ಆಧ್ಯಾತ್ಮಿಕ ಚಿಂತನೆ
ಬದುಕುತಿರಲು ಓ ಮಾನವ,
ಈ ನಶ್ವರ ದೇಹವ ನಂಬಿ
ಜೋಕೆ ತುಳುಕಿ ಹೋದೀತು
ಪಾಪದ ಕೊಡವು ತುಂಬಿ
ಎಂಟು ದಿಸೆಯಲ್ಲೂ ಕಟ್ಟಿಹಾಕಿರಲು
ನಮ್ಮನು ಈ ಲೌಕಿಕ ಬಂಧನ
ವೈರಾಗ್ಯ ಪಡೆಯಲು ಹೋಗುವುದು ಎತ್ತ?
ದಾರಿಯ ತೋರಿ ಕಾಪಾಡು ದೇವ
ಆಧ್ಯಾತ್ಮದ ಬೆಳಕ ಕಾಣರಿಯದ ಅಂಧನ
ನಿನ್ನೆಡೆ ಬಾಗಿರಲಿ ಸದಾ ನನ್ನ ಚಿತ್ತ.
ಕರುಣಿಸಿ ಒಮ್ಮೆ ಅಂತರಂಗ ಶುದ್ಧಿ
ಬಿಡಿಸು ನಾನು-ನನ್ನದೆಂಬ ಬುದ್ಧಿ
ಜೀವವಿರುವ ತನಕ ಜೀವಿಸುವೆವು
ಇನ್ನೊಂದು ಜೀವವ ತಿಂದು
ಮಾಡಿದ ಕರ್ಮಗಳು ತೀರಿದವೆಂದು
ಬಗೆವರು ಗಂಗಾನದಿಯಲ್ಲಿ ಮಿಂದು
ಮುಂದೂಡುತ್ತಿದ್ದರೆ ನಾಳೆ, ನಾಳೆಯೆಂದು
ಆಧ್ಯಾತ್ಮದ ಪಾಠ ಕಲಿಯುವುದು ಎಂದು?
Dont Miss this very meaningful song sung by Dr. Rajkumar