗೀತೆ....


ಕಣ್ಣಾಮುಚ್ಚೇ ಕಾಡೇಗೂಡೇ..

Saturday, February 13, 2010

HAPPY VALENTINE'S DAY


ಬಂದಿರಲು ಮತ್ತೊಮ್ಮೆ ಪ್ರೇಮಿಗಳ ದಿನ
ಮಿಡಿದಿದೆ ಈ ಪ್ರೇಮಕವಿಯ ಮನ
ಬರೆಯಲು ಕುಳಿತರೆ ಪ್ರೇಮ ಕವಿತೆ
ಕಾಡಿತು ಶ್ರೀ ರಾಮ ಸೇನೆಯವರ ಚಿಂತೆ
ಹೇಳಲು ಬಯಸುವೆ ನಾನೊಂದು ಮಾತೆ
ಹೆದರದಿರಿ ಪ್ರೇಮಿಗಳೇ ನೀವು ನನ್ನಂತೆ
ನಿಜ ಪ್ರೇಮವೆಂಬುದು ಮುಗ್ದ, ಪವಿತ್ರವಂತೆ
ನಿಮ್ಮ ನಡುವಳಿಕೆಯೂ ಇರಲಿ ಅದರಂತೆ


***** ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು *****Send a picture Scrap - 123orkut
Thursday, February 11, 2010

I Never Mind

I NEVER MIND
=============================
You closed up all the roads
which I struggled to find
You know what?
I never did mind
You locked up all the doors
and escaped from behind
You know what ?
I never did mind.
You washed out all the colours
of dreams I had in mind
You know what?
I prayed to you,
Oh Lord! Instead, you could
have simply made me blind!
Monday, February 8, 2010

ನನ್ನವಳು ನವಿಲು


ನನ್ನವಳು ನವಿಲು


ಒಪ್ಪಲು ಆಗದು ನಾ ಯಾರನ್ನೂ
ಭೂಮಿಗೆ ನನಗಾಗಿಯೆಂದೆ ಬಂದ
ನನ್ನವಳ ಹೊರತು,
ಕೇಳಿದನು ಅವನು "ಗೆಳೆಯಾ...
ಆದರೆ ಹಿಡಿಯುವೆ ಹೇಗೆ ನೀನು
ಅವಳು ಎದುರು ಬಂದಾಗ ಗುರುತು?

ನೋಡಿಲ್ಲವೆ... ಕೇಳಿಲ್ಲವೆ.. ನೀನು
ದೂರದ ದಿಗಂತದಲ್ಲೆಲ್ಲೋ
ಕಾರ್ಮೋಡವ ಕಂಡೊಡನೆ
ಜಿಗಿ ಜಿಗಿದು ಒಂಟಿಗಾಲಲಿ ನಿಂತು
ಕುಣಿವುದು ನವಿಲು....

ಅಂತೆಯೇ ನಲಿವಳು ಮುಗುಳ್ನಗುವಳು
ನನ್ನ ಕಂಡೊಡನೆ ನನ್ನವಳು!

ಪ್ರೇಮದ ದೋಣಿಪ್ರೇಮದ ದೋಣಿ

ಮಧುರ ಮನಗಳ ನದಿಯ ಮೇಲೆ
ಸಾಗುವ ನನ್ನ ಪ್ರೇಮದ ದೋಣಿಗೆ
ಆಗಿಲ್ಲ ಏಕೋ ಇಂದು ಇನ್ನೂ ಬೋಣಿಗೆ

ಆಗುತ್ತಾ ಬಂದರೂ ಸಂಜೆ
ಮಧುರ ಮನಗಳ ನದಿಯ ಮೇಲೆ
ಮುಸುಕಿಹುದು ಅಂಜಿಕೆಯ ಮಂಜೆ

ಈ ದೊಣಿಯೇ ನಾವಿಕನ ಆಸ್ತಿ
ಪ್ರೀತಿಯೇ ಇಲ್ಲಿ ಪ್ರಯಾಣ ದರ
ಬೇಡೆನು ಏನೂ ಅದಕ್ಕಿಂತ ಜಾಸ್ತಿ
ಚೂರು ಕೊಟ್ಟರೂ ನನಗದೇ ಮಧುರ

ತೇಲುತಿದೆ ಕಾಯುತಿದೆ ನಿನಗಾಗಿ
ಈ ನನ್ನ ಪ್ರೇಮದ ದೋಣಿ
ಬಾ, ಬಂದು ಪಯಣಿಸು ಒಮ್ಮೆ
ಓ ನನ್ನ ಕನಸಿನ ರಾಣಿ.


Friday, February 5, 2010

ಸೂರ್ಯಕಾಂತಿ
ಸೂರ್ಯಕಾಂತಿ

ಅವಳ ಹೊಳೆಯುವ ಕಂಗಳ ಕಾಂತಿಗೆ
ಮಿಡಿದು ಈ ಹೃದಯವಾಯಿತು
ಸೂರ್ಯಕಾಂತಿ....

ಈಗ ಕಾಯುವೆ ದಿನವೂ ಅವಳ ಬರುವಿಗೆ
ಬಂದು ಎದುರು ನಿಂತ ಅವಳ ನಗುವಿಗೆ
ಅವಳು ನಕ್ಕಾಗ, ಕಾಂತಿಯು ಸಿಕ್ಕಾಗ,
ಈ ಸೂರ್ಯಕಾಂತಿಯೂ ಅರಳುವುದು.

ಆಗ ಬೇಡವೆಂದರೂ...
ದಿನವು ಬೇಗ ಉರುಳುವುದು
ಕೊನೆಗವಳು ಹೋಗುವೆ ಎಂದಾಗ
ಈ ಎದೆಯ ಹೂವು ಮುದುಡುವುದು

ಮುದುಡುವುದ ಕಂಡು ಹೂವು
ಅವಳಿಗೆ ಚೆಲ್ಲಾಟದಿ ಗೆದ್ದ ನಗುವು!!