Friday, December 31, 2010

ನಾ ನಿನ್ನ ಮರೆಯಲಾರೆ




ನುಂಗಿ ನೊಣೆಯುತ್ತಿದ್ದ ನೋವುಗಳ
ನೂಕಿ ನಡೆದು ಬಂದಳೊಬ್ಬಳು ನೀರೆ
ಕಣ್ಣುಗಳು ಎಂದೂ ಕಂಡಿರದ ಬಣ್ಣಗಳ
ತುಂಬಿಕೊಂಡು ತುಳುಕುತಿತ್ತು ಅವಳ ಸೀರೆ

ಕಾಲದ ಕಾಲ್ಕೆಳಗೆ ಕಣ್ಮರೆಯಾಗಿದ್ದ ಕನಸುಗಳ ಕಡೆಗೆ
ಕೈ ಹಿಡಿದು ಕರೆದೊಯ್ದ ಚೆಲುವೆ ನೀನ್ಯಾರೆ?
ಕಾಯುತಿರುವೆ ನಾ ಎಂದೆಂದೂ ನಿನಗಾಗಿ
ಬಾಳು ಬರುಡಾದಾಗಲೆಲ್ಲಾ ನೀ ಮರಳಿ ಬಾರೆ

ತುಂಬಿ ಹರಿಯುತ್ತಿದ್ದ ಕಣ್ಣುಗಳ ಒರೆಸಿ
ಎಡೆಬಿಡದೆ ಕಾಡಿದ್ದ ನೆನಪುಗಳ ಮರೆಸಿ
ಎಲ್ಲೆಡೆ ಮರುಜನ್ಮದ ಸುಗಂಧವ ಸೂಸಿ
ನಡೆಸಿದಳು ನನ್ನ ಮರಳಿ ಬಾಳಿನೆಡೆಗೆ
ಕೈಗೆ ಕೈ ಜೋಡಿಸಿ, ಹೆಜ್ಜೆಗೆ ಹೆಜ್ಜೆ ಸೇರಿಸಿ,
ಪ್ರತಿಹೆಜ್ಜೆಗೂ ಒಲವ ಹೂ ಮಳೆ ಸುರಿಸಿ

ಸಂಸಾರ ಸಾಗರದೀ ಪಯಣಕೆ, ನೀನಾದೆ ಧ್ರುವತಾರೆ,
ದೂರಾದರೂ ಕನಸುಗಳಲಿ, ನೆನಪುಗಳಲಿ ಆಗಾಗ,
ಇಣುಕಿ ನೀ ಸುಂದರ ಮೊಗವ ತೋರೆ,
ಅಷ್ಟೇ ಬಯಸುವುದಿಲ್ಲ ನಿನ್ನಿಂದ ನಾನೇನೂ ಬೇರೆ,
ಚೆಲುವೆ, ಎಂದೆಂದೂ ನಾ ನಿನ್ನ ಮರೆಯಲಾರೆ

"ಹೋಗದಿರು ನನ್ನ ಬಿಟ್ಟು" ಎಂದರೂ ನಾ ಅತ್ತು,
ಕೇಳದೇ ಹೋದಳು ಅವಳು ನನ್ನ ಮಾತು
ಬಳಿ ಬಂದು ನುಡಿದಳು, ಈ ಜಗವ ತ್ಯಜಿಸಲು
ನನಗೆ ಉಳಿದಿಲ್ಲ ಹೆಚ್ಚು ಹೊತ್ತು
ನಡುರಾತ್ರಿಗೆ ಇನ್ನು ಹತ್ತು ನಿಮಿಷವಷ್ಟೆ ಉಳಿದಿತ್ತು

ಅವಳು ನನ್ನನು, ನಿಮ್ಮನ್ನು, ಬಿಟ್ಟು ಹೊರಟೇ ಹೋದಳು!
ಅವಳನ್ನು ನೀವೆಲ್ಲರೂ ನೋಡಿದ್ದೀರಿ, ಅನುಭವಿಸಿದ್ದೀರಿ!
ಅವಳ ಬಗ್ಗೆ ನಿಮಗೆಲ್ಲಾ ಚೆನ್ನಾಗಿ ಗೊತ್ತು!
ಅವಳೇ ಇಸವಿ ಎರಡು ಸಾವಿರದ ಹತ್ತು!
Alias 2010 AD - Very Beautiful Lady!

======================000000000000000000000000===================




HAPPY NEW YEAR
2011
===================

Wednesday, December 29, 2010

Beautiful Christmas Moments Captured!


Hi Friends,

MERRY CHRISTMAS TO ALL OF YOU!!






Once again, My desire to capture festive moments across the city put me in action. This time though I had lost my camera mobile, it couldn't hold me back from roaming across the city & capturing some of the beautiful moments of christmas. I borrowed my friend's cam for this. Enjoy!!
-------------------------------------------------------------------
CAKE SHOW AT St. Joseph college Grounds
-------------------------------------------------------------------------
This is a huge 5 feet cake model of the The Taj Hotel in Mumbai which was attacked by terrorists last year in the 26/11 attacks.



Another Cake
Garden made of cake!

Ship Model in cake
Another garden of cakes

-----------------------------------------------------------------
Trinity Church, Trinity Circle, M.G. Road
-----------------------------------------------------------------
The Trinity Church is most probably the only place in the busy, crowded M.G. Road where you can find some peace, calmness & utter silence! It was built in the year 1852 by British people. Its 148 years old!







-------------------------------------------------
Sacred Heart Church, Shoolay Circle
-----------------------------------------------------




--------------------------------------------------
ST. MARY'S BASCILICA, SHIVAJINAGAR
--------------------------------------------------
This church in front of the Russel market in Shivajinagar is the oldest church of Bangalore. Its history begins from the year 1803. It all began with a small chapel with thatched roof which went under modification several times. Today its not only one of the oldest but also one of the most beautiful chrches in south India and also is the only church in the state that has been elevated to the status of a minor basilica




From




All Image Copyrights © Pradeep Rao

=================== 00000 =======================

Wednesday, December 22, 2010

ಪ್ರೇಮ ಕವಿಯ ಪಯಣಕೆ 1 ವರ್ಷ!



23rd December 2010ಗೆ ನನ್ನ ಈ ಬ್ಲಾಗ್ ಅವತರಿಸಿ ಒಂದು ವರ್ಷವಾಯಿತು. ಒಂದು ವರ್ಷದಿಂದ ನನ್ನ ಬ್ಲಾಗ್‍ಗೆ ಬಂದು ನಾನು ಗೀಚಿದ ಕಥೆ-ಕವನಗಳನ್ನು ಓದಿ, ಕೆಲವು ಬಾರಿ ಕಾಮೆಂಟುಗಳನ್ನು ಹಾಕಿ ನನ್ನನು ಪ್ರೋತ್ಸಾಹಿಸಿದಕ್ಕೆ ಅನಂತ ಅನಂತ ಧನ್ಯವಾದಗಳು. ನಿಮ್ಮೆಲ್ಲರಿಗೆ ನಾನು ಚಿರರುಣಿ. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನ, ಪ್ರೋತ್ಸಾಹಗಳು ಈ ಪೇಮ ಕವಿಯ ಪಯಣಕ್ಕೆ ಹೀಗೆ ವರ್ಷಾನುವರ್ಷ ದೊರೆಯುತ್ತಿರಲಿ ಇಂದು ಆಶಿಸುವೆ.

Flashback...

ಒಂದು ವರ್ಷದ ಹಿಂದೆ..

ಎಲ್ಲಿಗೀ ಪಯಣ..
ಯಾವುದೋ ದಾರಿ..
ಏಕಾಂಗಿ ಸಂಚಾರಿ...

ಎಂಬ ರಾಜ್‍ಕುಮಾರ್ ಹಾಡು ಟಿವಿಯಲ್ಲಿ ನೋಡುತಿದ್ದ ನಾನು ಬ್ಲಾಗ್‍ಗೆ ಯಾವ ಹೆಸರಿಡಬೇಕು ಎಂಬಾ ಯೋಚನೆಯಲ್ಲಿದ್ದೆ.. ಸ್ನೇಹಿತರೆಲ್ಲರೂ ಮೊದಲಿಂದಲೂ ನನ್ನ ಪ್ರೇಮಕವಿ ಎಂದು ಕರೆಯುತ್ತಿದ್ದರು.. ಕನ್ನಡದಲ್ಲಿ ಪ್ರೇಮಕವಿಯೆಂದು ಹೆಸರು ಪಡೆದವರು ಕೆ.ಎಸ್.ನರಸಿಂಹ ಸ್ವಾಮಿಯವರು. ಅವರ ಕ್ಷಮೆಯೊಂದಿಗೆ ಅವರ ಬಿರುದನ್ನು ಕದ್ದು ನಾನು "ಪ್ರೇಮಕವಿಯ ಪಯಣ" ಎಂದು ನಾಮಕರಣ ಮಾಡಿದೆ..

ಒಂದು ವರ್ಷದ ಹಿಂದೆ ಈ ಪಯಣ ಶುರುವಾಗಿದ್ದು ನಂಜನಗೂಡಿನ ಶ್ರೀಕಂಠೇಶ್ವರ ದೇವಲಯದಿಂದ. ಆ ದೇವಾಲಯದ ಬಗ್ಗೆ ಬರೆದಿದ್ದೆ ಈ ಬ್ಲಾಗಿನ ಮೊದಲ ಲೇಖನ. ಶ್ರೀಕಂಠೇಶ್ವರನ ಆಶೀರ್ವಾದದೊಂದಿಗೆ ಶುರುವಾದ ಈ ಪಯಣ ಇಂದು ಯಶಸ್ವಿಯಾಗಿ ಸಾಗಿದೆ. ಈ ಪಯಣಕ್ಕೆ ಹಲವು ಕವಿಗೆಳೆಯರು ಜೊತೆಯಾದರು. ಹಲವು ಸ್ಮರಣಾರ್ಹ ಸಂದರ್ಭಗಳು ಬಂದವು. ಪಯಣ ಅಂದ ಮೇಲೆ ಹಲವು ಜನರು ಬರುತ್ತಿರುತ್ತಾರೆ. ಹೋಗುತ್ತಿರುತ್ತಾರೆ.. ಬರುವವರಿಗೆ ನಾನು ಎಂದೂ ಕೈ ಬೀಸಿ ಕರೆಯುವೆ.. ಹೋಗಲೇಬೇಕೆನ್ನುವವರನ್ನು ನಾನು ತಡೆಯಲಾರೆ.. ಈ ಪಯಣ ಶುರು ಮಾಡಲು ಸ್ಪೂರ್ತಿ ನೀಡಿದವರು ಏಕೋ ದೂರವಾಗಿದ್ದಾರೆ.. ಇಂದು ಅವರಿಗೂ ಧನ್ಯವಾದಗಳನ್ನು ತಿಳಿಸುವೆ. ನಾನು ಬ್ಲಾಗ್‍ಗೆ ಏನೇ ಗೀಚಿ ಹಾಕಿದರೂ ತಮ್ಮ ಅಮೂಲ್ಯ ಸಮಯದಲ್ಲಿ ಅದನ್ನು ಓದಿ ಅಭಿಪ್ರಾಯ ತಿಳಿಸುವ ಸತ್ಯ, ಸೀತಾರಾಮ್, ಅಶೋಕ್, ದಿನಕರ್, ಪ್ರಭಾಮಣಿ, ಸೌರಭ, ಮಂಜುನಾಥ್ ಮತ್ತು ಉಳಿದವರೆಲ್ಲರಿಗೂ ತುಂಬಾ ಧನ್ಯವಾದಗಳು.

ಈ ಪಯಣ ಇಂದು ಸಾಗುತಿದೆ ಯಶಸ್ವಿಯಾಗಿ...

ಸಾಗುತಿದೆ.. ಪಯಣ.. ಪ್ರೀತಿಯ ಕಡೆಗೆ.. ಸ್ನೇಹದ ಕಡೆಗೆ.. ಙ್ನಾನದ ಕಡೆಗೆ..

ಸಾಗುತಿರಲಿ ಈ ಪಯಣ ಎಂದೆಂದೂ.. ನಿಮ್ಮೊಡನೆ..