ಕತ್ತಲೆಯ ಕ್ಷಣಗಳು..
ನನ್ನ ಕಾಡುವವು ಗೆಳತಿ..
ನಿನ್ನ ಮೌನದಂತೆ..
ನನ್ನ ಅವ್ಯಕ್ತ ಆಸೆಗಳೇ
ನನಗೆ ಮುಳುವಾಗುವವು..
ನಿನ್ನ ಒಲವಿನ ಹಣತೆಯ ಸುತ್ತ
ಹಾರಾಡುವ ಹುಳುವಾಗುವವು..
ಸಾಯುವವು ವಿರಹದಗ್ನಿಯಲಿ
ರೆಕ್ಕೆ ಸುಟ್ಟು...
ನೀ ನಗುಬೆಳಕ ಚೆಲ್ಲಲು
ಅವಕೆ ಮರುಹುಟ್ಟು...
ಎರೆಯುತಿರು ಕಣ್ಣಲ್ಲೆ
ಪ್ರೀತಿಯ ತೈಲವ ಹೀಗೆ...
ಬೆಳಗುತಿರು ಮನೆ ಮನದಿ
ನನ್ನ ಕಾಡುವವು ಗೆಳತಿ..
ನಿನ್ನ ಮೌನದಂತೆ..
ನನ್ನ ಅವ್ಯಕ್ತ ಆಸೆಗಳೇ
ನನಗೆ ಮುಳುವಾಗುವವು..
ನಿನ್ನ ಒಲವಿನ ಹಣತೆಯ ಸುತ್ತ
ಹಾರಾಡುವ ಹುಳುವಾಗುವವು..
ಸಾಯುವವು ವಿರಹದಗ್ನಿಯಲಿ
ರೆಕ್ಕೆ ಸುಟ್ಟು...
ನೀ ನಗುಬೆಳಕ ಚೆಲ್ಲಲು
ಅವಕೆ ಮರುಹುಟ್ಟು...
ಎರೆಯುತಿರು ಕಣ್ಣಲ್ಲೆ
ಪ್ರೀತಿಯ ತೈಲವ ಹೀಗೆ...
ಬೆಳಗುತಿರು ಮನೆ ಮನದಿ
ಅನಂತ ಅನುರಾಗದ ದೀವಿಗೆ!
=========================================
ಚಿತ್ರದಲ್ಲಿರುವವರು: ದಿಲೀಪ್ ರಾವ್ & ಸಂಧ್ಯಾ ಎಂ. ಎಸ್. (ನನ್ನ ಅಣ್ಣ ಮತ್ತು ಅತ್ತಿಗೆ)