ಅವಳು ಮರವಾದರೆ,
ಅವನು ಭೂಮಿ, ನಾನು ಆಕಾಶ,
ಕಾಯುತ್ತಲೇ ಇದ್ದೆವು ಇಬ್ಬರೂ,
ಮನದ ಭಾವನೆಗಳ ಸಸಿ ಬೆಳೆದು,
ಹೆಮ್ಮರವಾಗಲು, ಹುಡುಕುತ್ತಿದ್ದೆವು ಅವಕಾಶ
ಮನದ ಮಹದಾಸೆಗಳ ಅವಳಿಗೆ ತಿಳಿಸಲು.
ಅವಳ ಮನವು ಅರಳಿ ಹಸಿರಾಗುವರೆಗೆ
ನಾ ಮಧುರ ಭಾವಗಳ ಮಳೆ ಸುರಿಸಿದೆ
ಆದರೂ ಮರದ ಕೊಂಬೆಗಳು ಬಾಗಿವೆ ಭೂಮಿಯೆಡೆಗೆ
ಬೇರಿಗೆ ಭೂಮಿಯ ಭದ್ರ ಹಿಡಿತ ಹಿಡಿಸಿದೆ.
ಭೂಮಿಯೆ ಮರವ ಮೊದಲು ತಬ್ಬಿದರೂ
ಈ ಆಗಸವಲ್ಲವೆ ಅದಕೆ ತೋರಿದ್ದು ಬೆಳಕು
ನಾನಲ್ಲವೇ ನೀರ ತಂದಿದ್ದು ಆ ಬೇರುಗಳ ಕೆಳಕೂ
ಮರವೇನೋ ಮೂಕ, ಇಹುದದಕೆ ಋಣ
ಮೆಚ್ಚೀತು ಹೇಗೆ ಅದು ನನ್ನ ಚಂಚಲ ಗುಣ?
ನನಗೋ ಹಗಲಿಗೊಂದು, ಇರುಳಿಗೊಂದು
ಬೆಳಗಿಗೊಂದು, ಸಂಜೆಗೊಂದು ಬದಲಾಗುವ ಬಣ್ಣ
ಸ್ವಾರ್ಥ ಭೂಮಿ ಬಂಧಿಸಿತ್ತೆಂದೋ ಬೇರುಗಳ
ನೀಡಿತ್ತು ಪ್ರೀತಿಯ ಕಟ್ಟಿ ಶರತ್ತುಗಳ ಕೋಟೆ
ನಾ ನನ್ನ ಪ್ರೀತಿಗೆ ಬಯಸದೇ ಬೇರೇನೂ
ಬೆಳಕ ಕೊಟ್ಟೆ, ಗಾಳಿಯ ಕೊಟ್ಟೆ, ಮಳೆಯ ಕೊಟ್ಟೆ
ಕೊನೆಗೆ ದೂರದಿಂದಲೆ ಬಾಗುವುದ ಕಂಡು
ಆ ಮರದ ಮನದ ಕೊಂಬೆಗಳು ಭೂಮಿಯೆಡೆಗೆ
ಮರದ ಬಳಿಯೂ ಬಾರದೆ ಪ್ರೀತಿಯ ಬಿಟ್ಟು ಕೊಟ್ಟೆ
ಮರಳಿ ಮರೆವಿನ ಮೋಡಗಳ ಹಿಂದೆ ಮರೆಯಾದೆ.
ಅವನು ಭೂಮಿ, ನಾನು ಆಕಾಶ,
ಕಾಯುತ್ತಲೇ ಇದ್ದೆವು ಇಬ್ಬರೂ,
ಮನದ ಭಾವನೆಗಳ ಸಸಿ ಬೆಳೆದು,
ಹೆಮ್ಮರವಾಗಲು, ಹುಡುಕುತ್ತಿದ್ದೆವು ಅವಕಾಶ
ಮನದ ಮಹದಾಸೆಗಳ ಅವಳಿಗೆ ತಿಳಿಸಲು.
ಅವಳ ಮನವು ಅರಳಿ ಹಸಿರಾಗುವರೆಗೆ
ನಾ ಮಧುರ ಭಾವಗಳ ಮಳೆ ಸುರಿಸಿದೆ
ಆದರೂ ಮರದ ಕೊಂಬೆಗಳು ಬಾಗಿವೆ ಭೂಮಿಯೆಡೆಗೆ
ಬೇರಿಗೆ ಭೂಮಿಯ ಭದ್ರ ಹಿಡಿತ ಹಿಡಿಸಿದೆ.
ಭೂಮಿಯೆ ಮರವ ಮೊದಲು ತಬ್ಬಿದರೂ
ಈ ಆಗಸವಲ್ಲವೆ ಅದಕೆ ತೋರಿದ್ದು ಬೆಳಕು
ನಾನಲ್ಲವೇ ನೀರ ತಂದಿದ್ದು ಆ ಬೇರುಗಳ ಕೆಳಕೂ
ಮರವೇನೋ ಮೂಕ, ಇಹುದದಕೆ ಋಣ
ಮೆಚ್ಚೀತು ಹೇಗೆ ಅದು ನನ್ನ ಚಂಚಲ ಗುಣ?
ನನಗೋ ಹಗಲಿಗೊಂದು, ಇರುಳಿಗೊಂದು
ಬೆಳಗಿಗೊಂದು, ಸಂಜೆಗೊಂದು ಬದಲಾಗುವ ಬಣ್ಣ
ಸ್ವಾರ್ಥ ಭೂಮಿ ಬಂಧಿಸಿತ್ತೆಂದೋ ಬೇರುಗಳ
ನೀಡಿತ್ತು ಪ್ರೀತಿಯ ಕಟ್ಟಿ ಶರತ್ತುಗಳ ಕೋಟೆ
ನಾ ನನ್ನ ಪ್ರೀತಿಗೆ ಬಯಸದೇ ಬೇರೇನೂ
ಬೆಳಕ ಕೊಟ್ಟೆ, ಗಾಳಿಯ ಕೊಟ್ಟೆ, ಮಳೆಯ ಕೊಟ್ಟೆ
ಕೊನೆಗೆ ದೂರದಿಂದಲೆ ಬಾಗುವುದ ಕಂಡು
ಆ ಮರದ ಮನದ ಕೊಂಬೆಗಳು ಭೂಮಿಯೆಡೆಗೆ
ಮರದ ಬಳಿಯೂ ಬಾರದೆ ಪ್ರೀತಿಯ ಬಿಟ್ಟು ಕೊಟ್ಟೆ
ಮರಳಿ ಮರೆವಿನ ಮೋಡಗಳ ಹಿಂದೆ ಮರೆಯಾದೆ.
============ooo============
This poem is inspired from Rabindranath Tagore's saying "The soil in return for her service keeps the tree tied to her. The sky asks nothing and leaves it free."
=============000==============