Friday, October 29, 2010

ಜೊತೆ ಜೊತೆಯಲಿ... 10 Years!!

My Kinetic's Biography


ಗೆಳೆಯರೇ,
ಇದೇ ಅಕ್ಟೋಬರ್ ೨ನೇ ತಾರೀಖಿಗೆ ನನ್ನ ಗಾಡಿಗೆ ಹತ್ತು ವರ್ಷಗಳು ತುಂಬಿದವು. ಈ ಸ್ಮರಣೀಯ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಡೆದ ಕೆಲವು ಸ್ವಾರಸ್ಯಕರ ಸಂದರ್ಭಗಳನ್ನು ನೆನಪಿಸಿಕೊಳ್ಳುವ ಸಲುವಾಗಿ ನನ್ನ ಗಾಡಿಯ ಆತ್ಮಕಥನ ಬರೆದಿರುವೆ. ನಿಮ್ಮೆಲ್ಲರ ಜೊತೆ ಅದನ್ನು ಹಂಚಿಕೊಳ್ಳುವ ಬಯಕೆಯಾಗಿದ್ದರಿಂದ ಇಲ್ಲಿ ಪ್ರಕಟಿಸಿರುವೆ. ಹೇಗಿದೆ ಎಂದು ತಿಳಿಸಿ.. ಜೊತೆಗೆ ಗಾಡಿಯ ಹುಟ್ಟುಹಬ್ಬದ ಆಚರಣೆಯ ಕೆಲವು ಚಿತ್ರಗಳನ್ನು ಹಾಕಿರುವೆ.. ಹತ್ತು ಮೇಣದ ಬತ್ತಿಗಳನ್ನು ಅಂಟಿಸಿ ಆಚರಿಸಿದ ರೀತಿ ಖುಶಿ ಕೊಟ್ಟಿತು..

ಇದು ಹತ್ತು ವರ್ಷಗಳ ಹಿಂದಿನ ಮಾತು. ನಾನು ಆಗ ತಾನೆ ಮೊದಲನೆಯ ಪಿಯುಸಿ ಸೇರಿದ್ದೆ. ಮನೆಯಿಂದ ಟ್ಯೂಶನ್, ಟ್ಯೂಶನ್ನಿಂದ ಕಾಲೇಜು ಹೀಗೆ ಓಡಾಟ ಹೆಚ್ಚಿತ್ತು. ಆ ದಿನಗಳಲ್ಲಿ ದಾವಣಗೆರೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಸೈಕಲ್ ಬಳಸುತ್ತಿದ್ದರು. ನನಗೆ ಸೈಕಲ್ ಸಾಕಾಗಿ ಹೊಸ ಗಾಡಿಗಾಗಿ ತಂದೆಯ ಬಳಿ ಬೇಡಿಕೆಯಿಟ್ಟೆ. ಹಲವು ಪ್ರಯತ್ನಗಳ ನಂತರ ಅವರ ಮನವೊಲಿಸುವುದರಲ್ಲಿ ಸಫಲನಾದೆ. ಒಂದು ಒಳ್ಳೆಯ ದಿನ ನೋಡಿ ಗಾಡಿ ಬುಕ್ ಮಾಡಲು ಶೋ ರೂಮಿಗೆ ಹೋದೆವು. ಅಲ್ಲಿಯೇ ನನಗೆ ಬಿಳಿ ಬಣ್ಣದ ಕೈನೆಟಿಕ್ ಕಂಡು Love at first sight ಆಯಿತು! ಅದೇ ಗಾಡಿ ಬುಕ್ ಮಾಡಿಸಿದೆ.




ಅಕ್ಟೋಬರ್ 2 , 2000 , ಗಾಂಧಿ ಜಯಂತಿಯ ದಿನದಂದು ನಮ್ಮ ಮನೆ ತಲುಪಿತು ಈ ನನ್ನ Sweetheart!ಅಂದು ನನ್ನ ಸಂತೋಷಕ್ಕೆ ಎಲ್ಲೆ ಇರಲಿಲ್ಲ. ನಾ ಮೊದಲು, ತಾ ಮೊದಲು ಎಂದು ನಾನೂ, ನಮ್ಮ ಅಣ್ಣ ಗುದ್ದಾಡುತ್ತಿದ್ದೆವು. ನನ್ನ ಆಪ್ತಮಿತ್ರ ಸ್ವರೂಪ ತನ್ನ ಗೇರ್ ಸೈಕಲ್ ಮೇಲೆ ಅವಸರದಿ ಬಂದು ನೋಡಿ ಪ್ರಶಂಸೆಗಳ ಸುರಿಸಿದ. ಅಂದು ಇಡೀ ಊರಿನ ಕಣ್ಣು ನಮ್ಮ ಮೇಲಿತ್ತು. ಪಾಪ! ನನ್ನ ಗಾಡಿಗೆ ದೃಷ್ಟಿಯಾಗಿತ್ತು ಅನ್ನಿಸುತ್ತೆ.. ಗಾಡಿಯಲ್ಲಿ ಒಂದು ಸುತ್ತಿಗೆ ಹೋಗಿದ್ದ ಅಣ್ಣ ಬರುವನೆಂದು ಕಾಯುತ್ತಿದ್ದ ನಮ್ಮೆಲ್ಲರಿಗೆ ರಸ್ತೆ ತಿರುವಿನಿಂದ ಜೋರಾಗಿ "ಧಢಾರ್" ಸದ್ದು ಕೇಳಿತು. ನಾವೆಲ್ಲ ಜೀವ ಕೈಯಲ್ಲಿ ಹಿಡಿದು ಅತ್ತ ಓಡಿದೆವು. ಅಣ್ಣ ರಸ್ತೆ ಬದಿಯಲ್ಲಿ ನಿಂತಿದ್ದ ಬೈಕೊಂದಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದ! ನನಗೆ ಆಘಾತವಾಗಿತ್ತು! ಮೊದಲನೆಯ ದಿನವೇ ಗಾಡಿಯ ಮುಖದ ಮೇಲೆ ದೊಡ್ಡದೊಂದು ತಗ್ಗು ಬಿದ್ದಿತ್ತು! ಇಂದಿಗೂ ಆ ತಗ್ಗು ಹಾಗೇ ಇದೆ. ಬದಿಗಿರುವುದರಿಂದ ಎದ್ದು ಕಾಣುವುದಿಲ್ಲ ಅಷ್ಟೆ.




ನಂತರದ ದಿನಗಳಲ್ಲಿ ನಾನು, ನನ್ನ ಗೆಳೆಯ ಸ್ವರೂಪ್ ದಿನವೂ ಬೆಳೆಗ್ಗೆ ಐದು ಗಂಟೆಗೆ ಎದ್ದು ಈ ಗಾಡಿಯೇರಿ ಟ್ಯೂಶನ್ಗೆ, ನಂತರ ಕಾಲೇಜಿಗೆ ಹೋಗುತ್ತಿದ್ದೆವು. ಆ ದಿನಗಳಲ್ಲಿ ನಮ್ಮ ಈ ಜೋಡಿ ಇಡೀ ಊರಿನ ಗಮನ ಸೆಳೆದಿತ್ತು. ನಮ್ಮನ್ನು ಹಿಡಿಯುವವರು ಇರಲಿಲ್ಲ. ನಮ್ಮ ಮನೆಯಲ್ಲಿದ್ದ ಹಳೆಯ ಕ್ಯಾಮೆರಾಗೆ ಹೊಸ ರೀಲು ಹಾಕಿಸಿ ಗಾಡಿಯನ್ನು ಊರಿನ ವಿವಿಧ ಜಾಗಗಳಿಗೆ ಒಯ್ದು ನನ್ನ ಸ್ನೇಹಿತರಾದ ಸ್ವರೂಪ್, ಮಂಜು, ಜ಼ಬಿ ಎಲ್ಲರೂ ಬಗೆ ಬಗೆ ಫೋಸು ನೀಡುತ್ತ ಗಾಡಿಯ ಮುಂದೆ ನಿಂತು ಸುಮಾರು ಫೋಟೊ ತೆಗೆಸಿಕೊಂಡೆವು.

ಆ ಸಮಯಕ್ಕಾಗಲೆ ಗೆಳೆಯರು ನನ್ನ ಗಾಡಿಗೆ "KINY - The White Beauty" ಎಂದು ನಾಮಕರಣ ಮಾಡಿದ್ದರು. ಅದು ಗಾಡಿ White & Beautiful ಆಗಿದೆ ಅಂತನೋ ಅಥವಾ ಅದು ಬಹಳ Whiteಆಗಿರೊ Beautyಗಳ ಹಿಂದೆ ಏನೋ ಸಾಧಿಸಲು ಸುತ್ತಾಡಿದೆ ಅಂತನೋ ಗೊತ್ತಿಲ್ಲ.. ಹೀಗೆ ಹುಚ್ಚು ಓಡಾಟಗಳು ಹೆಚ್ಚಾಗಿ, ಓದಿನ ಕಡೆ ಗಮನ ಕಡಿಮೆಯಾಗಿ ಪರೀಕ್ಷೆಯ ಫಲಿತಾಂಶ ಕೈ ಕೊಟ್ಟಿತ್ತು! ಮನೆಯವರು ಗಾಡಿಗೆ ಬೀಗ ಜಡಿದು ನನ್ನಿಂದ ದೂರ ಮಾಡಿದರು. ನಾನು ವಿರಹ ವೇದನೆಯಲ್ಲಿ ಮುಳುಗಿದೆ!
ಆಗ ನಾನು ವನವಾಸಕ್ಕೆ ಹೋಗಬೇಕಾಯಿತು! ಅಂದರೆ ಡಿಗ್ರೀ ಮಾಡಲು ಮನೆ ಬಿಟ್ಟು ಬೆಂಗಳೂರಿನಲ್ಲಿ ಹಾಸ್ಟೆಲ್ ಸೇರಿದೆ. ಗಾಡಿ ನನ್ನಿಂದ 300 ಕಿ.ಮೀ. ದೂರ ಉಳಿಯಿತು. ಹಾಗೇ ಎರಡು ವರ್ಷ ಕಳೆಯಿತು. ನಾನು Final yearಗೆ ಬಂದಾಗ ಮನೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು, ಹಾಗಾಗಿ ಗಾಡಿಯೂ ಬೆಂಗಳೂರು ತಲುಪಿತು. ಆಗ ಮತ್ತೆ ನಾನು ದಿನವೂ ಕಾಲೇಜಿಗೆ ಗಾಡಿ ತೆಗೆದುಕೊಂಡು ಹೋಗುವ ಹಾಗಾಯಿತು. ಆಗ ಬೆಂಗಳೂರಿನಲ್ಲಿ ಇನ್ನು ಹೆಲ್ಮೆಟ್ ಖಡ್ಡಾಯವಾಗಿರಲಿಲ್ಲ. ಜೀನ್ಸು, ಟಿ-ಶರ್ಟು, ಕೂಲಿಂಗ್ ಗ್ಲಾಸು ಧರಿಸಿ ಕಿವಿಗೆ ಹಾಕಿದ ವಾಕ್‍ಮೆನ್‍ನಲ್ಲಿ "Oh Humdum Soniyo re..." ಅಂತ ಹಾಡು ಕೇಳುತ್ತಾ ಗಾಡಿಯಲ್ಲಿ ಜಾಲಿಯಾಗಿ ಕಾಲೇಜಿಗೆ ಹೋಗುವ ಮೋಜು ಸವಿದವನೆ ಬಲ್ಲ! ಆದರೂ ದಾವಣಗೆರೆಯಲ್ಲಿ ರಾಜನಂತಿದ್ದ ನನ್ನ ಗಾಡಿ ಬೆಂಗಳೂರಿನಲ್ಲಿ ಕಿರಿದಯಿತು. ದೊಡ್ಡ ದೊಡ್ಡ ದುಬಾರಿ ಬೈಕ್ ತರುತಿದ್ದ ಗೆಳೆಯರು ನನಗೆ "Wheeling ಮಾಡೋ.." ಎಂದು ಗೇಲಿಮಾಡಿದರಾದರೂ ಕೈನೆಟಿಕ್ ಮೇಲಿನ ನನ್ನ ಪ್ರೀತಿ ಕುಗ್ಗಲಿಲ್ಲ!



ಕಾಲೇಜಿನಲ್ಲಿ ಆನಂದಿ ಎಂಬುವ ಉಪನ್ಯಾಸಕಿಯೊಬ್ಬರು ನನಗೆ ಓದಿನಲ್ಲಿ ತುಂಬಾ ಪ್ರೋತ್ಸಾಹ ಕೊಡುತಿದ್ದರು. ನಮ್ಮ ನೆಚ್ಚಿನ ಉಪನ್ಯಾಸಕಿಯಾದ ಅವರನ್ನು ಒಮ್ಮೆ ಈ ಗಾಡಿಯಲ್ಲೆ ನಮ್ಮ ಮನೆಗೆ ಕರೆತಂದು ಸಹಪಾಠಿಗಳೊಂದಿಗೆ ಅವರಿಗೆ Surprise birthday party ಕೊಟ್ಟಿದ್ದನ್ನು ನನ್ನ ಗೆಳೆಯರು ಇನ್ನು ನೆನೆಯುತ್ತಾರೆ. ಆವರು ಕೆಲಸ ಬಿಟ್ಟು ಹೈದರಾಬಾದಿಗೆ ತೆರಳುವಾಗ ಕೊನೆಗೆ ನಾನೇ ಅವರನ್ನು ಬಸ್ ನಿಲ್ದಾಣಕ್ಕೆ ಗಾಡಿಯಲ್ಲಿ ಬಿಟ್ಟು ಬಂದೆ. ಅಂದು ನಮ್ಮೆಲ್ಲರ ಕಣ್ಣು ತುಂಬಿತ್ತು.



ಓದು ಮುಗಿಸಿ ನಾನು ಕೆಲಸಕ್ಕೆ ಸೇರಿದೆ. ನನ್ನ ಮೊದಲ ಕೆಲಸ Field Engineer. ಆಗಲೂ ಸಹ ನನ್ನ ಸಹಾಯಕ್ಕೆ ಬಂದಿದ್ದು ಈ ನನ್ನ ಕೈನಿಯೇ! ಹಗಲು ಇರುಳೆನ್ನದೆ ಕರೆ ಬಂದ ಕಡೆಗೆ ತೆರಳಬೇಕಿತ್ತು. ನಾನು ನನ್ನ ಕಂಪನಿಯ ಗ್ರಾಹಕರಿಗೆ 24X7 ಸೇವೆ ನೀಡಲು ಸಾಧ್ಯವಾಗಿ ಅದು ನನಗೆ ಕಂಪನಿಯ ವತಿಯಿಂದ ಪ್ರಶಂಸೆ, ಪುರಸ್ಕಾರಗಳನ್ನು ತಂದುಕೊಟ್ಟಿತು. ಇಲ್ಲಿಯವರೆಗು ಒಮ್ಮೆಯೂ ನನ್ನನು ನಿರಾಶೆಗೊಳಿಸದ ನಿಸ್ವಾರ್ಥ ಸೇವೆ ಈ ನನ್ನ ಕೈನೆಟಿಕ್‍ದು!
ವರ್ಷ 2009.. ನನ್ನ ಜೀವನದ ಅತ್ಯಂತ ಕರಾಳ ವರುಷ! IT Field ಗೆ Recession ಎಂಬ ಭೂತ ಹೊಕ್ಕಿತ್ತು! ಅದು ಬಲಿ ತೆಗೆದುಕೊಂಡ ಲಕ್ಷಾಂತರ ಅಮಾಯಕ ಟೆಕ್ಕಿಗಳ ಉದ್ಯೋಗಗಳಲ್ಲಿ ನನ್ನದೂ ಕೊಚ್ಚಿ ಹೋಗಿತ್ತು! ಅದರ ಜೊತೆಗೆ ಅದೇ ಸಮಯಕ್ಕೆ ಈಡೇರಬೇಕಿದ್ದ ಜೀವನ ಮಹತ್ತರವಾದ ಕೆಲವು ಕನಸುಗಳು ಶಾಶ್ವತವಾಗಿ ಕಣ್ಮರೆಯಾದವು.. ಇಷ್ಟು ಸಾಲದು ಅಂತ ನಮ್ಮ ಹತ್ತಿರದ ಸಂಬಂಧಿಗಳು ಇಬ್ಬರು ಒಬ್ಬರಾದ ನಂತರ ಒಬ್ಬರು ತೀರಿಕೊಂಡರು.. ಸುನಾಮಿಯಂತೆ ಬಂದು ಎಲ್ಲವನ್ನು ಮರಳು ಮಾಡಿ ಹೋದ ವರ್ಷ 2009!



ಇದಾದ ನಂತರ ನನ್ನ ಗಾಡಿ ನನಗೆ ನೋವು ಮರೆಸಲು ನನ್ನನ್ನು ಊರೂರು ಸುತ್ತಿಸ ತೊಡಗಿತು! ಗಾಡಿ ಏರಿ ಬೆಂಗಳೂರಿನ ಸುತ್ತಮುತ್ತ ಸಿಗುವ ಎಲ್ಲ ಪ್ರಶಾಂತ ತಾಣಗಳಿಗೆ ಹೋಗಲು ಶುರು ಮಾಡಿದೆ. ಹೀಗೆ ಸುತ್ತಿದಾಗ ಅನ್ನಿಸಿತು "ಬದುಕು ಹಾಗು ಭೂಮಿ ಇನ್ನೂ ವಿಶಾಲವಾಗಿದೆ. ನೋಡಲು ಇನ್ನು ಬಹಳಷ್ಟಿದೆ.. ಈಗಲೇ ಧೈರ್ಯಗೆಡುವುದು ಹೇಡಿತನ! ಬದುಕಿನ ಪಯಣ ಏರಿಳಿತಗಳಿಂದ ಕೂಡಿದೆ. ನನ್ನ ಗಾಡಿಗೆ ಗೇರಿಲ್ಲ ಆದ್ದರಿಂದ ಅದು ನಿಧಾನವಾಗಿ ಸಾಗುತ್ತದೆ. ಅಂತೆಯೆ ವಿವೇಕವಿಲ್ಲದವನ ಜೀವನ ನಿಧಾನವಾಗಿ ಪ್ರಗತಿಯಾಗುತ್ತದೆ. ಆದರೆ ನಿಧಾನವಾಗಿ ಸಾಗಿದವನಿಗೆ ಅನುಭವ ಹೆಚ್ಚು. ಅದ್ದರಿಂದ ನಗು ನಗುತಾ ನಲಿ ಏನೇ ಆಗಲಿ ಎಂಬ ಅಣ್ಣವ್ರ ಹಾಡಿನ ರೀತಿ ಬದುಕಬೇಕು" ಎಂದು ಎನಿಸಿತು. ಹೀಗೆ ಊರು ಸುತ್ತುವಾಗ ಅಕಸ್ಮಾತಾಗಿ ನನಗೆ ನಿತ್ಯಾನಂದನ ಆಶ್ರಮ, ಶ್ರೀ ರಾಮ ಬೆಟ್ಟ, ಜಾನಪದ ಲೋಕಕ್ಕೆ ಹೋಗುವ ಅವಕಾಶ ಸಿಕ್ಕಿ, ನಾನದರ ಬಗ್ಗೆ ಒಂದು ಲೇಖನ ಬರೆದು, ಅದು ಗೆಳೆಯರಲ್ಲೆಲ್ಲಾ ಜನಪ್ರಿಯವಾಗಿದ್ದು ನಿಮ್ಗೆ ಗೊತ್ತೇ ಇದೆ.
ಹೀಗೆ ಕಿತ್ತುಹೊಗಿದ್ದ ನನ್ನ ಜೀವನವನ್ನು ಮತ್ತೆ ಹಳಿಗೆ ತರುವಲ್ಲಿ ತುಂಬ ಸಹಾಯ ಮಾಡಿದೆ ಈ ನನ್ನ ಗಾಡಿ! ಅದಕಾಗಿ ನನ್ನ ಕಡೆಯಿಂದ ಅದಕೆ Nobel prize!



ಒಮ್ಮೆ ನಾನು ದೊಡ್ಡ ಕಂಪನಿಯೊಂದರಲ್ಲಿ ಹೊಸ ಕೆಲಸದ ಸಂದರ್ಶನಕ್ಕೆ ಹೋಗುವುದಿತ್ತು. ಇನ್ನೇನು ಹೊರಡುವ ಸಮಯಕ್ಕೆ ನೋಡಿಕೊಂಡೆ ಗಾಡಿ ಪಂಚರ್ ಆಗಿತ್ತು! ಯೋಚಿಸಲು ಸಹ ಸಮಯವಿರಲಿಲ್ಲ! ಟೈರಿನಲ್ಲಿ ಇನ್ನು ಕೊಂಚ ಗಾಳಿಯಿತ್ತು. ದೇವರ ನೆನೆದು ಅದರಲ್ಲಿಯೇ ಹೊರಟು ಬಿಟ್ಟೆ. ಪಾಪ! ನನ್ನ ಗಾಡಿ ಜೀವ ನಡಗುತ್ತಿದ್ದರೂ ಟೈರಿನಲ್ಲಿದ್ದ ಕೊನೆಯುಸಿರನ್ನು ಗಟ್ಟಿ ಹಿಡಿದು ನನ್ನ ಸರಿಯಾದ ಸಮಯಕ್ಕೆ ಸ್ಥಳ ತಲುಪಿಸಿತು. ತನ್ನ ಹತ್ತು ವರ್ಷದ ವೈಭವದ ಚರಿತ್ರೆಯಲ್ಲಿ ಎಂದೂ ಕೈ ಕೊಡದ ಕೈನೆಟಿಕ್ ಇಂದೂ ಸಹ ತನ್ನ ಹೆಸರು ಉಳಿಸಿಕೊಂಡಿತ್ತು! ಸಂದರ್ಶನದಲ್ಲಿ ಯಶಸ್ಸು ದೊರೆತಾಗ ಅದರ ಎಲ್ಲಾ ಶ್ರೇಯಸ್ಸು ಕೈನೆಟಿಕ್‍ಗೆ ಸಲ್ಲಿಸಿದೆ.
ಗೆಳೆಯ ಸ್ವರೂಪ್ ಈಗ ನಮ್ಮ ಕಂಪನಿಯ ಪಕ್ಕದ ಕಟ್ಟಡದಲ್ಲೇ ಕೆಲಸ ಮಾಡುವುದು. ಹತ್ತು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ನಾನು ಸ್ವರೂಪ್ ಕಾಲೇಜು ಬ್ಯಾಗ್ ಧರಿಸಿ ಕೈನೆಟಿಕ್ ಏರಿ ದಿನವೂ ಕಾಲೇಜ್, ಟ್ಯೂಶನ್ ಅಂತ ಓಡಾಡುತ್ತಿದ್ದೆವು.. ಈಗ ಹತ್ತು ವರ್ಷಗಳ ನಂತರ ಬೆಂಗಳೂರಿನಲ್ಲಿ ಅದೇ ವ್ಯಕ್ತಿಗಳು Laptop ಹೊತ್ತು ಅದೇ ಗಾಡಿಯಲ್ಲಿ ಆಫೀಸಿಗೆ ತೆರಳುತ್ತಿದ್ದೇವೆ. ಎಂಥಹ ಸ್ಮರಣಾರ್ಹ ಸಂದರ್ಭ ಅಲ್ಲವೇ?



 

Tuesday, October 12, 2010

Farewell Colleagues

Apoorv Rathore, Vignesh & Me - My Best Team mates
==========================================
Its the time for farewell colleague,
But dont say goodbye!
As i leave with a filled eye...
This sudden decision is hard to believe;
Will remember you as years pass by.

Very rarely we find people,
Who share feelings subtle;
Who make the workplace,
A lively funny worship place;
Who guide us through the dark
And wipe off tears without a mark!

In todays world very few,
Support when others are against you;
You were one such rare person
Who would turn..
A boring work to fun!

I was so lucky to work with you,
So much did I learn,
Hope to get your valuable advise
Whenever there is a concern.
sharing a lighter moment with pizzas & coke
=========================================
Your big smile was relief for others
"Machchi" - As you called us brothers
You were a legend of courtesy,
Again and again whom all hope to see

I remember how your vast knowledge
saved me once from hanging cliff edge
I am leaving...
With a heavily filled light memory!
hoping to find again our lost glory.

Me & Vignesh

Striking funny phose!

Our favourite Internet enabled Apple MAC PC!



Those leasurely weekend night shifts with no work & we watched IPL matches live!

The First Year anniversary Party of our Network Operations team


Goodbye to the company which brought a big difference to my Career, Life & Way of thinking...

" The Cable got unplugged & now I am Wireless... "


Thursday, October 7, 2010

Orange Heart!



ಗೆಳೆಯರೇ,

ನೆನ್ನೆ ದಿನ ಸಂಜೆ ನಾನು ಅಮ್ಮ ಕೊಟ್ಟ ಕಿತ್ತಳೆ ಬಿಡಿಸುತ್ತಾ ಇದ್ದನಾ... ಬಿಡಿಸುತ್ತ ಬಿಡಿಸುತ್ತ ಯಾವುದೊ ಗುಂಗಿನಲ್ಲಿ ಮೈ ಮರೆತೆ.. ಮತ್ತೆ ಅಮ್ಮ ನನ್ನೆಡೆ ನೋಡಿ ನಕ್ಕಾಗಲೇ ಎಚ್ಚರವಾಗಿದ್ದು.. ಅವರು ಯಾಕೆ ನಗುತ್ತಿದ್ದಾರೆ ಎಂದು ಕಿತ್ತಳೆ ತಿರುಗಿಸಿ ನೋಡಿದೆ.. ಮೇಲಿನ ದೃಶ್ಯ ಕಂಡು ನನಗು ನಗು ಬಂತು.. ಗೊತ್ತಿಲ್ಲದೆ ನಾನು ಕಿತ್ತಳೆ ಸಿಪ್ಪೆಯನ್ನು ಹೃದಯದ ಆಕಾರದಲ್ಲಿ ಬಿಡಿಸಿಬಿಟ್ಟಿದ್ದೆ! ಹೇಗಿದ್ದರೂ ಹೃದಯ ಆಕಾರ ಬಂದಿದೆಯಲ್ಲ ಎಂದು ಎಣಿಸಿ ಚಾಕು ತೆಗೆದೆಕೊಂಡು ಅದನ್ನು ಇನ್ನು ಚೆನ್ನಾಗಿ ಕಾಣುವ ಹಾಗೆ ಕೆತ್ತಿ ಫೋಟೊ ತೆಗೆದೆ..
ಅಮ್ಮ ಮಾತ್ರ "ಯಾರನ್ನು ನೆನೆಯುತ್ತ ಈ ರೀತಿ ಕಿತ್ತಳೆ ಬಿಡಿಸಿದೆಯಪ್ಪಾ ಕಲಾವಿದ?" ಅಂತ ದಿನವಿಡೀ ನನ್ನ ಕಾಡುತಿದ್ದರು..
"ಎಷ್ಟೇ ಅದರೂ ನಾನು ಪ್ರೇಮ ಕವಿಯಲ್ವೆ .... ಕೈ ಇತ್ತ ಕಡೆ ಹೃದಯಗಳು ಮೂಡೋದು, ಅರಳೋದು ಸಹಜ ಕಣಮ್ಮ" ಅಂತ dialogue ಹೊಡೆದೆ..!!

ಹನಿ ಗವನ:

ಬಿಡಿಸುತ್ತಲೇ ನಾನು ಕಿತ್ತಳೆ,
ಕನಸ ಕಾಣುತ್ತಿದ್ದೆ ಸಂಜೆ ಹೊತ್ತಲೆ,
ಕರೆಂಟು ಹೋಗಿ ಆಯಿತು ಕತ್ತಲೆ,
ಇತ್ತು ಅವಳ ನೆನಪುಗಳ ನಶೆ ಏರುತ್ತಲೇ,
ಸಿಪ್ಪೆ ಕಳೆದುಕೊಂಡು ಕಿತ್ತಳೆಯಾದರು ಬೆತ್ತಲೆ,
ನಾನಿದ್ದೆ ಆ ಸಿಪ್ಪೆಯಲ್ಲೆ ಏನೋ ಕೆತ್ತುತ್ತಲೇ,
ಕರೆಂಟು ಬಂದಾಗ ಎಲ್ಲರಿಗೂ ತಿಳಿಯಿತು,
ನಾ ಬಿಡಿಸಿದ್ದು ಕಿತ್ತಳೆ,
ಆವಳ ಮಾತುಗಳ ನೆನಪಿನ ಮತ್ತಲೇ!


It's not a broken heart,
It's not a stolen heart,
but its an Orange Heart!
A beautiful orange art!