ನೂಕಿ ನಡೆದು ಬಂದಳೊಬ್ಬಳು ನೀರೆ
ಕಣ್ಣುಗಳು ಎಂದೂ ಕಂಡಿರದ ಬಣ್ಣಗಳ
ತುಂಬಿಕೊಂಡು ತುಳುಕುತಿತ್ತು ಅವಳ ಸೀರೆ
ಕಾಲದ ಕಾಲ್ಕೆಳಗೆ ಕಣ್ಮರೆಯಾಗಿದ್ದ ಕನಸುಗಳ ಕಡೆಗೆ
ಕೈ ಹಿಡಿದು ಕರೆದೊಯ್ದ ಚೆಲುವೆ ನೀನ್ಯಾರೆ?
ಕಾಯುತಿರುವೆ ನಾ ಎಂದೆಂದೂ ನಿನಗಾಗಿ
ಬಾಳು ಬರುಡಾದಾಗಲೆಲ್ಲಾ ನೀ ಮರಳಿ ಬಾರೆ
ತುಂಬಿ ಹರಿಯುತ್ತಿದ್ದ ಕಣ್ಣುಗಳ ಒರೆಸಿ
ಎಡೆಬಿಡದೆ ಕಾಡಿದ್ದ ನೆನಪುಗಳ ಮರೆಸಿ
ಎಲ್ಲೆಡೆ ಮರುಜನ್ಮದ ಸುಗಂಧವ ಸೂಸಿ
ನಡೆಸಿದಳು ನನ್ನ ಮರಳಿ ಬಾಳಿನೆಡೆಗೆ
ಕೈಗೆ ಕೈ ಜೋಡಿಸಿ, ಹೆಜ್ಜೆಗೆ ಹೆಜ್ಜೆ ಸೇರಿಸಿ,
ಪ್ರತಿಹೆಜ್ಜೆಗೂ ಒಲವ ಹೂ ಮಳೆ ಸುರಿಸಿ
ಸಂಸಾರ ಸಾಗರದೀ ಪಯಣಕೆ, ನೀನಾದೆ ಧ್ರುವತಾರೆ,
ದೂರಾದರೂ ಕನಸುಗಳಲಿ, ನೆನಪುಗಳಲಿ ಆಗಾಗ,
ಇಣುಕಿ ನೀ ಸುಂದರ ಮೊಗವ ತೋರೆ,
ಅಷ್ಟೇ ಬಯಸುವುದಿಲ್ಲ ನಿನ್ನಿಂದ ನಾನೇನೂ ಬೇರೆ,
ಚೆಲುವೆ, ಎಂದೆಂದೂ ನಾ ನಿನ್ನ ಮರೆಯಲಾರೆ
"ಹೋಗದಿರು ನನ್ನ ಬಿಟ್ಟು" ಎಂದರೂ ನಾ ಅತ್ತು,
ಕೇಳದೇ ಹೋದಳು ಅವಳು ನನ್ನ ಮಾತು
ಬಳಿ ಬಂದು ನುಡಿದಳು, ಈ ಜಗವ ತ್ಯಜಿಸಲು
ನನಗೆ ಉಳಿದಿಲ್ಲ ಹೆಚ್ಚು ಹೊತ್ತು
ನಡುರಾತ್ರಿಗೆ ಇನ್ನು ಹತ್ತು ನಿಮಿಷವಷ್ಟೆ ಉಳಿದಿತ್ತು
ಅವಳು ನನ್ನನು, ನಿಮ್ಮನ್ನು, ಬಿಟ್ಟು ಹೊರಟೇ ಹೋದಳು!
ಅವಳನ್ನು ನೀವೆಲ್ಲರೂ ನೋಡಿದ್ದೀರಿ, ಅನುಭವಿಸಿದ್ದೀರಿ!
ಅವಳ ಬಗ್ಗೆ ನಿಮಗೆಲ್ಲಾ ಚೆನ್ನಾಗಿ ಗೊತ್ತು!
ಅವಳೇ ಇಸವಿ ಎರಡು ಸಾವಿರದ ಹತ್ತು!
Alias 2010 AD - Very Beautiful Lady!
======================000000000000000000000000===================
2011
===================