![]() |
From Drop Box |
23rd December 2010ಗೆ ನನ್ನ ಈ ಬ್ಲಾಗ್ ಅವತರಿಸಿ ಒಂದು ವರ್ಷವಾಯಿತು. ಒಂದು ವರ್ಷದಿಂದ ನನ್ನ ಬ್ಲಾಗ್‍ಗೆ ಬಂದು ನಾನು ಗೀಚಿದ ಕಥೆ-ಕವನಗಳನ್ನು ಓದಿ, ಕೆಲವು ಬಾರಿ ಕಾಮೆಂಟುಗಳನ್ನು ಹಾಕಿ ನನ್ನನು ಪ್ರೋತ್ಸಾಹಿಸಿದಕ್ಕೆ ಅನಂತ ಅನಂತ ಧನ್ಯವಾದಗಳು. ನಿಮ್ಮೆಲ್ಲರಿಗೆ ನಾನು ಚಿರರುಣಿ. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನ, ಪ್ರೋತ್ಸಾಹಗಳು ಈ ಪೇಮ ಕವಿಯ ಪಯಣಕ್ಕೆ ಹೀಗೆ ವರ್ಷಾನುವರ್ಷ ದೊರೆಯುತ್ತಿರಲಿ ಇಂದು ಆಶಿಸುವೆ.
Flashback...
ಒಂದು ವರ್ಷದ ಹಿಂದೆ..
ಎಲ್ಲಿಗೀ ಪಯಣ..
ಯಾವುದೋ ದಾರಿ..
ಏಕಾಂಗಿ ಸಂಚಾರಿ...
ಎಂಬ ರಾಜ್‍ಕುಮಾರ್ ಹಾಡು ಟಿವಿಯಲ್ಲಿ ನೋಡುತಿದ್ದ ನಾನು ಬ್ಲಾಗ್‍ಗೆ ಯಾವ ಹೆಸರಿಡಬೇಕು ಎಂಬಾ ಯೋಚನೆಯಲ್ಲಿದ್ದೆ.. ಸ್ನೇಹಿತರೆಲ್ಲರೂ ಮೊದಲಿಂದಲೂ ನನ್ನ ಪ್ರೇಮಕವಿ ಎಂದು ಕರೆಯುತ್ತಿದ್ದರು.. ಕನ್ನಡದಲ್ಲಿ ಪ್ರೇಮಕವಿಯೆಂದು ಹೆಸರು ಪಡೆದವರು ಕೆ.ಎಸ್.ನರಸಿಂಹ ಸ್ವಾಮಿಯವರು. ಅವರ ಕ್ಷಮೆಯೊಂದಿಗೆ ಅವರ ಬಿರುದನ್ನು ಕದ್ದು ನಾನು "ಪ್ರೇಮಕವಿಯ ಪಯಣ" ಎಂದು ನಾಮಕರಣ ಮಾಡಿದೆ..
ಒಂದು ವರ್ಷದ ಹಿಂದೆ ಈ ಪಯಣ ಶುರುವಾಗಿದ್ದು ನಂಜನಗೂಡಿನ ಶ್ರೀಕಂಠೇಶ್ವರ ದೇವಲಯದಿಂದ. ಆ ದೇವಾಲಯದ ಬಗ್ಗೆ ಬರೆದಿದ್ದೆ ಈ ಬ್ಲಾಗಿನ ಮೊದಲ ಲೇಖನ. ಶ್ರೀಕಂಠೇಶ್ವರನ ಆಶೀರ್ವಾದದೊಂದಿಗೆ ಶುರುವಾದ ಈ ಪಯಣ ಇಂದು ಯಶಸ್ವಿಯಾಗಿ ಸಾಗಿದೆ. ಈ ಪಯಣಕ್ಕೆ ಹಲವು ಕವಿಗೆಳೆಯರು ಜೊತೆಯಾದರು. ಹಲವು ಸ್ಮರಣಾರ್ಹ ಸಂದರ್ಭಗಳು ಬಂದವು. ಪಯಣ ಅಂದ ಮೇಲೆ ಹಲವು ಜನರು ಬರುತ್ತಿರುತ್ತಾರೆ. ಹೋಗುತ್ತಿರುತ್ತಾರೆ.. ಬರುವವರಿಗೆ ನಾನು ಎಂದೂ ಕೈ ಬೀಸಿ ಕರೆಯುವೆ.. ಹೋಗಲೇಬೇಕೆನ್ನುವವರನ್ನು ನಾನು ತಡೆಯಲಾರೆ.. ಈ ಪಯಣ ಶುರು ಮಾಡಲು ಸ್ಪೂರ್ತಿ ನೀಡಿದವರು ಏಕೋ ದೂರವಾಗಿದ್ದಾರೆ.. ಇಂದು ಅವರಿಗೂ ಧನ್ಯವಾದಗಳನ್ನು ತಿಳಿಸುವೆ. ನಾನು ಬ್ಲಾಗ್‍ಗೆ ಏನೇ ಗೀಚಿ ಹಾಕಿದರೂ ತಮ್ಮ ಅಮೂಲ್ಯ ಸಮಯದಲ್ಲಿ ಅದನ್ನು ಓದಿ ಅಭಿಪ್ರಾಯ ತಿಳಿಸುವ ಸತ್ಯ, ಸೀತಾರಾಮ್, ಅಶೋಕ್, ದಿನಕರ್, ಪ್ರಭಾಮಣಿ, ಸೌರಭ, ಮಂಜುನಾಥ್ ಮತ್ತು ಉಳಿದವರೆಲ್ಲರಿಗೂ ತುಂಬಾ ಧನ್ಯವಾದಗಳು.
ಈ ಪಯಣ ಇಂದು ಸಾಗುತಿದೆ ಯಶಸ್ವಿಯಾಗಿ...
ಸಾಗುತಿದೆ.. ಪಯಣ.. ಪ್ರೀತಿಯ ಕಡೆಗೆ.. ಸ್ನೇಹದ ಕಡೆಗೆ.. ಙ್ನಾನದ ಕಡೆಗೆ..
ಸಾಗುತಿರಲಿ ಈ ಪಯಣ ಎಂದೆಂದೂ.. ನಿಮ್ಮೊಡನೆ..